• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಂತೆ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕು

|
Google Oneindia Kannada News

ದೆಹಲಿ, ಜುಲೈ 25: ಶನಿವಾರದ ವರದಿಯಂತೆ ಭಾರತದಲ್ಲಿ ಹೊಸದಾಗಿ 48,916 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ಇದರೊಂದಿಗೆ, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,36,861ಕ್ಕೆ ಏರಿಕೆಯಾಗಿದೆ.

   ಯೋಧನ ಪತ್ನಿಗೆ ಸರ್ಕಾರಿ ಕೆಲಸ, 5 ಕೋಟಿ ದುಡ್ಡು, ಸೈಟು | Oneindia Kannada

   ಪ್ರಸ್ತುತ ಅಮೆರಿಕ, ಬ್ರೆಜಿಲ್ ಹಾಗೂ ಭಾರತದಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಹೆಚ್ಚಿದೆ. ಇದೀಗ, ಈ ಮೂರು ರಾಷ್ಟ್ರಗಳನ್ನು ದಕ್ಷಿಣ ಆಫ್ರಿಕಾ ಅನುಕರಣೆ ಮಾಡುತ್ತಿದೆ.

   ಭಾರತದಲ್ಲಿ ಒಂದೇ ದಿನ 48,000 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಭಾರತದಲ್ಲಿ ಒಂದೇ ದಿನ 48,000 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆ

   ಸೌತ್ ಆಫ್ರಿಕಾದಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಇದು ಸಹಜವಾಗಿ ಆಫ್ರಿಕಾ ಮಂದಿಗೆ ಆತಂಕ ಹೆಚ್ಚಿಸಿದೆ. ಒಂದು ವೇಳೆ ಆಫ್ರಿಕಾದಲ್ಲಿ ಸೋಂಕು ವೀಪರಿತವಾದರೆ ಅಲ್ಲಿನ ಪರಿಸ್ಥಿತಿ ಕಷ್ಟ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

   ಅಂದ್ಹಾಗೆ, ಆಫ್ರಿಕಾದಲ್ಲಿ ನಿನ್ನೆ 13,944 ಮಂದಿಗೆ ಕೊವಿಡ್ ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 421,996ಕ್ಕೆ ಏರಿದೆ. ಯುಕೆ, ಇಟಲಿ, ಫ್ರಾನ್ಸ್, ಸ್ಪೇನ್, ಮೆಕ್ಸಿಕೋ, ಪೇರು ಅಂತಹ ದೇಶಗಳನ್ನು ಹಿಂದಿಕ್ಕಿರುವ ಆಫ್ರಿಕಾ ಅತಿ ಹೆಚ್ಚು ಸೋಂಕು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

   ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ 6,343 ಜನರು ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. 245,771 ಮಂದಿ ಗುಣಮುಖರಾಗಿದ್ದಾರೆ. ಇನ್ನು 169,882 ಕೇಸ್ ಸಕ್ರಿಯವಾಗಿದೆ.

   English summary
   South africa reports 13,944 new coronavirus cases yesterday, now total tally rise to 421,996.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X