Breaking: ಉಕ್ರೇನ್‌ನಲ್ಲಿ ಸ್ಟ್ರೋಕ್‌ನಿಂದಾಗಿ ಭಾರತದ ವಿದ್ಯಾರ್ಥಿ ಸಾವು
ಉಕ್ರೇನ್, ಮಾರ್ಚ್ 02: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಈಗಾಗಲೇ ಹಾವೇರಿ ಮೂಲದ ವಿದ್ಯಾರ್ಥಿಯೊಬ್ಬರು ಮೃತಪಟ್ಟ ನೋವಿನಲ್ಲಿರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ.
ಉಕ್ರೇನ್‌ನಲ್ಲಿರುವ ಪಂಜಾಬ್ ಮೂಲದ ವಿದ್ಯಾರ್ಥಿಯೊಬ್ಬರು ಸ್ಟ್ರೋಕ್‌ನಿಂದಾಗಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

22 ವರ್ಷದ ಚಂದನ್ ಜಿಂದಾಲ್ ಮೃತ ವಿದ್ಯಾರ್ಥಿ,ಪಾರ್ಶ್ವ ಹೊಡೆದ ತಕ್ಷಣವೇ ಅಲ್ಲಿನ ವಿನಿಟ್ಸಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ವಿದ್ಯಾರ್ಥಿಯ ಮೃತದೇಹ ತರಲು ವ್ಯವಸ್ಥೆ ಮಾಡುವಂತೆ ಅವರ ತಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಒಂದು ದಿನದ ಹಿಂದೆ ಖಾರ್ಕಿವ್‌ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿಯ ಶವವನ್ನು ಭಾರತಕ್ಕೆ ತರಲು ಸರ್ಕಾರವು ಸಾಕಷ್ಟು ಪ್ರಯತ್ನ ನಡೆಸುತ್ತಿದೆ.
ಪ್ರಯಾಣಿಕರ ಸೇವೆಗಳಿಗಾಗಿ ಉಕ್ರೇನ್‌ನಲ್ಲಿರುವ ವಾಯು ಪ್ರದೇಶವನ್ನು ಮುಚ್ಚಿರುವುದರಿಂದ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಕಷ್ಟವಾಗುತ್ತಿದೆ.












Click it and Unblock the Notifications