ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಪಾಲಿಗೆ ನಾನೇ ನಂ.1 ಟಾರ್ಗೆಟ್ ಎಂದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

|
Google Oneindia Kannada News

ವಾಶಿಂಗ್ಟನ್, ಫೆಬ್ರವರಿ 25: ರಷ್ಯಾದ ಪಾಲಿಗೆ ನಾನೇ ನಂಬರ್ 1 ಟಾರ್ಗೆಟ್ ಆಗಿದ್ದು, ನನ್ನ ಕುಟುಂಬ ಎರಡನೇ ಟಾರ್ಗೆಟ್ ಆಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.

ಶುಕ್ರವಾರ ದೂರದರ್ಶನದಲ್ಲಿ ರಷ್ಯಾ ದಾಳಿಯ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತನಾಡಿದರು. ರಾಷ್ಟ್ರದ ಮುಖ್ಯಸ್ಥರನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ರಷ್ಯಾ ಬಯಸಿದೆ ಎಂದು ದೂಷಿಸಿದರು.

Russia-Ukraine War Live Updates : ರಷ್ಯಾದ 7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಉಕ್ರೇನ್Russia-Ukraine War Live Updates : ರಷ್ಯಾದ 7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಉಕ್ರೇನ್

ಕೇಂದ್ರ ಸರ್ಕಾರಕ್ಕೆ ಕೆಲಸ ಮಾಡಲು ಅಗತ್ಯವಿರುವ ಎಲ್ಲರೊಂದಿಗೆ ಅವರು ಸರ್ಕಾರಿ ಕ್ವಾಟ್ರಸ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು. "ನಾನು ರಾಜಧಾನಿಯಲ್ಲಿ ಇರುತ್ತೇನೆ, ನಾನು ನನ್ನ ಜನರೊಂದಿಗೆ ಇರುತ್ತೇನೆ" ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟಪಡಿಸಿದರು.

Russia want to destroy Ukraine politically by destroying the Head of State: Ukraine President

ನನ್ನ ಕುಟುಂಬ ದೇಶದ್ರೋಹಿಯಲ್ಲ:

"ನಾನು ರಾಜಧಾನಿಯಲ್ಲಿ ಇರುತ್ತೇನೆ, ನಾನು ನನ್ನ ಜನರೊಂದಿಗೆ ಇರುತ್ತೇನೆ ಎಂದಿರುವ ಝೆಲೆನ್ಸ್ಕಿ, ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ. ನನ್ನ ಮಕ್ಕಳೂ ಉಕ್ರೇನ್‌ನಲ್ಲಿದ್ದಾರೆ. ನನ್ನ ಕುಟುಂಬ ದೇಶದ್ರೋಹಿಗಳಲ್ಲ. ಅವರು ಉಕ್ರೇನ್ ಪ್ರಜೆಗಳು. ಆದರೆ ಅವರು ಈಗ ಎಲ್ಲಿದ್ದಾರೆ ಎಂದು ಹೇಳುವ ಹಕ್ಕು ನನಗಿಲ್ಲ," ಎಂಬುದಾಗಿ ತಿಳಿಸಿದರು.

ರಷ್ಯಾದ ಏಳು ಯುದ್ಧವಿಮಾನ ಹೊಡೆದುರುಳಿಸಿದ ಉಕ್ರೇನ್:

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಎರಡನೇ ದಿನವಾದ ಶುಕ್ರವಾರವೂ ಮುಂದುವರಿದಿದೆ. ಉಕ್ರೇನ್ ರಾಜಧಾನಿ ಕೀವ್ ಪ್ರದೇಶದಿಂದ 32 ಕಿಲೋ ಮೀಟರ್ ದೂರಕ್ಕೆ ತಲುಪಿರುವ ರಷ್ಯಾ ಸೇನೆಯು ರಾಜಧಾನಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಇದರ ಮಧ್ಯೆ ಶುಕ್ರವಾರ ರಷ್ಯಾದ ಏಳು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸಚಿವಾಲಯ ತಿಳಿಸಿದೆ.

ರಷ್ಯಾ ದಾಳಿಯಲ್ಲಿ 137 ಮಂದಿ ಸಾವು:

Recommended Video

ಉಕ್ರೇನ್ ನ ಅಮಾಯಕರ ಮೇಲೂ ಅಟ್ಯಾಕ್ ಮಾಡಿದ ರಷ್ಯಾ | Oneindia Kannada

ಉಕ್ರೇನ್‌ನಲ್ಲಿ ಗುರುವಾರ ರಷ್ಯಾ ನಡೆಸಿದ ದಾಳಿಯಿಂದ 10 ಸೇನಾ ಅಧಿಕಾರಿಗಳು ಸೇರಿದಂತೆ 137 ಜನರು ಸಾವನ್ನಪ್ಪಿದ್ದು, 316 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮೃತರಲ್ಲಿ ಒಡೆಸಾ ಪ್ರದೇಶದ ಝಿಮಿನಿ ದ್ವೀಪದಲ್ಲಿ ಎಲ್ಲಾ ಗಡಿ ಯೋಧರು ಸೇರಿದ್ದಾರೆ, ಇದನ್ನು ರಷ್ಯನ್ನರು ವಶಪಡಿಸಿಕೊಂಡಿದ್ದಾರೆ. ಮಾಸ್ಕೋ ವಿರುದ್ಧ ಹೋರಾಡಲು ಕೀವ್ ಏಕಾಂಗಿಯಾಗಿ ಉಳಿದಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.

English summary
Russia want to destroy Ukraine politically by destroying the Head of State, says Ukraine President Volodymyr Zelenskyy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X