Donald Trump: ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ 2000 ಕೋಟಿ ರೂಪಾಯಿಗೂ ಹೆಚ್ಚು ಹಣ ಸುರಿದ ಮಸ್ಕ್?
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋಲುವ ಭಯ ಆವರಿಸಿತ್ತು. 2024ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ ಅನ್ನೋ ವಿಚಾರ ಯಾರೂ ನಂಬಿರಲಿಲ್ಲ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಸ್ಪರ್ಧೆ ಮಾಡಿದ್ದರು. ಅಮೆರಿಕದಲ್ಲಿ ಹಾಲಿ ಉಪಾಧ್ಯಕ್ಷೆ ಕೂಡ ಆಗಿರುವ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೆ ಆಗುವುದು ಗ್ಯಾರಂಟಿ ಎನ್ನಲಾಗಿತ್ತು. ಈ ಸಮಯದಲ್ಲೇ ನೋಡಿ ಡೊನಾಲ್ಡ್ ಟ್ರಂಪ್ ಪರ ಸುನಾಮಿ ರೀತಿ ಅಲೆ ಎಬ್ಬಿಸಿದ್ದು ಎಲಾನ್ ಮಸ್ಕ್!
ಹೌದು, ಡೊನಾಲ್ಡ್ ಟ್ರಂಪ್ ಸೋಲಿನ ಸುಳಿಗೆ ಸಿಲುಕಿ ನರಳುತ್ತಿದ್ದ ಸಮಯದಲ್ಲಿ ಸ್ಪೇಸ್ ಎಕ್ಸ್ ಓನರ್ ಎಲಾನ್ ಮಸ್ಕ್ ಎಂಟ್ರಿ ಆಗಿತ್ತು. ಹೀಗೆ ಎಂಟ್ರಿ ಕೊಟ್ಟಿದ್ದ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಬೇಕಾದ ಎಲ್ಲಾ ರೀತಿಯ ಮ್ಯಾಜಿಕ್ ಮಾಡಿಬಿಟ್ಟರು. ಹೀಗೆ ನೋಡ ನೋಡುತ್ತಲೇ ದುಡ್ಡಿನ ಹೊಳೆ ಹರಿಸಿ, ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲ್ಲುವಲ್ಲಿ ಎಲಾನ್ ಮಸ್ಕ್ ಭಾರಿ ದೊಡ್ಡ ಪರಿಣಾಮ ಬೀರಿದ್ದರು.

2000 ಕೋಟಿ ರೂಪಾಯಿ ಹಣ ಖರ್ಚು?
ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಲಕ್ಷಾಂತರ ಕೋಟಿ ರೂಪಾಯಿ ಆಸ್ತಿಯ ಒಡೆಯ ಕೂಡ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲ್ಲಲು ತಮ್ಮ ಬಳಿ ಇರುವ ಸಾಕಷ್ಟು ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡಿದ್ದ ಮಸ್ಕ್ ಅವರು, ಡೊನಾಲ್ಡ್ ಟ್ರಂಪ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು.
ಈ ರೀತಿ ಡೊನಾಲ್ಡ್ ಟ್ರಂಪ್ ಅವರು ಎಲಾನ್ ಮಸ್ಕ್ ಬೆಂಬಲ ಪಡೆದು ಗೆದ್ದು ಬೀಗಿದ್ದರು. ಇದೀಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ ಟ್ರಂಪ್ ಗೆಲುವಿಗೆ, ಎಲಾನ್ ಮಸ್ಕ್ ಸುಮಾರು 2000 ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ಭಾರಿ ದೊಡ್ಡ ಸದ್ದು ಮಾಡುತ್ತಿದೆ ಈ ಸುದ್ದಿ.












Click it and Unblock the Notifications