ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ಗಳಿಸಲು ಟ್ಯಾಕ್ಸಿ ಚಾಲನೆ ಮಾಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್!

|
Google Oneindia Kannada News

ಮಾಸ್ಕೋ, ಡಿಸೆಂಬರ್ 13: ಸೋವಿಯತ್ ಒಕ್ಕೂಟದ ಪತನದ ನಂತರ ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಟ್ಯಾಕ್ಸಿ ಅನ್ನು ಓಡಿಸಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ RIA ನೊವೊಸ್ಟಿ ವರದಿ ಮಾಡಿದೆ. ಸಾಕ್ಷ್ಯಚಿತ್ರವೊಂದರಲ್ಲಿ "ಕೆಲವೊಮ್ಮೆ ನಾನು ಹೆಚ್ಚುವರಿ ಹಣವನ್ನು ಗಳಿಸಬೇಕಾಗಿತ್ತು," ಎಂಬ ಹೇಳಿಕೆಯನ್ನು RIA-ನೊವೊಸ್ಟಿ ಉಲ್ಲೇಖಿಸಿದೆ.

"ನನ್ನ ಪ್ರಕಾರ, ನಾನು ಕಾರಿನ ಮೂಲಕ ಖಾಸಗಿ ಚಾಲಕನಾಗಿ ಹೆಚ್ಚುವರಿ ಹಣವನ್ನು ಸಂಪಾದಿಸಿದ್ದೇನೆ, ಇದನ್ನು ಹೇಳುವುದಕ್ಕೆ ಅಷ್ಟು ಹಿತ ಎನ್ನಿಸುವುದಿಲ್ಲ. ಆದರೆ, ದುರದೃಷ್ಟವಶಾತ್, ಅದು ನಿಜವಾಗಿದೆ," ಎಂದು ಪುಟಿನ್ ಹೇಳಿದ್ದರು.

ಕೊರೊನಾವೈರಸ್ ಪಿಡುಗಿನಲ್ಲೂ ಭಾರತ-ರಷ್ಯಾ ಒಪ್ಪಂದ ಬದಲಾಗಿಲ್ಲ: ಮೋದಿಕೊರೊನಾವೈರಸ್ ಪಿಡುಗಿನಲ್ಲೂ ಭಾರತ-ರಷ್ಯಾ ಒಪ್ಪಂದ ಬದಲಾಗಿಲ್ಲ: ಮೋದಿ

ಯುಎಸ್ಎಸ್ಆರ್ ಪತನವು "ಐತಿಹಾಸಿಕ ರಷ್ಯಾದ" ಅಂತ್ಯವನ್ನು ಸೂಚಿಸುತ್ತದೆ. ಸೋವಿಯತ್ ಒಕ್ಕೂಟದ ಪತನದ ಬಗ್ಗೆ ವ್ಲಾಡಿಮಿರ್ ಪುಟಿನ್ ಹೇಳಿದ್ದು, ಅದರ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ಈ ಘಟನೆಯು ದೇಶದ ಬಹುಪಾಲು ನಾಗರಿಕರ ಪಾಲಿಗೆ ದುರಂತವಾಗಲಿದೆ ಎಂದು ಹೇಳಿದ್ದರು. ಮೂರು ದಶಕಗಳ ಹಿಂದೆ ಅದರ ವಿಘಟನೆಯ ಬಗ್ಗೆ ಅವರು ಹಿಂದೆ ವಿಷಾದಿಸಿದ್ದಾರೆ, ಇದು "ಹೆಚ್ಚಿನ ನಾಗರಿಕರಿಗೆ" "ದುರಂತ" ಆಗಿ ಉಳಿದಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದರು.

Russian President Putin drove a taxi to boost his income following the fall of the Soviet Union

ಸೋವಿಯತ್ ಒಕ್ಕೂಟದ ಅಂತ್ಯದ ಬಗ್ಗೆ ಪುಟಿನ್ ಮಾತು:

ಸೋವಿಯತ್ ಒಕ್ಕೂಟದ ಪತನದಿಂದ ಆರ್ಥಿಕ ಅಸ್ಥಿರತೆಯು ಸೃಷ್ಟಿ ಆಯಿತು. ಈ ಅವಧಿಯಲ್ಲಿ ಲಕ್ಷಾಂತರ ಪ್ರಜೆಗಳು ಬಡತನಕ್ಕೆ ಸಿಲುಕಿದರು. ಹೊಸದಾಗಿ ಸ್ವತಂತ್ರ್ಯಗೊಂಡ ರಷ್ಯಾ ಸಮತಾವಾದದಿಂದ ಬಂಡವಾಳಶಾಹಿ ಕಡೆಗೆ ಮುಖ ಮಾಡಿತು. ಸೋವಿಯತ್ ಒಕ್ಕೂಟದ ನಿಷ್ಠಾವಂತ ಸೇವಕ, ಪುಟಿನ್ ಒಮ್ಮೆ ಕುಸಿದು ಬಿದ್ದಾಗ ನಿರಾಸೆಯಾಗಿದ್ದರು. ಅದರ ಬಗ್ಗೆ ಮಾತನಾಡಿರುವ ಪುಟಿನ್, "20ನೇ ಶತಮಾನದ ಅತಿದೊಡ್ಡ ಭೌಗೋಳಿಕ ಮತ್ತು ರಾಜಕೀಯ ದುರಂತ" ಎಂದು ವಿವರಿಸಿದರು.

ಉಕ್ರೇನ್‌ನ ಆಕ್ರಮಣದೊಂದಿಗೆ ಸೋವಿಯತ್ ಒಕ್ಕೂಟವನ್ನು ಮರುಸೃಷ್ಟಿಸಲು ಯೋಜಿಸುತ್ತಿದ್ದಾರೆಯೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ವ್ಲಾಡಿಮಿರ್ ಪುಟಿನ್ ಈ ರೀತಿ ಉತ್ತರವನ್ನು ನೀಡಿದ್ದಾರೆ. ಕ್ರೆಮ್ಲಿನ್ ಇದುವರೆಗೆ ಪಶ್ಚಿಮದಿಂದ ಭಯ ಹುಟ್ಟಿಸುವ ಯೋಜನೆ ಹಾಕಿಕೊಂಡಿರುವ ಬಗೆಗಿನ ಕಲ್ಪನೆಯನ್ನು ತಳ್ಳಿಹಾಕಲಾಗಿದೆ. ಕೈವ್ ಅಥವಾ ಬೇರೆ ರಾಜ್ಯಗಳಿಂದ ಪ್ರಚೋದನೆಯನ್ನು ನೀಡಿದರೆ, ಮಾಸ್ಕೋ ನೆರೆಹೊರೆಯಲ್ಲೇ ದಾಳಿ ಮಾಡುತ್ತದೆ ಎಂದು ಹೇಳಿದ್ದಾರೆ.

Recommended Video

BCCI ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ರೆಡಿಯಾದ್ರು ವಿರಾಟ್ | Oneindia Kannada

English summary
Russian President Vladimir Putin drove a taxi to boost his income following the fall of the Soviet Union.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X