Russia Ukraine: ಉಕ್ರೇನ್ ಅಧ್ಯಕ್ಷನಿಗೆ ರಷ್ಯಾ ಸೇನೆಯಿಂದ ಮುಹೂರ್ತ?
ಮಾಸ್ಕೋ: ಅದ್ಯಾವ ಘಳಿಗೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಶುರುವಾಯ್ತೋ ಗೊತ್ತಿಲ್ಲ, ಇಂದಿಗೆ 446ನೇ ದಿನ ಪೂರೈಸಿದೆ ಭೀಕರ ಕಾಳಗ. ಈ ನಡುವೆ ಪುಟಿನ್ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆಸಿದ ತಪ್ಪಿಗೆ ಈಗ ಉಕ್ರೇನ್ ಅಧ್ಯಕ್ಷರನ್ನೇ ಉಡಾಯಿಸಲು ರಷ್ಯಾ ಪಡೆಗಳು ಸ್ಕೆಚ್ ಹಾಕಿವೆ ಎಂಬ ಆರೋಪ ಕೇಳಿಬಂದಿದೆ. ಇದು ಸಾಧ್ಯಾನಾ? ಅಂದ್ರಾ, ಹಾಗಿದ್ರೆ ಅದು ಹೇಗೆ ಸಾಧ್ಯ ಎಂಬುದನ್ನ ಇಲ್ಲಿ ತಿಳಿಯೋಣ.
ರಷ್ಯಾ ಮಿಲಿಟರಿ ವಿಚಾರದಲ್ಲಿ ಎಷ್ಟು ಗಟ್ಟಿಮುಟ್ಟು ಎಂಬುದು ಎಲ್ಲರಿಗೂ ಗೊತ್ತು. ಮನಸ್ಸು ಮಾಡಿದರೆ ಈ ಕ್ಷಣವೇ ಉಕ್ರೇನ್ ಉಡೀಸ್ ಆಗುತ್ತೆ. ಆದರೂ ಉಕ್ರೇನ್ ಯುದ್ಧದಲ್ಲಿ (Russia Ukraine War) ಹಿನ್ನಡೆ ಆದ ರೀತಿ ನಟಿಸುತ್ತಾ, ಪುಟಿನ್ ದೊಡ್ಡದಾಗಿ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದರ ನಡುವೆ ಉಕ್ರೇನ್ ಅಧ್ಯಕ್ಷ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲ ಪಡೆದು, ರಷ್ಯಾ ಮೇಲೆ ದಾಳಿ ಮಾಡಿ ಗೆಲ್ಲಬಲ್ಲೆ ಎಂಬ ಭ್ರಮೆ ತುಂಬಿಕೊಂಡ ಆರೋಪವಿದೆ. ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದ ನಂತರ ಉಕ್ರೇನ್ ಅಧ್ಯಕ್ಷರ ಜೀವಕ್ಕೆ ಕಂಟಕ ಇದೆಯಂತೆ.

ಅಮೆರಿಕದ ಕುತಂತ್ರ ಇದೆಯಾ?
ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಇರಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ರು ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾನ ನೀಡಿದೆ. ಈ ನಡುವೆ ರಷ್ಯಾ ಅಧ್ಯಕ್ಷರ ಮನೆ ಮೇಲೆ ನಡೆದ ದಾಳಿಯಲ್ಲೂ ಅಮೆರಿಕ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ.
ಉಕ್ರೇನ್ ಅಧ್ಯಕ್ಷನಿಗೆ ಮುಹೂರ್ತ?
ಹೌದು, ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬ ಆರೋಪದ ನಡುವೆ, ರಷ್ಯಾ ಪಡೆಗಳು ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಮೂಲಕ ಝೆಲೆನ್‌ಸ್ಕಿಯನ್ನ ಟಾರ್ಗೆಟ್ ಮಾಡಲು ಮುಂದಾಗಿವೆ ಎಂದು ಆರೋಪಿಸಲಾಗಿದ್ದು, ಇದು ಸಂಚಲನ ಸೃಷ್ಟಿಸಿದೆ.
ನೇರವಾಗಿ ಉಕ್ರೇನ್ ಬೆನ್ನಿಗೆ ಅಮೆರಿಕ!
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಸೇರಿ ನ್ಯಾಟೋ ಪಡೆಗಳು ನೀಡುತ್ತಿರುವ ಸಹಾಯವೇ ಉಕ್ರೇನ್ ಸೇನೆಯ ಕೃತ್ಯಗಳಿಗೆ ಕಾರಣ ಎಂಬ ಆರೋಪ ಇದೆ. ಇಷ್ಟುದಿನ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ ಈ ರಾಷ್ಟ್ರಗಳು, ನೇರವಾಗಿ ಉಕ್ರೇನ್ ನೆರವಿಗೆ ನಿಂತಿವೆ. ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ಸದ್ಯ ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ನೆರವು ನೀಡುತ್ತಿವೆ. ಈ ಮೂಲಕ ರಷ್ಯಾ ಮುಗಿಸಲು ಪ್ರಯತ್ನಿಸುತ್ತಿವೆ, ಆದರೆ ಅದು ಕನಸಿನ ಮಾತು ಇದರಿಂದ ಅಮೆರಿಕ & ಪಟಾಲಂ ತೊಂದರೆ ಅನುಭವಿಸುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಷ್ಯಾ ಕಮಾಂಡರ್‌ಗಳ ಹತ್ಯೆ?
ಬಖ್‌ಮತ್ ಉಕ್ರೇನ್‌ಗೆ ಸೇರಿದ್ದು, ಆದ್ರ ಯುದ್ಧ ಆರಂಭವಾದ ನಂತರ ರಷ್ಯಾ ಬಖ್‌ಮತ್ ನಗರವನ್ನ ಆಕ್ರಮಿಸಿದೆ. ಹೀಗಾಗಿ ಬಖ್‌ಮತ್ ಸಿಟಿ ಮೇಲೆ ವಿನಾಶಕಾರಿ ರಂಜಕ ಬಾಂಬ್ ಎಸೆದಿದೆ ಉಕ್ರೇನ್ ಎಂಬ ಗಂಭೀರ ಆರೋಪವನ್ನ ರಷ್ಯಾ ಇತ್ತೀಚೆಗೆ ಮಾಡಿತ್ತು. ಈ ಮಧ್ಯೆ ರಷ್ಯಾ ಮಿಲಿಟರಿಯ ಇಬ್ಬರು ಕಮಾಂಡರ್‌ಗಳನ್ನ ಉಕ್ರೇನ್ ಕೊಲೆ ಮಾಡಿದೆ ಎಂದು ರಷ್ಯಾ ಸೇನೆ ಆರೋಪಿಸಿದೆ. ಇದು ರಷ್ಯಾ ಅಧ್ಯಕ್ಷರ ಕೆಂಡದಂಥ ಕೋಪಕ್ಕೆ ಕಾರಣವಾಗಿದ್ದು ಮುಂದೆ ಏನಾಗಲಿದೆಯೋ? ಗೊತ್ತಿಲ್ಲ.
ಒಟ್ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೀವಕ್ಕೆ ಆಪತ್ತು ಎದುರಾಗಿದೆ ಎಂಬ ವಿಚಾರ ಸದ್ದು ಮಾಡುತ್ತಿದೆ. ಆದರೆ ರಷ್ಯಾ ಸೇನೆ ಮಾತ್ರ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಅತ್ತ ಉಕ್ರೇನ್ ಅಧ್ಯಕ್ಷ ತನ್ನ ತವರು ದೇಶದಲ್ಲಿ ಇರುವುದಕ್ಕಿಂತ ಹೆಚ್ಚಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳ ನೆಲದಲ್ಲೇ ದಿನದೂಡುತ್ತಿದ್ದಾರೆ. ಈ ನಡುವೆ ಅಮೆರಿಕದ ಸಹಾಯದಿಂದ ರಷ್ಯಾ ಮೇಲೆ ಉಕ್ರೇನ್ ಕೌಂಟರ್ ಅಟ್ಯಾಕ್ ಶುರುಮಾಡಿದೆ.












Click it and Unblock the Notifications