ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಣಭೇದದ ವಿರುದ್ಧದ ಹೋರಾಟಗಾರ್ತಿ ವಿನ್ನಿ ಮಂಡೇಲಾ ನಿಧನ

|
Google Oneindia Kannada News

ವರ್ಣಭೇದದ ವಿರುದ್ಧದ ಹೋರಾಟಗಾರ್ತಿ ಹಾಗೂ ನೆಲ್ಸನ್ ಮಂಡೇಲಾರ ಪತ್ನಿ ವಿನ್ನಿ ಮದಿಕಿಜೆಲಾ ಮಂಡೇಲಾ ಎಂಬತ್ತೊಂದನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಆಪ್ತ ಸಹಾಯಕರು ನಿಧನ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. "ದೀರ್ಘಾವಧಿಯ ಅನಾರೋಗ್ಯದ ನಂತರ ಆಕೆ ಮೃತಪಟ್ಟಿದ್ದಾರೆ" ಎಂದು ನೆಲ್ಸನ್ ಮಂಡೇಲಾ ಕುಟುಂಬದ ವಕ್ತಾರರಾದ ವಿಕ್ಟರ್ ಡ್ಲಾಮಿನಿ ತಿಳಿಸಿದ್ದಾರೆ.

ವರ್ಣಬೇಧ ನೀತಿ ಮೆಟ್ಟಿ ನಿಂತ ಮಂಡೇಲಗೆ ಟ್ವೀಟ್ ನಮನವರ್ಣಬೇಧ ನೀತಿ ಮೆಟ್ಟಿ ನಿಂತ ಮಂಡೇಲಗೆ ಟ್ವೀಟ್ ನಮನ

ಮದಿಕಿಜೆಲಾ ಮಂಡೇಲಾ 1956ರಲ್ಲಿ ಅಂದರೆ ವರ್ಣಭೇದದ ವಿರುದ್ಧದ ಹೋರಾಟ ಮಾಡುತ್ತಾ 1962ರಲ್ಲಿ ಜೈಲು ಸೇರಿದ ಆರು ವರ್ಷದ ಮುಂಚೆ ನೆಲ್ಸನ್ ಮಂಡೇಲಾರನ್ನು ಮದುವೆ ಆಗಿದ್ದರು. ಇಪ್ಪತ್ತೇಳು ವರ್ಷ ನೆಲ್ಸನ್ ಮಂಡೇಲಾ ಜೈಲು ಶಿಕ್ಷೆ ಅನುಭವಿಸುವ ಅವಧಿಯಲ್ಲಿ ಅವರ ಬಿಡುಗಡೆಗಾಗಿ ಹಾಗೂ ದಕ್ಷಿಣ ಆಫ್ರಿಕಾದ ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ಮದಿಕಿಜೆಲಾ ಹೋರಾಟ ನಡೆಸಿದ್ದರು.

Winnie Mandela

1990ರಲ್ಲಿ ನೆಲ್ಸನ್ ಮಂಡೇಲಾ ಬಿಡುಗಡೆ ಆದಾಗ ಜೈಲಿನಿಂದ ಹೊರಬಂದಿದ್ದು ಇದೇ ಮದಿಕಿಜೆಲಾ ಅವರ ಕೈ ಹಿಡಿದುಕೊಂಡು. ಅದಾಗಿ ಎರಡು ವರ್ಷಕ್ಕೆ ಅವರಿಬ್ಬರು ಬೇರೆಯಾದರು. 1996ರಲ್ಲಿ ವಿಚ್ಛೇದನವೂ ಆಯಿತು. ವಿನ್ನಿ ಜನಿಸಿದ್ದು ಸೆಪ್ಟೆಂಬರ್ 26, 1936ರಲ್ಲಿ. ಈಗ ಈಸ್ಟರ್ನ್ ಕೇಪ್ ನಲ್ಲಿರುವ ಒಂದು ಹಳ್ಳಿಯಲ್ಲಿ.

ಆಗಿನ ಕಾಲಘಟ್ಟದಲ್ಲಿ ಅಪರೂಪಕ್ಕೆ ಎಂಬಂತೆ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಕಪ್ಪು ಮಹಿಳೆ ವಿನ್ನಿ. ಕಪ್ಪು ವರ್ಣೀಯರ ಪರ ಹೋರಾಟದಲ್ಲಿ ಆಕೆಯ ಸ್ಥಾನ ಮಹತ್ವದ್ದು. ಆದರೆ ಆಕೆಯನ್ನು ಕೆಲವು ವಿವಾದಗಳು ಸುತ್ತುವರಿದಿದ್ದವು.

English summary
Winnie Madikizela Mandela, the South African anti-apartheid campaigner and wife to Nelson Mandela has died aged 81, her personal assistant confirms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X