ರಷ್ಯಾ ಎಚ್ಚರಿಕೆ ಸಂದೇಶಕ್ಕೆ ಸೈಲೆಂಟ್ ಆಗುತ್ತಾ ಅಮೆರಿಕ?
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡುತ್ತಿರುವ ವಿಚಾರವಾಗಿ ಈಗ ದೊಡ್ಡ ತಲೆನೋವು ಶುರುವಾಗಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬೈಡನ್ ಉಕ್ರೇನ್ ಸೇನೆಯ ಪರವಾಗಿ ನಿರ್ಧಾರ ಕೈಗೊಂಡು, ರಷ್ಯಾ ವಿರುದ್ಧ ಅಮೆರಿಕ ಕೊಟ್ಟಿರುವ ಅಸ್ತ್ರ ಬಳಸಿ ಎಂಬ ಸಂದೇಶ ನೀಡಿದ್ದರು. ಈ ಬಗ್ಗೆ ಇದೀಗ ರಷ್ಯಾ ಖಡಕ್ ವಾರ್ನಿಂಗ್ ಕೊಟ್ಟಿದೆ!
ಆಧುನಿಕ ಕಾಲದಲ್ಲಿ ಯುದ್ಧ ಒಂದು ಶುರುವಾದ್ರೆ ಹೇಗಿರುತ್ತೆ? ಎಂಬುದಕ್ಕೆ ಇದೇ ಉದಾಹರಣೆ. ರಷ್ಯಾ & ಉಕ್ರೇನ್ ಇಬ್ಬರೂ ಒಬ್ಬರು ಮತ್ತೊಬ್ಬರನ್ನ ನಾಶ ಮಾಡುವ ಹಂತಕ್ಕೂ ಬಂದಿದ್ದಾರೆ. 2 ವರ್ಷಗಳ ಹಿಂದೆ ಶುರುವಾದ ರಷ್ಯಾ & ಉಕ್ರೇನ್ ಯುದ್ಧ, ಜಗತ್ತಿನ ಬೆನ್ನಿಗೆ ಚೂರಿ ಹಿರಿದಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯ ಈ ಯುದ್ಧವು ಸೃಷ್ಟಿ ಮಾಡ್ತಿದೆ. ಹೀಗೆ ಪರದಾಟ ಕೂಡ ಜಾಸ್ತಿ ಆಗಿದ್ದು ಯಾವ ಕ್ಷಣದಲ್ಲಿ ಏನಾಗುತ್ತೆ? ಅನ್ನೋದೇ ಗೊತ್ತಾಗ್ತಿಲ್ಲ.

ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಜಗತ್ತಿನಲ್ಲಿ ಹಲವು ಯುದ್ಧಗಳು ಶುರುವಾಗಿ ಪ್ರಪಂಚದ ಬುಡಕ್ಕೆ ಬಾಂಬ್ ಇಟ್ಟಂತೆ ಆಗಿದೆ. ಮುಂದೆ ಇದು ಸಮಸ್ಯೆ ತರುವುದು ಪಕ್ಕಾ, ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸುವ ಯತ್ನ ಮಾಡಿ ಸೋತು ಹೋಗಿದೆ. ಇಷ್ಟೆಲ್ಲದರ ಮಧ್ಯೆ ಈಗ ಅಮೆರಿಕ ನೀಡಿದ ವಿಶೇಷ ಅನುಮತಿ, ರಷ್ಯಾ ಪಿತ್ತ ನೆತ್ತಿಗೇರಿಸಿದೆ. ಅಲ್ಲದೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ ರಷ್ಯಾ.
ಸಾವಿಗೆ ರಷ್ಯಾ ರಿವೇಂಜ್ ಗ್ಯಾರಂಟಿ!
ಹೌದು, ಅಮೆರಿಕ ಈಗಾಗಲೇ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ರವಾನೆ ಮಾಡಿದೆ. ಈ ಮೂಲಕ ರಷ್ಯಾ ವಿರುದ್ಧ ಯುದ್ಧಕ್ಕೆ ಪರೋಕ್ಷ ಬೆಂಬಲ ನೀಡುತ್ತಿದೆ. ಇಷ್ಟುದಿನ ರಷ್ಯಾ ನೆಲದ ಮೇಲೆ ದಾಳಿ ಮಾಡಲು ಅಮೆರಿಕ ನಿರ್ಮಿತ ಅಸ್ತ್ರಗಳನ್ನು ಬಳಸಬೇಡಿ ಎಂದು ಅಮೆರಿಕದ ಕಡೆಯಿಂದ ಸೂಚನೆ ಇತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ರಷ್ಯಾ ವಿರುದ್ಧ ಈಗ ದಾಳಿ ಮಾಡಲು ನಮ್ಮ ಅಸ್ತ್ರಗಳನ್ನು ನೇರವಾಗಿ ಬಳಸಿ ಎಂದಿದೆ ಅಮೆರಿಕ. ಇದೇ ವಿಚಾರ ಈಗ ದೊಡ್ಡ ಸಮಸ್ಯೆ ತಂದೊಡ್ಡಿದೆ.

ಅಮೆರಿಕಗೆ ಎಚ್ಚರಿಕೆ ಕೊಟ್ಟ ರಷ್ಯಾ!
ಇಷ್ಟೆಲ್ಲಾ ಬೆಳವಣಿಗೆ ನಡುವೆ ರಷ್ಯಾ ಈಗ ಪ್ರತಿಕ್ರಿಯೆ ನೀಡಿದ್ದು, ರಷ್ಯಾ ನೆಲದಲ್ಲಿ ನಡೆಯುವ ಯಾವುದೇ ಹಿಂಸೆಗೆ ನೀವೇ ನೇರ ಕಾರಣ ಎಂದು ಅಮೆರಿಕಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಈ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರಿ ಎಂಬ ಮೆಸೇಜ್ ಕೂಡ ಕೊಟ್ಟಿದೆ ರಷ್ಯಾ. ಇದು ಅಮೆರಿಕ & ರಷ್ಯಾ ನಡುವೆ ನೇರ ಯುದ್ಧಕ್ಕೆ ಪರೋಕ್ಷ ಪ್ರಚೋದನೆ ನೀಡಿದಂತೆ ಕಾಣ್ತಿದ್ದು, ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications