ರಷ್ಯಾ ಸೇನೆಯ ಎಸ್‌ಯು-30 ಯುದ್ಧ ವಿಮಾನ ಅಪಘಾತ, ಇಬ್ಬರ ಸಾವು...
ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾಗೆ ಮೇಲಿಂದ ಮೇಲೆ ಸಮಸ್ಯೆಗಳು ಎದುರಾಗ್ತಿವೆ. ರಷ್ಯಾ ಸೇನೆಗೆ ಕಳೆದ ಕೆಲವು ತಿಂಗಳಿಂದ ಪದೇ ಪದೇ ದೊಡ್ಡ ಹಿನ್ನಡೆ ಅಗುತ್ತಿದೆ. ಅದರಲ್ಲೂ ಉಕ್ರೇನ್ ವಿರುದ್ಧ ಕಳೆದ 3 ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಯುತ್ತಿರುವ ಯುದ್ಧ ಇದೀಗ ಧಗಧಗಿಸುತ್ತಿದೆ. ಹೀಗಿದ್ದಾಗ ಕೈಯಲ್ಲಿರುವ ಒಂದೊಂದೇ ಅಸ್ತ್ರಗಳನ್ನ ರಷ್ಯಾ ಸೇನೆ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ನಿರ್ಮಾಣ ಆಗುತ್ತಿದೆ. ಅದ್ರಲ್ಲೂ ಉಕ್ರೇನ್‌ಗೆ ಪಾಶ್ಚಿಮಾತ್ಯ ಒಕ್ಕೂಟದಿಂದ ಸಹಾಯ ಸಿಗ್ತಾ ಇರುವ ಸಮಯದಲ್ಲಿ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ.
ಹೀಗೆಲ್ಲಾ ಇದ್ದಾಗ ಕೂಡ ರಷ್ಯಾ ಮಾತ್ರ ಯುದ್ಧಕ್ಕೆ ಬ್ರೇಕ್ ಹಾಕುವ ಆ ಮೂಲಕ ಶಾಂತಿ ಕಾಪಾಡುವ ಯಾವುದೇ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ಇಷ್ಟೆಲ್ಲಾ ಬೆಳವಣಿಗೆ ನಡುವೆ ದಿಢೀರ್ ಮತ್ತೊಂದು ಆಘಾತಕಾರಿ ಘಟನೆಯು ನಡೆದು ಹೋಗಿದೆ. ರಷ್ಯಾ ಸೇನೆಯ ಎಸ್‌ಯು-30 ಯುದ್ಧ ವಿಮಾನವು ಇಂದು ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ನಡೆಯಲು ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ, ಆದರೆ ರಷ್ಯಾದ Su-30 ಯುದ್ಧ ವಿಮಾನ ಅಪಘಾತಕ್ಕೆ ತುತ್ತಾಗಲು ತಾಂತ್ರಿಕ ದೋಷ ಕಾರಣ ಎಂದು ಆರೋಪಿಸಲಾಗಿದೆ.

ಹೆಚ್ಚುತ್ತಿರುವ ಯುದ್ಧ ವಿಮಾನ ಅಪಘಾತಗಳು...
ಹೌದು, ಇದೀಗ ಫಿನ್ಲ್ಯಾಂಡ್ ಗಡಿಯಲ್ಲಿ ಇರುವ ಕರೇಲಿಯಾ ಪ್ರದೇಶದಲ್ಲಿ ರಷ್ಯಾ ಸೇನೆಗೆ ಸೇರಿದ ಯುದ್ಧ ವಿಮಾನ ಉರುಳಿ ಬಿದ್ದಿದೆ. ಅಪಘಾತಕ್ಕೆ ತುತ್ತಾಗಿರುವ ರಷ್ಯಾದ Su-30 ಯುದ್ಧ ವಿಮಾನವು ಇಬ್ಬರು ಪೈಲಟ್‌ಗಳನ್ನ ಹೊತ್ತೊಯ್ಯುತ್ತಿತ್ತು ಎಂದು ರಷ್ಯಾ ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಆದರೆ ಅದೃಷ್ಟವಶಾತ್ ಅಪಘಾತಕ್ಕೆ ತುತ್ತಾದ ರಷ್ಯಾದ Su-30 ಯುದ್ಧ ವಿಮಾನದಲ್ಲಿ ಯಾವುದೇ ರೀತಿ ಬಾಂಬ್ ಅಥವಾ ಶಸ್ತ್ರಾಸ್ತ್ರಗಳು ಇರಲಿಲ್ಲ ಎಂದು ದೃಢಪಡಿಸಲಾಗಿದೆ. ಹಾಗೇ ವಿಮಾನವು ಬಿದ್ದಿದ್ದು ಕಾಡಿನಲ್ಲಿ ಎಂದು ದೃಢಪಡಿಸಲಾಗಿದೆ.
ಸಾಲು ಸಾಲು ಸಾವುಗಳು...
ಒಟ್ನಲ್ಲಿ ರಷ್ಯಾ ಸೇನೆಗೆ ದೊಡ್ಡ ಸಮಸ್ಯೆ ಎದುರಾಗಿದ್ದು, ಯುದ್ಧದ ಹೊರತು ಬೇರೆ ಬೇರೆ ಘಟನೆ ಹಾಗೂ ಅಪಘಾತದಲ್ಲಿ ಸಾವು & ನೋವು ಹೆಚ್ಚಾಗುತ್ತಾ ಇರುವುದು ಚಿಂತೆ ಹೆಚ್ಚು ಮಾಡಿದೆ. ಈ ಮೂಲಕ ಉಕ್ರೇನ್ ವಿರುದ್ಧ ಹೋರಾಡುತ್ತಿರುವ ರಷ್ಯಾ ಸೈನಿಕರಿಗೆ ಸಾಲು ಸಾಲು ಸಾವುಗಳ ಸ್ವಲ್ಪ ಭಯ ಹೆಚ್ಚಾಗುವಂತೆ ಮಾಡಿದೆ. ಹೀಗಿದ್ದರೂ ಉಕ್ರೇನ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಮುಂದೆ ನುಗ್ಗುತ್ತಿದೆ ರಷ್ಯಾ ಮಿಲಿಟರಿ. ಕಾಡಿನಲ್ಲಿ ವಿಮಾನ ಬಿದ್ದಿರುವ ಪರಿಣಾಮ ನಾಗರಿಕರು ಕೂಡ ಗಾಯಗೊಂಡಿಲ್ಲ, ಈ ಬಗ್ಗೆ ತನಿಖೆ ಮುಂದುವರಿದಿದೆ.












Click it and Unblock the Notifications