ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಇನ್ನಿಬ್ಬರು ಕನ್ನಡಿಗರು ಸಾವು

ಕೋಲಂಬೋ, ಏಪ್ರಿಲ್ 22: ಶ್ರೀಲಂಕಾದ ಕೋಲಂಬೋದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇನ್ನಿಬ್ಬರು ಕನ್ನಡಿಗರು ಬಲಿಯಾಗಿದ್ದಾರೆ.

ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 290ಕ್ಕೆ ಏರಿದ್ದು, ಘಟನೆಯಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.

ಕೆ.ಜಿ. ಹನುಮಂತರಾಯಪ್ಪ ಮತ್ತು ಎಂ. ರಂಗಪ್ಪ ಬಾಂಬ್ ಸ್ಫೋಟದಲ್ಲಿ ಬಲಿಯಾದ ಕನ್ನಡಿಗರು. ಇವರಿಬ್ಬರೂ ನೆಲಮಂಗಲ ತಾಲ್ಲೂಕಿನವರು ಎನ್ನಲಾಗಿದೆ. ಮಂಗಳೂರಿನ ಸುರತ್ಕಲ್ ಮೂಲದ ರಜೀನಾ ಖಾದರ್ ಕುಕ್ಕಡೆ ಶ್ಯಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ದಾಳಿಯಲ್ಲಿ ಬಲಿಯಾಗಿದ್ದರು.

sri lanka colombo bomb blast 2 more karnataka person death

'ನಿನ್ನೆ ನಡೆದ ದಾಳಿಗಳಲ್ಲಿ ಇಬ್ಬರು ಮೃತಪಟ್ಟಿರುವುದರ ಬಗ್ಗೆ ಖಚಿತಪಡಿಸಲು ದುಃಖಿಸುತ್ತೇವೆ' ಎಂದು ಕೆ.ಜಿ. ಹನುಮಂತರಾಯಪ್ಪ ಮತ್ತು ಎಂ. ರಂಗಪ್ಪ ಅವರ ಹೆಸರನ್ನು ಶ್ರೀಲಂಕಾದಲ್ಲಿ ಭಾರತೀಯ ರಾಹಭಾರ ಕಚೇರಿ ಟ್ವೀಟ್ ಮಾಡಿತ್ತು. ಅದನ್ನು ಸಚಿವೆ ಸುಷ್ಮಾ ಸ್ವರಾಜ್ ರೀಟ್ವೀಟ್ ಮಾಡಿದ್ದಾರೆ.

ಇದರಿಂದ ಬಾಂಬ್ ಸ್ಫೋಟದಲ್ಲಿ ಬಲಿಯಾದ ಭಾರತೀಯರ ಸಂಖ್ಯೆ ಆರಕ್ಕೆ ಏರಿದೆ. ಲಕ್ಷ್ಮಿ, ನಾರಾಯಣ್ ಚಂದ್ರಶೇಖರ್ ಮತ್ತು ರಮೇಶ್ ಎಂಬುವವರು ದಾಳಿಯಲ್ಲಿ ಮೃತಪಟ್ಟಿರುವುದಾಗಿ ಸುಷ್ಮಾ ಸ್ವರಾಜ್ ಅವರು ಭಾನುವಾರ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+