ಅಮೆರಿಕದ LGBTQ ನೈಟ್ ಕ್ಲಬ್‌ನಲ್ಲಿ ಗುಂಡಿನ ದಾಳಿ, 5 ಮಂದಿ ಸಾವು

ವಾಷಿಂಗ್‌ಟನ್‌, ನವೆಂಬರ್‌ 20: ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿರುವ ಎಲ್‌ಜಿಬಿಟಿಕ್ಯು ನೈಟ್‌ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಸಾವಿಗೀಡಾಗಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಲಬ್ ಕ್ಯೂ ಎಂಬ ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿ ನಡೆಯುವ ಬಗ್ಗೆ ಶನಿವಾರ ಮಧ್ಯರಾತ್ರಿಗಿಂತ (11:57 p.m) ತುಸು ಮುನ್ನ ಪೊಲೀಸರಿಗೆ ಮುಂಚೆಯೇ ಫೋನ್ ಕರೆ ಬಂದಿತ್ತು ಎಂದು ಕೊಲೊರಾಡೋ ಸ್ಪ್ರಿಂಗ್ಸ್ ಲೆಫ್ಟಿನೆಂಟ್ ಪಮೇಲಾ ಕ್ಯಾಸ್ಟ್ರೋ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಮೊದಲು ಕರೆ ಬಂದಿತ್ತು ಎಂದು ಪೊಲೀಸರು ಹೇಳಿರುವ ಕ್ಲಬ್ ಕ್ಯೂ ಈ ಪ್ರಕರಣವನ್ನು ದ್ವೇಷದ ದಾಳಿ ಎಂದು ತಿಳಿಸಿದೆ.

ಸ್ಥಳೀಯ ಪೊಲೀಸ್ ವಕ್ತಾರ ಲೆಫ್ಟಿನೆಂಟ್ ಪಮೇಲಾ ಕ್ಯಾಸ್ಟ್ರೋ ದಾಳಿ ಮಾಡಿದ ವ್ಯಕ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಅವರು ತನಿಖೆಯಲ್ಲಿ ತಮ್ಗೆ ಎಫ್‌ಐ ಸಹಾಯ ಮಾಡುತ್ತಿದೆ ಎಂದು ಹೇಳಿದರು.

Shooting attack in American LGBTQ night club, 5 people died

ದಾಳಿ ಮಾಡಿದ ಬಂದೂಕುಧಾರಿಯನ್ನು ನಿಗ್ರಹಿಸಿದ ಮತ್ತು ಈ ದ್ವೇಷದ ದಾಳಿಯನ್ನು ಕೊನೆಗೊಳಿಸಿದ ಗ್ರಾಹಕರ ತ್ವರಿತ ಪ್ರತಿಕ್ರಿಯೆಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕ್ಲಬ್ ಕ್ಯೂ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದೆ. ಭಾನುವಾರದಂದು ಟ್ರಾನ್ಸ್‌ಜೆಂಡರ್ಸ್‌ ಸ್ಮರಣಾರ್ಥ ದಿನವನ್ನು ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಮ್ಮ ಎಲ್‌ಜಿಬಿಟಿಕ್ಯೂ ಸಮುದಾಯದ ಮೇಲಿನ ತಿಳಿವಳಿಕೆ ಇಲ್ಲದ ಈ ದಾಳಿಯಿಂದ ಕ್ಲಬ್ ಕ್ಯೂ ಧ್ವಂಸಗೊಂಡಿದೆ ಎಂದು ಅದು ಹೇಳಿದೆ.

Shooting attack in American LGBTQ night club, 5 people died

ರಾಕಿ ಮೌಂಟೇನ್ ಪ್ರದೇಶದ ಎಲ್‌ಜಿಬಿಟಿಕ್ಯೂ ಸಮುದಾಯ ಕೇಂದ್ರದ ಡೈರೆಕ್ಟರಿ ಪಟ್ಟಿಯ ಪ್ರಕಾರ, ಸ್ಥಳವನ್ನು ಸಲಿಂಗಕಾಮಿ ಮತ್ತು ಲೆಸ್ಬಿಯನ್ ನೈಟ್‌ಕ್ಲಬ್ ಎಂದು ವಿವರಿಸಲಾಗಿದೆ. ಇದು ಕ್ಯಾರಿಯೋಕೆ ಮತ್ತು ಡ್ರ್ಯಾಗ್ ಶೋಗಳನ್ನು ಒಳಗೊಂಡಂತೆ ಥೀಮ್ ನೈಟ್ ಗಳನ್ನು ಆಯೋಜಿಸುತ್ತದೆ.

ಗುಂಡಿನ ದಾಳಿಯ ಮಾಹಿತಿ ಹಾಗೂ ತನಿಖೆಗೆ ಪೊಲೀಸ್ ಅಧಿಕಾರಿಗಳು ಕ್ಲಬ್‌ಗೆ ಪ್ರವೇಶಿಸಿದ್ದು ಒಳಗಿರುವ ದಾಳಿ ಮಾಡಿದ ವ್ಯಕ್ತಿ ಎಂದು ಗುರುತಿಸಲ್ಪಟ್ಟ ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಿದರು ಎಂದು ಕ್ಯಾಸ್ಟ್ರೋ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+