• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Russia-Ukraine War Live Updates: ದಾವೋಸ್ ಚರ್ಚೆಯಲ್ಲಿ ರಷ್ಯಾ ಮೇಲೆ ಗರಿಷ್ಠ ನಿರ್ಬಂಧಗಳಿಗೆ ಝೆಲೆನ್ಸ್ಕಿ ಕರೆ

|
Google Oneindia Kannada News

ಮಾಸ್ಕೋ, ಮೇ 23: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಸುಮಾರು ಒಂದು ಸಾವಿರ ಮಂದಿ ರಷ್ಯನ್ ನಾಗರಿಕರ ಪ್ರವೇಶವನ್ನು ಕೆನಡಾ ಸರಕಾರ ನಿರ್ಬಂಧಿಸಿದೆ. ಉಕ್ರೇನ್ ಮೇಲೆ ರಷ್ಯಾ ಎಡಬಿಡದೆ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆನಡಾ ಈ ಕ್ರಮ ಕೈಗೊಂಡಿದೆ ಎಂದು ಕೆನಡಾದ ಸಾರ್ವಜನಿಕ ಸುರಕ್ಷತೆ ಸಚಿವ ಮಾರ್ಕೊ ಮೆಂಡಿಸಿನೋ ಮಂಗಳವಾರ ತಿಳಿಸಿದರು.

ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿ, ಸುಮಾರು ಒಂದು ತಿಂಗಳಿಗೂ ಅಧಿಕ ಕಾಲದಲ್ಲಿ ಉಕ್ರೇನ್ ದೇಶದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೀವ್ ನಗರವನ್ನು ಉಕ್ರೇನ್ ತನ್ನ ವಶಕ್ಕೆ ಮರಳಿ ಪಡೆದಿರುವುದಾಗಿ ಘೋಷಿಸಿಕೊಂಡಿದೆ.

Russia-Ukraine War Live Updates, Latest News and Highlights in Kannada

ನೆರೆಯ ಉಕ್ರೇನ್‌ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ "ವಿಶೇಷ ಮಿಲಿಟರಿ ಕಾರ್ಯಾಚರಣೆ" ಫೆಬ್ರವರಿ 24 ರಂದು ಪ್ರಾರಂಭವಾಯಿತು, ರಷ್ಯಾದ ಸೈನ್ಯವು ಬೆಲಾರಸ್‌ನಿಂದ ಉತ್ತರಕ್ಕೆ ಮತ್ತು ರಷ್ಯಾದಿಂದ ಪೂರ್ವಕ್ಕೆ ಆಕ್ರಮಣ ಮಾಡಿತು. ಯುಎಸ್ ಅಧಿಕಾರಿಗಳ ಪ್ರಕಾರ ರಷ್ಯಾದ ಪಡೆಗಳು ಉಕ್ರೇನಿಯನ್ನರಿಂದ "ಕಠಿಣ ಪ್ರತಿರೋಧ" ವನ್ನು ಎದುರಿಸುತ್ತಿವೆ.

ರಷ್ಯಾದ ದಾಳಿ ನಡುವೆಯೂ ಉಕ್ರೇನ್‌ನ ಅಧ್ಯಕ್ಷ ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿಕೊಂಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಶಾಂತಿ ಮಾತುಕತೆಗೆ ಸಿದ್ಧ ಎಂದಿದ್ದಾರೆ.

   Livingstone ಆಟಕ್ಕೆ ಗಾಬರಿಯಾದ ಗುಜರಾತ್ | Oneindia Kannada

   ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶದ ಜನತೆಯನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿ, ದೇಶವು ರಷ್ಯಾಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂಬ ರಷ್ಯಾ ಆರೋಪವನ್ನು ನಿರಾಕರಿಸಿದರು, ರಷ್ಯಾದ ಆಕ್ರಮಣವು ಹತ್ತಾರು ಸಾವಿರ ಜೀವಗಳನ್ನು ಬಲಿಪಡೆದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

   Newest First Oldest First
   6:27 PM, 23 May
   ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ದಾವೋಸ್‌ನಲ್ಲಿ ನಡೆದ ಜಾಗತಿಕ ಸಭೆಯಲ್ಲಿ ಸಭೆಯಲ್ಲಿ ಮಾತನಾಡಿ, 'ಜಗತ್ತು ಒಂದು ಮಹತ್ವದ ತಿರುವನ್ನು ಎದುರಿಸುತ್ತಿದೆ. ಇದು ಇತರ ದೇಶಗಳಿಗೆ ಎಚ್ಚರಿಕೆಯಾಗಿದೆ. ಹೀಗಾಗಿ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೆಚ್ಚಿಸಬೇಕಾಗಿದೆ' ಎಂದು ಹೇಳಿದರು. "ಇತಿಹಾಸ ಒಂದು ಮಹತ್ವದ ಘಟ್ಟದಲ್ಲಿದೆ... ಇದು ನಿಜವಾಗಿಯೂ ವಿವೇಚನಾರಹಿತ ಶಕ್ತಿಯು ಜಗತ್ತನ್ನು ಆಳುತ್ತದೆಯೇ ಎಂದು ನಿರ್ಧರಿಸುವ ಕ್ಷಣವಾಗಿದೆ" ಎಂದು ಝೆಲೆನ್ಸ್ಕಿ ವಿಡಿಯೋ ಲಿಂಕ್ ಮೂಲಕ ಭಾಷಣದಲ್ಲಿ ಹೇಳಿದರು.
   4:50 PM, 23 May
   ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಭೆಯಲ್ಲಿ ಕಾರ್ಪೊರೇಟ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಇತರ ವಿಐಪಿಗಳಿಗೆ ಮೊದಲ ವರ್ಚುವಲ್ ಭಾಷಣದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ವಿರುದ್ಧ ಗರಿಷ್ಠ ನಿರ್ಬಂಧಗಳಿಗೆ ಕರೆ ನೀಡಿದರು.
   3:10 PM, 23 May
   "1993ರ ಯಮಾಲ್ ಮೇಲಿನ ಅಂತರ್ ಸರ್ಕಾರಿ ಅನಿಲ ಒಪ್ಪಂದವನ್ನು ಪೋಲೆಂಡ್ ಖಂಡಿಸುತ್ತದೆ" ಎಂದು ಮೊಸ್ಕ್ವಾ ಟ್ವೀಟ್ ಮಾಡಿದ್ದಾರೆ. "ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವು ರಷ್ಯಾದ ಅನಿಲದಿಂದ ಸಂಪೂರ್ಣ ಸ್ವಾತಂತ್ರ್ಯದ ದಿಕ್ಕಿನಲ್ಲಿ ಪೋಲಿಷ್ ಸರ್ಕಾರದ ನಿರ್ಣಯವನ್ನು ದೃಢಪಡಿಸಿದೆ."
   2:25 PM, 23 May
   ಉಕ್ರೇನ್ ವಿರುದ್ಧ ರಷ್ಯಾದ ಒಕ್ಕೂಟದ ಆಕ್ರಮಣವು ಸುರಕ್ಷತೆ ಮತ್ತು ರಕ್ಷಣೆಯ ವಿಷಯದಲ್ಲಿ ಇಡೀ ಯುರೋಪಿಯನ್ ಒಕ್ಕೂಟಕ್ಕೆ ಎಚ್ಚರಿಕೆಯ ಕರೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು EU ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಹೇಳಿದರು.
   1:17 PM, 23 May
   ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮುಂದಿನ ವಾರ ದಾವೋಸ್ ಫೋರಮ್‌ನಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಇಂಡೋನೇಷ್ಯಾದ ರಾಜಕಾರಣಿಗಳು ಮತ್ತು ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ.
   1:17 PM, 23 May
   ಉಕ್ರೇನ್‌ಗೆ ಯುಎಸ್ ಮಿಲಿಟರಿ ಬೆಂಬಲವನ್ನು ನೀಡುವುದನ್ನು ತಡೆಯಲು ರಷ್ಯಾಕ್ಕೆ ಸಾಧ್ಯವಾಗುವುದಿಲ್ಲ ಎಂದು ಶ್ವೇತಭವನವು ಹೇಳಿದೆ.
   11:06 AM, 23 May
   ಉಕ್ರೇನ್‌ಗೆ ನಿರ್ಣಾಯಕ ಆಹಾರ ಮತ್ತು ಮಾನವೀಯ ಪರಿಹಾರವನ್ನು ತರಲು ಪ್ರಯತ್ನಗಳನ್ನು ದ್ವಿಗುಣಗೊಳಿಸಲು ಪ್ರಧಾನ ಮಂತ್ರಿ ಬದ್ಧರಾಗಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಹೇಳಿಕೆ ನೀಡಿದೆ.
   11:05 AM, 23 May
   ಆಹಾರ ಮತ್ತು ಮಾನವೀಯ ನೆರವಿನೊಂದಿಗೆ ಉಕ್ರೇನ್‌ಗೆ ಸಹಾಯ ಮಾಡುವ ಪ್ರಯತ್ನಗಳನ್ನು ಹೆಚ್ಚಿಸಲು ದೇಶದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಪ್ರತಿಜ್ಞೆ ಮಾಡುತ್ತಾರೆ ಎಂದು ಬ್ರಿಟಿಷ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
   9:29 AM, 23 May
   ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಪ್ರಾರಂಭವಾದ ನಂತರ ಉಕ್ರೇನ್ ಸಂಸತ್ತಿನಲ್ಲಿ ಭಾಷಣ ಮಾಡಿದ ಮೊದಲ ವಿದೇಶಿ ನಾಯಕ ಎಂಬ ಕೀರ್ತಿಗೆ ಪೋಲೆಂಡ್‌ನ ಅಧ್ಯಕ್ಷರು ಪಾತ್ರರಾಗಲಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌ಗೆ ಪೋಲೆಂಡ್ ಅಧ್ಯಕ್ಷ ಆಂಡ್ರೇ ಡೂಡ ಭಾನುವಾರ ಭೇಟಿ ನೀಡಿದ್ದಾರೆ.
   8:17 AM, 23 May
   ಉಕ್ರೇನ್ ದೇಶದ ಪೂರ್ವ ಮತ್ತು ದಕ್ಷಿಣದಲ್ಲಿ ರಷ್ಯಾ ತನ್ನ ದಾಳಿಯನ್ನು ಹೆಚ್ಚಿಸುತ್ತಿದೆ. ಮಾಸ್ಕೋಗೆ ಕದನ ವಿರಾಮ ಅಥವಾ ಯಾವುದೇ ಪ್ರಾದೇಶಿಕ ರಿಯಾಯಿತಿಗಳನ್ನು ನೀಡುವಂತೆ ಉಕ್ರೇನ್ ಬೇಡಿಕೆ ಇಟ್ಟಿದೆ ಎಂಬ ವರದಿಗಳನ್ನು ಉಕ್ರೇನ್ ಸ್ಪಷ್ಟವಾಗಿ ತಳ್ಳಿಹಾಕಿದೆ.
   7:16 AM, 23 May
   ಆಫ್ರಿಕನ್ ಯೂನಿಯನ್ ಮುಖ್ಯಸ್ಥರು ಮಾಸ್ಕೋ, ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮತ್ತೊಂದು ಕಡೆ ಪೋಲಿಷ್ ನಾಯಕ ಕೀವ್‌ಗೆ ಭೇಟಿ ನೀಡಿದ್ದು, ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಉಕ್ರೇನ್‌ಗೆ ಬೆಂಬಲವನ್ನು ಘೋಷಣೆ ಮಾಡಿದ್ದಾರೆ.
   6:14 AM, 23 May
   ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ದೇಶಗಳಿಗೆ ಗ್ಯಾಸ್ ಪೂರೈಕೆಯಲ್ಲಿ ತೊಂದರೆ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಉಕ್ರೇನ್ ಮೂಲಕ ಯುರೋಪ್‌ಗೆ ಅನಿಲ ಪೂರೈಕೆಯನ್ನು ಮುಂದುವರೆಸಲಾಗಿದೆ ಎಂದು ರಷ್ಯಾದ ಅನಿಲ ಉತ್ಪಾದಕ ಕಂಪನಿ ಗಾಜ್ಪ್ರೊಮ್ ಹೇಳಿದೆ. ಯುದ್ಧ ಆರಂಭವಾದ ಬಳಿಕ ರಷ್ಯಾ ಮೇಲೆ ಹಲವಾರು ರಾಷ್ಟ್ರಗಳು ಆರ್ಥಿಕ ನಿರ್ಬಂಧಗಳನ್ನು ಹೇರಿದ್ದರೂ ಸಹ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ಅಡೆತೆಡೆ ಮಾಡಿಲ್ಲ.
   7:51 PM, 22 May
   ಯುದ್ಧವಿರಾಮಕ್ಕೆ ಉಕ್ರೇನ್ ನಕಾರ
   ಉಕ್ರೇನ್ ದೇಶದಲ್ಲಿ ರಷ್ಯಾದ ತೀವ್ರ ದಾಳಿ ಮುಂದುವರಿದಿದೆ. ಪಾಶ್ಚಿಮಾತ್ಯ ದೇಶಗಳ ಆರ್ಥಿಕ ನಿಷೇಧ ಕ್ರಮಗಳಿಗೆ ಬದಲಾಗಿ ರಷ್ಯಾ ಕೂಡ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಫಿನ್ಲೆಂಡ್ ದೇಶಕ್ಕೆ ಗ್ಯಾಸ್ ಸರಬರಾಜು ನಿಲ್ಲಿಸಿದೆ. ಇದೇ ವೇಳೆ, ರಷ್ಯಾ ಜೊತೆ ಮಾತುಕತೆಗೆ ಕೂರುವ ಅಥವಾ ಯುದ್ಧವಿರಾಮ ಘೋಷಿಸುವ ನಿರ್ಧಾರವನ್ನು ಉಕ್ರೇನ್ ತಳ್ಳಿಹಾಕಿದೆ.
   7:49 PM, 22 May
   ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣ ಭಾಗದ ಪ್ರದೇಶಗಳಾದ ಡೊಂಬಾಸ್ ಮತ್ತು ಮಿಕೋಲೇವ್‌ನಲ್ಲಿ ರಷ್ಯಾದ ವೈಮಾನಿಕ ಮತ್ತು ಆರ್ಟಿಲರಿ ದಾಳಿಗಳು ನಿರಂತರವಾಗಿ ನಡೆದಿದೆ. ಉಕ್ರೇನ್ ಸೇನಾ ಪಡೆಯ ಕಮ್ಯಾಂಡ್ ಸೆಂಟರ್‌ಗಳು, ಮದ್ದುಗುಂಡು ಸಂಗ್ರಹ ಕೇಂದ್ರಗಳು ರಷ್ಯನ್ ದಾಳಿಯ ಪ್ರಮುಖ ಗುರಿಗಳಾಗಿವೆ.
   5:49 PM, 22 May
   ಅಮೆರಿಕ ಅಧ್ಯಕ್ಷ ಜೋ ಬೈಡನ್ ಯುದ್ಧ ಪೀಡಿತ ಉಕ್ರೇನ್‌ಗೆ ಹೆಚ್ಚುವರಿಯಾಗಿ 40 ಬಿಲಿಯನ್ ಡಾಲರ್ ನೆರವು ನೀಡುವ ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ. ರಷ್ಯಾ-ಉಕ್ರೇನ್ ಯುದ್ದ ಆರಂಭಗೊಂಡ ಬಳಿಕ ಅಮೆರಿಕ ನಿರಂತರವಾಗಿ ಉಕ್ರೇನ್‌ಗೆ ಆರ್ಥಿಕ, ಸೇನಾ ನೆರವು ನೀಡುತ್ತಿದೆ.
   1:11 PM, 22 May
   ಉಕ್ರೇನ್‌ನ ಬಂದರು ನಗರ ಮಾರಿಯುಪೋಲ್‌ನ ಅಜೋವ್‌ಸ್ಟಾಲ್ ಉಕ್ಕಿನ ಘಟಕದಲ್ಲಿ ಅಡಗದ್ದ ಉಕ್ರೇನ್ ಸೈನಿಕರ ಕೊನೆಯ ಗುಂಪು ಸಹ ಶರಣಾಗಿದೆ. 531 ಸೈನಿಕರು ಶರಣಾಗುವ ಮೂಲಕ ವಾರಗಳಿಂದ ನಡೆದಿದ್ದ ದಾಳಿ ಅಂತ್ಯವಾಗಿದೆ. ರಷ್ಯಾದ ರಕ್ಷಣಾ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದ್ದು, ಉಕ್ಕಿನ ಘಟಕದಲ್ಲಿದ್ದ 2,439 ಉಕ್ರೇನಿಯನ್ ಸೈನಿಕರು ಶರಣಾಗಿದ್ದಾರೆ ಎಂದು ತಿಳಿಸಿದೆ.
   12:03 PM, 22 May
   ಮಾರಿಯುಪೋಲ್ ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ರಷ್ಯಾ ಹೇಳಿದೆ. ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ಇದು ಅತಿದೊಡ್ಡ ವಿಜಯವಾಗಿದೆ. ಬಂದರು ನಗರವನ್ನು ವಶಪಡಿಸಿಕೊಳ್ಳುವ ವಾರಗಳ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ವರದಿ ನೀಡಿದ್ದಾರೆ.
   10:44 AM, 22 May
   ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸುವ ಸೂಚನೆ ನೀಡಿದೆ. ಇಸ್ಕಾಂಡರ್ ಕ್ಷಿಪಣಿ ಲಾಂಚರ್‌ಗಳನ್ನು ಬೆಲ್ಗೊರೊಡ್ ಒಬ್ಲಾಸ್ಟ್‌ ಪ್ರದೇಶದಲ್ಲಿ ನಿಯೋಜಿಸುತ್ತಿದೆ. ಉಕ್ರೇನ್‌ನ ಸಶಸ್ತ್ರ ಪಡೆಗಳ ಜನರಲ್ ಈ ಕುರಿತು ಮಾಹಿತಿ ನೀಡಿದ್ದಾರೆ. ಇಸ್ಕಾಂಡರ್-ಎಂ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಲಾಂಚರ್‌ಗಳನ್ನು ರಷ್ಯಾ ಬೆಲ್ಗೊರೊಡ್ ಒಬ್ಲಾಸ್ಟ್‌ನಲ್ಲಿ ನಿಯೋಜಿಸಿದೆ. ಇದು ಉಕ್ರೇನ್ ಗಡಿಯಿಂದ 20 ಮೈಲಿಗಳಿಗಿಂತ ಕಡಿಮೆ ದೂರದಲ್ಲಿದೆ ಎಂದು ಹೇಳಿದ್ದಾರೆ.
   9:36 AM, 22 May
   ರಷ್ಯಾದ ಗಾಜ್‌ಪ್ರೊಮ್ ಪ್ರದೇಶದಿಂದ ಪಕ್ಕದ ಫಿನ್‌ಲ್ಯಾಂಡ್‌ಗೆ ಅನಿಲ ರಫ್ತುಗಳನ್ನು ನಿಲ್ಲಿಸಲಾಗಿದೆ. ರಷ್ಯಾ ಈಗಾಗಲೇ ಅನಿಲ ಪೂರೈಕೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭವಾದ ಮೇಲೆ ರಷ್ಯಾ ಮೇಲೆ ಅನೇಕ ದೇಶಗಳು ಆರ್ಥಿಕ ನಿರ್ಬಂಧ ಹೇರಿವೆ.
   8:02 AM, 22 May
   ರಷ್ಯಾ ಪಡೆಗಳು ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿನ ಸೆವೆರೊಡೊನೆಟ್ಸ್ಕ್ ವಶಪಡಿಸಿಕೊಳ್ಳಲು ಅಂತಿಮ ಪ್ರಯತ್ನಗಳನ್ನು ನಡೆಸುತ್ತಿವೆ. ಮತ್ತೊಂದು ಕಡೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾರಿಯುಪೋಲ್‌ನ ಅಜೋವ್‌ಸ್ಟಲ್ ಉಕ್ಕು ಸ್ಥಾವರದಲ್ಲಿ ಶರಣಾದ ತನ್ನ ಸೈನಿಕರನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದು ರಷ್ಯಾಗೆ ಸಂದೇಶ ರವಾನೆ ಮಾಡಿದ್ದಾರೆ.
   10:46 PM, 21 May
   "ನಮ್ಮ ನೆಲದ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಮೊದಲ ದಿನಗಳಿಂದಲೂ ಪೋರ್ಚುಗಲ್ ಉಕ್ರೇನ್‌ಗೆ ಸಹಾಯ ಮಾಡುತ್ತಿದೆ,” ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
   10:45 PM, 21 May
   ಪೋರ್ಚುಗಲ್‌ನ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಅವರು ಇಂದು ಕೀವ್‌ಗೆ ಭೇಟಿ ನೀಡಿದರು. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಜಂಟಿಯಾಗಿ ಕಾಣಿಸಿಕೊಂಡು ಸಹಾಯದ ಕುರಿತು ಚರ್ಚಿಸಿದರು ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
   5:02 PM, 21 May
   ಉಕ್ರೇನ್ ಪ್ರಧಾನಿ ವೊಲೋಡಿಮಿರ್ ಝೆಲೆನ್ಸ್ಕಿ ಆಹ್ವಾನದ ಮೇರೆಗೆ ಪೋರ್ಚುಗಲ್ ಪ್ರಧಾನಿ ಶನಿವಾರ ಉಕ್ರೇನ್‌ನ ಕೀವ್ ನಗರ ತಲುಪಿದ್ದಾರೆ. ನಾವು ರಷ್ಯಾದ ಆಕ್ರಮಣವನ್ನು ಬಲವಾಗಿ ಖಂಡಿಸುತ್ತೇವೆ. ಉಕ್ರೇನ್ ಮತ್ತು ಈ ದೇಶದ ಜನರಿಗೆ ಬೆಂಬಲವಾಗಿ ನಾನು ಇಲ್ಲಿಗೆ ಬಂದಿರುವುದಾಗಿ ಪೋರ್ಚುಗಲ್ ಪ್ರಧಾನಿಗಳು ಹೇಳಿದ್ದಾರೆ.
   4:57 PM, 21 May
   ಉಕ್ರೇನ್‌ನ ಕೀವ್ ನಗರದ ಪಶ್ಚಿಮಕ್ಕಿರುವ ಝೈಟೊಮೈರ್ ಪ್ರದೇಶದಲ್ಲಿ ಪಾಶ್ಚಿಮಾತ್ಯ ದೇಶಗಳಿಂದ ಸರಬರಾಜು ಆಗುತ್ತಿದ್ದ ಶಸ್ತ್ರಾಸ್ತ್ರ ಸಂಗ್ರಹವನ್ನು ನಾಶ ಮಾಡಿರುವುದಾಗಿ ರಷ್ಯಾ ಮಿಲಿಟರಿ ಶನಿವಾರ ಹೇಳಿದೆ.
   4:55 PM, 21 May
   APEC ಸಭೆಯಿಂದ ಅಮೆರಿಕ ಹೊರಕ್ಕೆ
   ಏಷ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ಸಭೆಯೊಂದರಿಂದ ಅಮೆರಿಕ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಹೊರಬಂದಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣವನ್ನು ಖಂಡಿಸಿ ಈ ನಡೆ ಇಡಲಾಗಿದೆ. ಬ್ಯಾಂಕಾಕ್‌ನಲ್ಲಿ ಎಪೆಕ್ ಸಭೆ ನಡೆಯುತ್ತಿದೆ.
   2:32 PM, 21 May
   ವಿದೇಶೀ ಏಜೆಂಟ್ ಪಟ್ಟಿಗೆ ಚೆಸ್ ಚಾಂಪಿಯನ್
   ಉಕ್ರೇನ್‌ನ ಕಲೂಶ್ ಆರ್ಕೆಸ್ಟ್ರಾ ಎಂಬ ಸಂಗೀತ ತಂಡ ಯೂರೋವಿಷನ್ ಗಾಯನ ಸ್ಪರ್ಧೆಯನ್ನು ಗೆದ್ದಿದೆ. ತನ್ನ ದೇಶದ ಸೈನಿಕರಿಗೆ ಹಣದ ದೇಣಿಗೆ ಸಂಗ್ರಹಿಸಲು ಈ ತಂಡ ಯೂರೋಪ್‌ನಾದ್ಯಂತ ಪ್ರವಾಸ ಕೈಗೊಳ್ಳಲು ನಿಶ್ಚಯಿಸಿದೆ. ಮಾಜಿ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರನ್ನು ವಿದೇಶೀ ಏಜೆಂಟ್‌ಗಳ ಪಟ್ಟಿಗೆ ಸೇರಿಸಿದ ರಷ್ಯಾ ಸರಕಾರ. ಸಾರ್ವಕಾಲಿಕ ಶ್ರೇಷ್ಠ ಚೆಸ್ ಆಟಗಾರನೆಂದು ಪರಿಗಣಿತವಾಗಿರುವ ಕ್ಯಾಸ್ಪರೋವ್ ಮೊದಲಿಂದಲೂ ಪುಟನ್ ಸರಕಾರದ ಕಟುವಿಮರ್ಶಕರಾಗಿರುವವರು.
   2:29 PM, 21 May
   ಉಕ್ರೇನ್‌ನ ಕಲೂಶ್ ಆರ್ಕೆಸ್ಟ್ರಾ ಎಂಬ ಸಂಗೀತ ತಂಡ ಯೂರೋವಿಷನ್ ಗಾಯನ ಸ್ಪರ್ಧೆಯನ್ನು ಗೆದ್ದಿದೆ. ತನ್ನ ದೇಶದ ಸೈನಿಕರಿಗೆ ಹಣದ ದೇಣಿಗೆ ಸಂಗ್ರಹಿಸಲು ಈ ತಂಡ ಯೂರೋಪ್‌ನಾದ್ಯಂತ ಪ್ರವಾಸ ಕೈಗೊಳ್ಳಲು ನಿಶ್ಚಯಿಸಿದೆ.
   11:40 AM, 21 May
   ಕ್ಯಾನಸ್ ಚಿತ್ರೋತ್ಸವದಲ್ಲಿ ಬೆತ್ತಲೆ ಪ್ರತಿಭಟನೆ
   ಫ್ರಾನ್ಸ್ ದೇಶದಲ್ಲಿ ನಡೆಯುತ್ತಿರುವ ಕ್ಯಾನಸ್ ಚಲನಚಿತ್ರೋತ್ಸವ ಸಂದರ್ಭದಲ್ಲಿ ಮಹಿಳೆಯೊಬ್ಬಳು ಬೆತ್ತಲಾಗಿ ಓಡುತ್ತಾ ರಷ್ಯಾ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಜಾರ್ಜ್ ಮಿಲ್ಲರ್ ನಿರ್ದೇಶನದ "ಥ್ರೀ ಥೌಸೆಂಡ್ ಇಯರ್ಸ್ ಆಫ್ ಲಾಂಗಿಂಗ್" ಎಂಬ ಸಿನಿಮಾ ಶೋ ಮುಂಚಿನ ರೆಡ್ ಕಾರ್ಪೆಟ್ ಮೆರವಣಿಗೆ ಸಂದರ್ಭದಲ್ಲಿ ಈ ಮಹಿಳೆ ತನ್ನ ಬಟ್ಟೆ ಹರಿದುಕೊಂಡು ಕಾರ್ಪೆಟ್ ಮೇಲೆ ಓಡಿದ್ದಾಳೆ. ಉಕ್ರೇನ್ ಬಾವುಟದಿಂದ ತನ್ನ ಗುಪ್ತಾಂಗವನ್ನು ಮುಚ್ಚಿಕೊಂಡಿದ್ದು ಬಿಟ್ಟರೆ ಈಕೆ ಸಂಪೂರ್ಣ ಬೆತ್ತಳಾಗಿದ್ದಳು. ಬೆನ್ನ ಕೆಳಗನ ಭಾಗದಲ್ಲಿ "ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ" ಎಂದು ಬರೆದಿದ್ದಳು. ತನ್ನ ಕಾಲಿಗೆ ಈಕೆ ಕೆಂಪು ಬಣ್ಣದಿಂದ ಪೇಂಟ್ ಮಾಡಿಕೊಂಡಿದ್ದಳು. ನಮ್ಮನ್ನು ರೇಪ್ ಮಾಡಬೇಡಿ ಎಂದು ಕೂಗತ್ತಾ ಈಕೆ ರೆಡ್ ಕಾರ್ಪೆಟ್ ಮೇಲೆ ಓಡಿದ್ದಳು.
   10:15 AM, 21 May
   ಮಾರ್ಚ್‌ನಲ್ಲಿ ರಷ್ಯಾ ವಿನಾಶಕಾರಿ ಬಾಂಬ್ ಅನ್ನು ಹಾಕಿದ ಮಾರಿಯುಪೋಲ್ ಥಿಯೇಟರ್‌ನಿಂದ ಎಲ್ಲಾ ಜನರ ದೇಹಗಳನ್ನು ರಷ್ಯಾ ಹೊರತೆಗೆದಿದೆ ಎಂದು ಮಾರಿಯುಪೋಲ್ ಮೇಯರ್‌ನ ಸಲಹೆಗಾರ ಹೇಳಿದ್ದಾರೆ. ವರದಿಯ ಪ್ರಕಾರ, ಸುಮಾರು 300 ಜನರು ಚಿತ್ರಮಂದಿರದಲ್ಲಿ ಆಶ್ರಯ ಪಡೆದಿದ್ದರು ಮತ್ತು ರಷ್ಯಾದ ಬಾಂಬ್ ದಾಳಿಯಲ್ಲಿ ಎಲ್ಲಾ 300 ಜನರು ಸಾವನ್ನಪ್ಪಿದ್ದಾರೆ.
   10:14 AM, 21 May
   ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ ಅವರು ತಡರಾತ್ರಿ ಬಿಡುಗಡೆ ಮಾಡಿದ ತಮ್ಮ ನಿಯಮಿತ ವಿಡಿಯೊದಲ್ಲಿ ರಷ್ಯಾ ಉಕ್ರೇನ್‌ನಲ್ಲಿ ವಿನಾಶವನ್ನು ಉಂಟುಮಾಡಿದೆ ಮತ್ತು ಡಾನ್‌ಬಾಸ್ ಅನ್ನು ಸಂಪೂರ್ಣವಾಗಿ ಹಾಳುಮಾಡಿದೆ ಎಂದು ಹೇಳಿದ್ದಾರೆ. ಇದರೊಂದಿಗೆ, ದಾಳಿಯಲ್ಲಿ ಉಕ್ರೇನ್‌ನಲ್ಲಿ ಉಂಟಾದ ಹಾನಿಯನ್ನು ರಷ್ಯಾ ಸರಿದೂಗಿಸಬೇಕು ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ.
   READ MORE

   English summary
   Russia-Ukraine War News Live Updates in Kannada: Russian President Vladimir Putin announced war on Ukraine. Stay tuned for live updates, latest news and highlights in kannada. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X