ಅಫ್ಘಾನಿಸ್ತಾನದ ಶಿಯಾ ಮಸೀದಿ ಮೇಲೆ ಆತ್ಮಾಹುತಿ ದಾಳಿಗೆ 30 ಬಲಿ

Subscribe to Oneindia Kannada

ಹೆರಾತ್, ಆಗಸ್ಟ್ 2: ಇರಾನ್ ಗಡಿಗೆ ಹೊಂದಿಕೊಂಡ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಮಸೀದಿಯೊಂದರಲ್ಲಿ ಮಂಗಳವಾರ ಆತ್ಮಾಹುತಿ ಬಾಂಬ್ ಸ್ಪೋಟಿಸಿದೆ. ಪರಿಣಾಮ 30 ಜನರು ಸಾವನ್ನಪ್ಪಿದ್ದು 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಪ್ರಾಂತ್ಯದ ರಾಜಧಾನಿ ಹೆರಾತ್ ನ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಶಿಯಾ ಸಮುದಾಯಕ್ಕೆ ಸೇರಿದ ಮಸೀದಿ ಇದಾಗಿದ್ದು ರಾತ್ರಿ 8 ಗಂಟೆ ಸುಮಾರಿಗೆ ಬಾಂಬ್ ಸ್ಪೋಟ ಸಂಭವಿಸಿದೆ.

 Suicide bomber killed 30 in a Shia mosque at Herat city, Afghanistan

ಆತ್ಮಾಹುತಿ ಬಾಂಬ್ ದಾಳಿ ವೇಳೆ ಮಸೀದಿಯಲ್ಲಿ 30ಕ್ಕೂ ಹೆಚ್ಚು ಜನರು ಪ್ರಾರ್ಥನೆ ನಡೆಸುತ್ತಿದ್ದರು. ಐಸಿಸ್ ಉಗ್ರ ಸಂಘಟನೆ ಈ ಕೃತ್ಯ ನಡೆಸಿರಬಹುದು ಎನ್ನಲಾಗಿದೆ.

Afghanistan batsman Shafiqullah Shafaq hits 214 in 71 balls

ಅಫ್ಘಾನಿಸ್ತಾನದಲ್ಲಿ ಶಿಯಾ ಅಲ್ಪಸಂಖ್ಯಾತ ಸಮುದಾಯವಾಗಿದ್ದು ನಿರಂತರವಾಗಿ ಐಸಿಸ್ ಪ್ರತಿರೋಧವನ್ನು ಎದುರಿಸುತ್ತಾ ಬಂದಿದೆ. ಮಂಗಳವಾರದ ಘಟನೆ ಇದಕ್ಕೆ ಇತ್ತೀಚಿನ ಉದಾಹರಣೆ ಅಷ್ಟೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A suicide attack at a packed Shia mosque in the western Afghanistan province of Herat has killed at least 30 worshippers and injured 63 more.
Please Wait while comments are loading...