‘ಕೆಜಿಎಫ್’ ಗರುಡನಂತೆ ಗುಡುಗಿದ ಪುಟಿನ್: ಶತ್ರು ಪಡೆಗೆ ಮಾರಿ ಜಾತ್ರೆ?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಮ್ಮ ಕೆಪಾಸಿಟಿ ತೋರಿಸಿದ್ದಾರೆ. ಮತ್ತೊಮ್ಮೆ ರಷ್ಯಾದ ಅಧ್ಯಕ್ಷ ಸ್ಥಾನಕ್ಕೆ ಪುಟಿನ್ ಅವರು, ಯಶಸ್ವಿಯಾಗಿ ಮರು ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ಮತ್ತೊಮ್ಮೆ ಮುಂದಿನ 6 ವರ್ಷ ಕಾಲ ರಷ್ಯಾದ ಆಡಳಿತ ನಡೆಸೋದು ಪಕ್ಕಾ ಆಗಿದ್ದು, ಪುಟಿನ್ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಆದರೆ ಇದೇ ಸಮದಯಲ್ಲಿ ಪುಟಿನ್ ವಿರೋಧಿ ಬಣಕ್ಕೆ ಈಗ ಭಯ ಶುರುವಾಗಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಶತ್ರು ಪಡೆಯ ಕಾಟ ಇದೆ. ಹೀಗಾಗಿಯೇ ಪುಟಿನ್ ಅವರು ಮೈ ಎಲ್ಲಾ ಕಣ್ಣಾಗಿ ಇರುವಂತೆ ಬದುಕುತ್ತಾರೆ. ಸ್ವಲ್ಪ ಯಾಮಾರಿದರೂ ವ್ಲಾದಿಮಿರ್ ಪುಟಿನ್ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಪುಟಿನ್ ಕೂಡ ತಮ್ಮ ಶತ್ರುಗಳ ಮೇಲೆ, ಪ್ರತಿದಾಳಿ ಮಾಡಿಸುತ್ತಾರೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗಲೇ ಪುಟಿನ್ ಅವರು ಮುಂದಿನ 6 ವರ್ಷಗಳ ಕಾಲ ಮತ್ತೆ ರಷ್ಯಾದ ಆಡಳಿತ ನಡೆಸೋದು ಪಕ್ಕಾ ಆಗಿದೆ. ಇಂತಹ ಸಂದರ್ಭದಲ್ಲೇ ಮತ್ತೊಂದು ಗಂಭಿರ ಆರೋಪ ಕೂಡ ಕೇಳಿಬಂದಿದೆ.

ಪುಟಿನ್ ಶತ್ರುಗಳಿಗೆ ಶುರುವಾಯ್ತು ಭಯ!
ವ್ಲಾದಿಮಿರ್ ಪುಟಿನ್ ಅದೆಷ್ಟು ಶಕ್ತಿಶಾಲಿ ನಾಯಕರಾಗಿ ಬೆಳೆದು ನಿಂತಿದ್ದಾರೆ ಅಂದ್ರೆ, ಈಗಿನ ಪರಿಸ್ಥಿತಿ ನೋಡಿದರೆ ರಷ್ಯಾದಲ್ಲಿ ಪುಟಿನ್ ಅವರಿಗೆ ಎದುರಾಳಿಗಳು ಅನ್ನೋರೆ ಇಲ್ಲವಾಗಿದೆ. ಅದ್ರಲ್ಲೂ ಪುಟಿನ್ ಎದುರು ನಿಲ್ಲುವವರಿಗೆ ಸಂಕಷ್ಟ ಗ್ಯಾರಂಟಿ ಎಂಬ ಆರೋಪವು ಆಗಾಗ ಕೇಳಿಬರುತ್ತದೆ. ಇಂತಹ ಸಂದರ್ಭದಲ್ಲೇ ವ್ಲಾದಿಮಿರ್ ಪುಟಿನ್ ಮತ್ತೊಮ್ಮೆ ರಷ್ಯಾದಲ್ಲಿ ಈಗ ಅಧ್ಯಕ್ಷೀಯ ಚುನಾವಣೆ ಗೆದ್ದಿರುವುದು ಸಹಜವಾಗಿ ಅವರ ಶತ್ರುಗಳಿಗೆ, ಭಯ ಹುಟ್ಟುವಂತೆ ಮಾಡಿದೆ. ಹಾಗೇ ಇನ್ನೊಂದು ಕಡೆ ರಷ್ಯಾದ ಗಡಿ ಭಾಗದಲ್ಲಿ ಸಿಕ್ಕಾಪಟ್ಟೆ ಭದ್ರತೆ ಕೈಗೊಂಡಿದೆ ರಷ್ಯಾ ಸೇನೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ
ಕಳೆದ 2 ವರ್ಷಗಳಿಂದ ರಷ್ಯಾ & ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಹೀಗಾಗಿ ಇದೀಗ ವ್ಲಾದಿಮಿರ್ ಪುಟಿನ್ ಅವರ ಆಯ್ಕೆ ಸಾಕಷ್ಟು ಗಮನ ಸೆಳೆದಿದೆ. ಯಾಕಂದ್ರೆ ಉಕ್ರೇನ್ ವಿರುದ್ಧ ರಷ್ಯಾ ಗೆಲುವಿಗೆ ಪುಟಿನ್ ಅತ್ಯಗತ್ಯ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಹೀಗಿದ್ದಾಗ, ವ್ಲಾದಿಮಿರ್ ಪುಟಿನ್ ಮತ್ತೊಮ್ಮೆ ರಷ್ಯಾದ ಅಧ್ಯಕ್ಷ ಸ್ಥಾನಕ್ಕೆ ಭರ್ಜರಿಯಾಗಿ ಆಯ್ಕೆಯಾಗಿದ್ದು ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಯುದ್ಧದ ತೀವ್ರತೆ ಹೆಚ್ಚಿಸುವ ಭಯ ಕೂಡ ಕಾಡ್ತಿದೆ.
ಅಮೆರಿಕದ ಕಣ್ಣು ರಷ್ಯಾ ಮೇಲೆ?
ಈ ಜಗತ್ತಿನಲ್ಲಿ ಅಮೆರಿಕ ವಿರುದ್ಧ ಗಟ್ಟಿಯಾಗಿ ನಿಂತಿರುವ ದೇಶ ಅಂದ್ರೆ ಅದು ರಷ್ಯಾ ಮಾತ್ರ. ಈ ಕಾರಣಕ್ಕೆ ಪದೇ ಪದೇ ರಷ್ಯಾ & ಅಮೆರಿಕ ನಡುವೆ ಕಿರಿಕ್ ಕೂಡ ನಡೆಯುತ್ತದೆ. ಹೀಗೆ ಇತ್ತೀಚೆಗೆ ರಷ್ಯಾ ಚುನಾವಣೆಗೆ ಮೊದಲು ಕೂಡ ರಷ್ಯಾ & ಅಮೆರಿಕ ನಡುವೆ ಕಿರಿಕ್ ನಡೆದು ವ್ಲಾದಿಮಿರ್ ಪುಟಿನ್ ಕೂಡ ಎಚ್ಚರಿಕೆ ನೀಡಿದ್ದರು. ಅಕಸ್ಮಾತ್ ಉಕ್ರೇನ್‌ಗೆ ಸೇನೆ ಕಳುಹಿಸಿದರೆ ಅದರ ಪರಿಣಾಮ ನೆಟ್ಟಗೆ ಇರಲ್ಲ, ನಾವು ಪರಮಾಣು ಯುದ್ಧನ ನಡೆಸುತ್ತೇವೆ ಎಂದಿದ್ದರು ಇದೇ ಪುಟಿನ್. ಈ ಎಲ್ಲಾ ತಿಕ್ಕಾಟದ ನಡುವೆ ಇದೀಗ ಪುಟಿನ್ ಮತ್ತೊಮ್ಮೆ ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ.

ಹೀಗೆ ರಷ್ಯಾ & ಅಮೆರಿಕ ನಡುವಿನ ತಿಕ್ಕಾಟದಲ್ಲಿ ಉಕ್ರೇನ್ ಅಪ್ಪಚ್ಚಿ ಆಗಿದೆ. ಇನ್ನು ಅಲ್ಲಿ ಅಂದ್ರೆ ಉಕ್ರೇನ್ ಜನ ಒಂದು ತುತ್ತಿನ ಅನ್ನಕ್ಕೂ, ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಬರೋಬ್ಬರಿ 2 ವರ್ಷ ಪೂರೈಸಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧವು ಇನ್ನೆಷ್ಟು ದಿನ ಮುಂದುವರಿಯಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications