ಭಾರತದ ಲೋಕಸಭೆ ಚುನಾವಣೆಗೂ ಮೊದಲು ಪ್ರಧಾನಿ ಮೋದಿಗೆ ಶುಭವಾಗಲಿ ಎಂದು ಹಾರೈಸಿದ ರಷ್ಯಾ ಅಧ್ಯಕ್ಷ ಪುಟಿನ್!
ಭಾರತ & ರಷ್ಯಾ ನಡುವೆ ಅವಿನಾಭಾವ ಸಂಬಂಧ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ, ಜಗತ್ತಿನಲ್ಲಿ ಮೊದಲು ಸಹಾಯಕ್ಕೆ ಬಂದ ಮೊದಲ ದೇಶ ಅದು ರಷ್ಯಾ. ಅದ್ರಲ್ಲೂ ಈಗಿನ ಕಾಲಘಟ್ಟದಲ್ಲಿ ರಷ್ಯಾ ಪಾಲಿಗೆ ಭಾರತ ಆಪದ್ಬಾಂಧವ. ಅಮೆರಿಕ ಸೇರಿ, ಜಗತ್ತಿನ ಹಲವು ದೇಶಗಳು ರಷ್ಯಾ ವಿರುದ್ಧ ತಿರುಗಿ ಬಿದ್ದ ಬಳಿಕ ಭಾರತವೇ ಮುಂದೆ ಬಂದು ರಷ್ಯಾಗೆ ಸಹಾಯ ಮಾಡುತ್ತಿದೆ. ಹೀಗಿದ್ದಾಗ ರಷ್ಯಾ ಅಧ್ಯಕ್ಷರು ಮಹತ್ವದ ಹೇಳಿಕೆ ನೀಡಿದ್ದಾರೆ.
ಇದೀಗ ರಷ್ಯಾ ಪ್ರವಾಸದಲ್ಲಿ ಇರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜೊತೆಯಲ್ಲಿ ಪುಟಿನ್ ಮಹತ್ವದ ಚರ್ಚೆಯನ್ನ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ, ಕ್ರೆಮ್ಲಿನ್‌ನ ಕಚೇರಿಯಲ್ಲಿ ಮಾತುಕತೆ ನಡೆದಿದೆ. ಪುಟಿನ್ ಮಾತನಾಡಿ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದ್ದಾರೆ. ಅಲ್ಲದೆ ಜಾಗತಿಕ ಬೆಳವಣಿಗೆ ಮತ್ತು ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಲು ಮುಂದಿನ ವರ್ಷ ದೇಶಕ್ಕೆ ಬನ್ನಿ ಎಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈಗ ಆಹ್ವಾನ ನೀಡಿದ್ದಾರಂತೆ.

ರಷ್ಯಾ ಅಧ್ಯಕ್ಷರು ಏನ್ ಹೇಳಿದ್ರು?
ಅಂದಹಾಗೆ ಕೆಲವು ತಿಂಗಳಿಂದ ಪದೇ ಪದೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುತ್ತಾ, ರಷ್ಯಾ ಅಧ್ಯಕ್ಷ ಪುಟಿನ್ ಸುದ್ದಿಯಲ್ಲಿದ್ದಾರೆ. ಈಗಲೂ ಅಷ್ಟೇ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿ, ಹೆಮ್ಮೆ ವ್ಯಕ್ತಪಡಿಸಿದ್ದಾರೆ ಪುಟಿನ್. ನಮ್ಮ ಮಿತ್ರ ನರೇಂದ್ರ ಮೋದಿ ಅವರನ್ನು ರಷ್ಯಾಗೆ ಆಹ್ವಾನಿಸಲು ಖುಷಿ ಆಗುತ್ತೆ. ಹಾಗೇ ಅವರನ್ನು ರಷ್ಯಾದಲ್ಲಿ ನೋಡಲು ನನಗೂ ತುಂಬಾ ಸಂತಸವಾಗುತ್ತೆ ಎಂದಿದ್ದಾರೆ ಪುಟಿನ್.
ಪ್ರಧಾನಿ ಮೋದಿ ಭೇಟಿ ವೇಳೆ ಜಾಗತಿಕ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಬಹುದು. ಭಾರತ ರಷ್ಯಾ ದ್ವಿಪಕ್ಷೀಯ ಸಂಬಂಧದ ಬಗ್ಗೆ ಕೂಡ ಮಾತುಕತೆ ನಡೆಸಬಹುದೆಂದು ಪುಟಿನ್ ಹೇಳಿರುವುದಾಗಿ ವರದಿಯಾಗಿದೆ. ಹಾಗೇ ಇದರ ಜೊತೆ 2024 ರ ಲೋಕಸಭೆ ಚುನಾವಣೆಗೆ ಮೊದಲು ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದ್ದಾರಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.

ಭಾರತ ಇಲ್ಲದೆ ಉಸಿರೇ ಇಲ್ಲ!
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಅಮೆರಿಕ ನೂರಾರು ಕಾನೂನನ್ನ ಹೇರಿದ್ದು, ರಷ್ಯಾಗೆ ಉಸಿರು ಬಿಗಿ ಹಿಡಿದಂತಾಗಿದೆ. ಪರಿಸ್ಥಿತಿ ಹೀಗಿದ್ದಾಗ ಭಾರತದ ಸರ್ಕಾರ ರಷ್ಯಾ ನೆರವಿಗೆ ನಿಲ್ಲುತ್ತಿದೆ. ರಷ್ಯಾದ ತೈಲವನ್ನು ಭಾರಿ ಪ್ರಮಾಣದಲ್ಲಿ ಖರೀದಿ ಮಾಡಿ, ಅದು ಯುರೋಪ್‌ಗೆ ತಲುಪುವಂತೆ ಮಾಡುತ್ತಿರುವುದು ಭಾರತ. ಹೀಗಾಗಿ ಭಾರತದ ಜೊತೆ ರಷ್ಯಾ ಉತ್ತಮ ಸಂಬಂಧ ಹೊಂದಲು ನೋಡುತ್ತಿದೆ. ಹೀಗಿದ್ದಾಗಲೇ ರಷ್ಯಾ ಅಧ್ಯಕ್ಷರು, ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತುಕತೆ ನಡೆಸಲು ಇಚ್ಛಿಸಿದ್ದಾರೆ.
ಪ್ರಧಾನಿ ಮೋದಿ ಏನ್ ಹೇಳ್ತಾರೆ?
ಒಟ್ನಲ್ಲಿ ರಷ್ಯಾ ಮತ್ತು ಭಾರತದ ಸಂಬಂಧ ಈಗ ಅತ್ಯುತ್ತಮವಾಗಿದೆ. ಹೀಗಾಗಿ ಈ ಬಂಧ ಮತ್ತಷ್ಟು ಗಟ್ಟಿಯಾಗಿಸಲು ರಷ್ಯಾ ಯತ್ನಿಸುತ್ತಿದೆ. ಇದರ ಭಾಗವಾಗಿ ರಷ್ಯಾ ಅಧ್ಯಕ್ಷರು ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರು ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ? ಅಂತಾ ಕಾದು ನೋಡಬೇಕು.
ಇಷ್ಟೆಲ್ಲದರ ನಡುವೆ ಉಕ್ರೇನ್ ವಿರುದ್ಧ ರಷ್ಯಾ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿ ಶತ್ರು ನಾಶಕ್ಕೆ ಪಣತೊಟ್ಟಿದೆ. ಪರಿಸ್ಥಿತಿ ಹೀಗಿದ್ದಾಗ ರಷ್ಯಾಗೆ ಶಸ್ತ್ರಾಸ್ತ್ರ ಸೇರಿದಂತೆ ಸಾಕಷ್ಟು ವಸ್ತುಗಳ ಅಗತ್ಯತೆ ಇದೆ. ಅದರಲ್ಲೂ ರಷ್ಯಾಗೆ ಪ್ರಮುಖ ಆದಾಯದ ಮೂಲವಾದ ತೈಲ, ಅಂದ್ರೆ ಪೆಟ್ರೋಲಿಯಂ ಉತ್ಪನ್ನಗಳನ್ನ ಭಾರತವೇ ಹೆಚ್ಚಾಗಿ ಖರೀದಿ ಮಾಡುತ್ತಿದೆ. ಇದೆಲ್ಲಾ ಈಗ ಭಾರತ & ರಷ್ಯಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.












Click it and Unblock the Notifications