3ನೇ ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸಿದ ರಷ್ಯಾ ಅಧ್ಯಕ್ಷ ಪುಟಿನ್?

ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ವಿಚಾರವಾಗಿ ಅಮೆರಿಕ ಸೇರಿ ಹಲವು ದೇಶಗಳು ಮಧ್ಯಪ್ರವೇಶ ಮಾಡಿ ರಷ್ಯಾ ಪಿತ್ತ ನೆತ್ತಿಗೇರುವಂತೆ ಮಾಡುತ್ತಿವೆ. ಈ ಪೈಕಿ ದಡ್ಡಣ್ಣ ಖ್ಯಾತಿಯ.. ಅಲ್ಲಲ್ಲ ದೊಡ್ಡಣ್ಣ ಖ್ಯಾತಿಯ ಅಮೆರಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪಿತ್ತ ನೆತ್ತಿಗೇರುವಂತೆ ಮಾಡುತ್ತಿದೆ. ಅದ್ರಲ್ಲೂ ರಷ್ಯಾ ವಿರುದ್ಧ & ಉಕ್ರೇನ್ ಪರವಾಗಿ ಅಮೆರಿಕ ತನ್ನ ಸೇನೆಯನ್ನೇ ಅಖಾಡಕ್ಕೆ ಇಳಿಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ರಷ್ಯನ್ ಪ್ರೆಸಿಡೆಂಟ್ ಪುಟಿನ್.

ಹೌದು, ರಷ್ಯಾ ಈಗ ಕೊಟ್ಟಿರುವ ಎಚ್ಚರಿಕೆ ಹೇಗಿದೆ ಎಂದರೆ ಇನ್ನೇನು ಕೆಲವೇ ದಿನಗಳಲ್ಲಿ ಜಗತ್ತಿನಲ್ಲಿ 3ನೇ ಮಹಾಯುದ್ಧ ಶುರುವಾಗಲಿದೆ ಎನ್ನುವ ರೀತಿ ಭಯ ಸೃಷ್ಟಿಯಾಗಿದೆ. ಈ ಬಗ್ಗೆ ಪುಟಿನ್ ಏನು ಹೇಳಿದ್ದಾರೆ ಅಂದ್ರೆ, ಅಮೆರಿಕ & ಯುರೋಪ್ ರಾಷ್ಟ್ರಗಳ ವಿರುದ್ಧ ಅಣ್ವಸ್ತ್ರ ಯುದ್ಧ ನಡೆಸಲು ರಷ್ಯಾ ತಾಂತ್ರಿಕವಾಗಿ ಸಿದ್ದ ಎಂದಿದ್ದಾರೆ. ಈ ಮೂಲಕ ನ್ಯೂಕ್ಲಿಯರ್ ಅಂದ್ರೆ ಪರಮಾಣು ದಾಳಿ ಮಾಡಲು ಸಿದ್ಧ ಎಂಬ ಸಂದೇಶ ಕೊಟ್ಟಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಅಲ್ಲದೆ ರಷ್ಯಾ ತಂಟೆಗೆ ಬಂದರೆ ಇದೆಲ್ಲಾ ಚೆನ್ನಾಗಿರಲ್ಲ ಎಂಬ ಸಂದೇಶವನ್ನೀಗ, ಅಮೆರಿಕ & ಅಮೆರಿಕದ ಸ್ನೇಹಿತರಿಗೆ ನೀಡಿದ್ದಾರೆ ಪುಟಿನ್.

Russian President Putin Warned Again About Nuclear War To The America And Western Countries

ಚುನಾವಣೆ ಸಮಯದಲ್ಲೇ ಯುದ್ಧ?

ಭಾರತದ ರೀತಿ ರಷ್ಯಾದಲ್ಲಿ ಕೂಡ ಈಗ ಲೋಕಸಭೆ ರೀತಿಯೇ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತಿವೆ. ರಷ್ಯಾದಲ್ಲಿ ಮಾರ್ಚ್ 15 ರಿಂದ 17ರವರೆಗೂ ಸಾರ್ವತ್ರಿಕ ಚುನಾವಣೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಚುನಾವಣೆಯಲ್ಲಿ ಕೂಡ ವ್ಲಾದಿಮಿರ್ ಪುಟಿನ್ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ. ಈ ಮೂಲಕ ಮುಂದಿನ 6 ವರ್ಷಗಳ ಅವಧಿಗು ಪುಟಿನ್‌ಗೆ ಅವಕಾಶ ಸಿಗಲಿದೆ. ಹೀಗೆ ಚುನಾವಣೆಗೆ ಇನ್ನು 2 ದಿನ ಬಾಕಿ ಇರುವ ಸಮಯದಲ್ಲೇ ಪುಟಿನ್ ಇದೀಗ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ಅಲ್ಲದೆ ಉಕ್ರೇನ್ ಯುದ್ಧದಲ್ಲಿ ಕೈಹಾಕಬೇಡಿ ಎನ್ನುತ್ತಾ, ಅಮೆರಿಕ ಮತ್ತು ಅಮೆರಿಕದ ಗೆಳೆಯರಿಗೆ ವಾರ್ನಿಂಗ್ ರವಾನಿಸಿದ್ದಾರೆ.

ರಷ್ಯಾ & ಉಕ್ರೇನ್ ಯುದ್ಧಕ್ಕೆ 2 ವರ್ಷ

2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧವನ್ನ ಘೋಷಣೆ ಮಾಡಿತ್ತು. ಹೀಗೆ ಎರಡೂ ದೇಶಗಳ ನಡುವೆ ಭೀಕರ ಕದನ ಶುರುವಾಗಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಭೀಕರತೆ ಶುರುವಾಗಿ ಲಕ್ಷಾಂತರ ಜನ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದರೂ ಯುದ್ಧವನ್ನು ನಿಲ್ಲಿಸಲು ರಷ್ಯಾ ತಯಾರಿಲ್ಲ. ಹಾಗೇ ಉಕ್ರೇನ್ ಕೂಡ ಹಠ ಬಿಟ್ಟು ಸಂಧಾನಕ್ಕೆ ಬರ್ತಿಲ್ಲ ಅಂತಾ ರಷ್ಯಾ ಆರೋಪಿಸುತ್ತಿದೆ. ಹೀಗೆ ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಬೇರೆ ನ್ಯೂಕ್ಲಿಯರ್ ವಾರ್ ಬಗ್ಗೆ ಮಾತನಾಡಿದ್ದು, 3ನೇ ಮಹಾಯುದ್ಧ ನಡೆಯುವುದು ಪಕ್ಕಾ? ಎಂಬ ಮಾತುಗಳು ಓಡಾಡುತ್ತಿವೆ.

Russian President Putin Warned Again About Nuclear War To The America And Western Countries

ಒಟ್ನಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಪಂಚ ಒಂದಾಗಬೇಕಿದೆ. ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿ ಪರಮಾಣು ಅಸ್ತ್ರಗಳ ಬಳಕೆ ಆದರೂ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಕೂಡಲೇ ಯುದ್ಧಕ್ಕೆ ಬ್ರೇಕ್ ಹಾಕಿದರೆ ಪರಿಸ್ಥಿತಿಯ ಹಿಡಿತಕ್ಕೆ ತರಬಹುದು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಆದ್ರೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+