ಸ್ಪೇನ್: ಮಹಿಳೆಯರಿಗೆ ಮೂರು ದಿನಗಳ ಋತುಚಕ್ರದ ರಜೆ
ನವದೆಹಲಿ, ಮೇ 11: ಮಹಿಳೆಯರಿಗೆ ಮೂರು ದಿನಗಳ ಋತುಚಕ್ರದ ರಜೆ ನೀಡಲು ಸ್ಪೇನ್ ಸರಕಾರ ತೀರ್ಮಾನಿಸಿದೆ. ಈ ಮೂಲಕ ಋತುಚಕ್ರದ ರಜೆ ನೀಡಿದ ಯೂರೋಪ್‌ನ ಮೊದಲ ದೇಶ ಎಂಬ ಖ್ಯಾತಿಗೆ ಸ್ಪೇನ್ ಪಾತ್ರವಾಗಲಿದೆ.
ಈ ನೂತನ ಕ್ರಮದಂತೆ ಮುಟ್ಟಿನ ಸಮಯದಲ್ಲಿ ಹೆಚ್ಚಿನ ನೋವು ಅನುಭವಿಸುವ ಸ್ಪೇನ್‌ನ ಮಹಿಳೆಯರು ತಿಂಗಳಲ್ಲಿ ಮೂರು ದಿನಗಳು ರಜೆ ಪಡೆಯಬಹುದಾಗಿದೆ. ಈ ಕುರಿತು ಮುಂದಿನ ವಾರ ಅಧಿಕೃತವಾಗಿ ಸ್ಪೇನ್ ಸರಕಾರದಿಂದ ಆದೇಶ ಹೊರಬೀಳಲಿದೆ.
ದಕ್ಷಿಣ ಕೊರಿಯಾ, ಜಪಾನ್, ಜಾಂಬಿಯಾ ಮತ್ತುಇಂಡೋನೇಶಿಯಾದಲ್ಲಿ ಈಗಾಗಲೇ ಮಹಿಳೆಯರಿಗೆ ಋತುಚಕ್ರದ ರಜೆ ನೀಡಲಾಗುತ್ತಿದೆ. "ಅನಾರೋಗ್ಯ ಸೇರಿದಂತೆ ತಾತ್ಕಾಲಿಕ ಆರೋಗ್ಯ ಸಮಸ್ಯೆ ಇರುವವರಿಗೆ ರಜೆ ನೀಡಲಾಗುತ್ತದೆ. ಇದೇ ಕ್ರಮವು ಋತುಚಕ್ರದ ಸಮಸ್ಯೆಗೆ ಅನ್ವಯವಾಗಬೇಕು. ಮುಟ್ಟಿನ ಸಮಯದಲ್ಲಿ ತೀವ್ರ ನೋವು ಅನುಭವಿಸುವ ಮಹಿಳೆಯರು ಮನೆಯಲ್ಲಿ ಉಳಿಯಲು ಅನುಮತಿ ನೀಡಬೇಕಿದೆ. ಹೀಗಾಗಿ ಋತುಚಕ್ರದ ರಜೆ ನೀಡಲು ತೀರ್ಮಾನಿಸಲಾಗಿದೆ,'' ಎಂದು ಸ್ಪೇನ್ ಸರಕಾರದ ಕಾರ್ಯದರ್ಶಿ ಏಂಜೆಲಾ ರೋಡ್ರಿಗಸ್ ತಿಳಿಸಿದ್ದಾರೆ.

"25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.20ರಷ್ಟು ಮಹಿಳೆಯರು ಮುಟ್ಟಿನ ಸಮಯದ ನೋವಿನಿಂದಾಗಿ ಶಾಲೆ, ಕಾಲೇಜು ಅಥವಾ ಕೆಲಸಕ್ಕೆ ಹೋಗಲಾಗದೇ ತಪ್ಪಿಸಿಕೊಂಡಿದ್ದಾರೆ. ಇದರ ಜತೆಗೆ ಶೇ.40ರಷ್ಟುಮಹಿಳೆಯರು ಮುಟ್ಟಿನ ತೀವ್ರ ನೋವಿನ ಪರಿಣಾಮ ಕೆಲಸದಲ್ಲಿ ಸರಿಯಾಗಿ ಗಮನಹರಿಸಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ,'' ಎಂದು ಬ್ರಿಟೀಶ್ ಮೆಡಿಕಲ್ ಜರ್ನಲ್ ಅಧ್ಯಯನ ವರದಿ ತಿಳಿಸಿದೆ.
2016ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು, "ಮುಟ್ಟಿನ ನೋವು ಹೃದಯಾಘಾತದ ನೋವಿನಷ್ಟೇ ತೀವ್ರವಾಗಿರುತ್ತದೆ,'' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ತಿಂಗಳು ಸ್ಪೇನ್ ಸರಕಾರ ನೂತನ ಕಾನೂನು ಒಂದನ್ನು ಜಾರಿಗೊಳಿಸಿದ್ದು, ಅದರ ಪ್ರಕಾರ ಗರ್ಭವನ್ನು ಧರಿಸದೇ ಇರಲು ಮಹಿಳೆ ತೀರ್ಮಾನಿಸಿದಾಗ, ಇದಕ್ಕೆ ವಿರುದ್ಧವಾಗಿ ಅವಳನ್ನು ಬಲವಂತಪಡಿಸಿದರೆ, ಕಿರುಕುಳ ನೀಡಿದರೆ, ಅಂಥ ವ್ಯಕ್ತಿಗೆ ಮೂರರಿಂದ ಒಂದು ವರ್ಷಗಳ ಕಾಲು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಜತೆಗೆ ಆ ವ್ಯಕ್ತಿಗೆ ಸಾಮಾಜಿಕ ಕಾರ್ಯ ಮಾಡುವಂತೆ ನ್ಯಾಯಾಲಯ ಸೂಚಿಸಬಹುದಾದ ಕಾನೂನನ್ನುಜಾರಿಗೊಳಿಸಲಾಗಿದೆ.
-
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications