Ukraine War: ಪುಟಿನ್ ಕೊಟ್ಟ ಏಟಿಗೆ ನಲುಗಿದ ಉಕ್ರೇನ್, ಯುದ್ಧ ಸೋಲುತ್ತಾ ಉಕ್ರೇನ್?

ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ರಣಭೀಕರ ಕಾಳಗದ ಕಥೆ ಇನ್ನೂ 10 ವರ್ಷಗಳ ಕಾಲ ಅಂದ್ರೆ ಒಂದು ದಶಕ ಮುಂದುವರಿಯುತ್ತೆ ಅಂತಾ ಕಾಣುತ್ತೆ ಯಾಕಂದ್ರೆ ಉಕ್ರೇನ್ & ರಷ್ಯಾ ನಡುವಿನ ವಾರ್ ಅಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಪ್ರತಿಕ್ಷಣ ಕೂಡ ಈ ಯುದ್ಧ ಕೈಮೀರಿ ಹೋಗುತ್ತಿದೆ. ಇದೇ ಕಾರಣಕ್ಕೆ ತಕ್ಷಣ ಈ ಯುದ್ಧ ನಿಲ್ಲಿಸಬೇಕು ಅನ್ನೋ ಒತ್ತಾಯವನ್ನು ಪದೇ ಪದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳು ಮಾಡುತ್ತಾ ಇವೆ. ಹೀಗಿದ್ದರೂ ಉಕ್ರೇನ್ & ರಷ್ಯಾ ಮಾತ್ರ ವೈರಿಗಳಂತೆ ಕಚ್ಚಾಡುತ್ತಿವೆ. ಹಾಗಾದ್ರೆ ಮುಂದಿನ ಪರಿಸ್ಥಿತಿ ಹೇಗೆ ಇರಲಿದೆ?

ಯುರೋಪ್ ದೇಶಗಳು ಇದೀಗ ಉಕ್ರೇನ್ ಬೆನ್ನಿಗೆ ನಿಂತಿದ್ದು, ಮತ್ತೊಂದು ಕಡೆ ಅಮೆರಿಕ ಕೂಡ ಈ ಸಮಯದಲ್ಲಿ ಉಕ್ರೇನ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಇದಕ್ಕೆಲ್ಲಾ ಡೋಂಟ್ ಕೇರ್ ಅಂತಾ ದಾಳಿ ಮುಂದುವರಿಸಿದೆ ರಷ್ಯಾ ಮಿಲಿಟರಿ. ಇಂತಹ ಸಮಯದಲ್ಲಿ ಕೂಡ ಮತ್ತೊಂದು ಆತಂಕ ಈಗ ಎದುರಾಗಿದ್ದು, ಎರಡೂ ದೇಶಗಳು ಇನ್ನಷ್ಟು ದೊಡ್ಡ ದೊಡ್ಡ ಅಸ್ತ್ರಗಳನ್ನು ಬಳಕೆ ಮಾಡಲಿವೆಯಾ? ಅನ್ನೋ ಚರ್ಚೆ ಶುರುವಾಗಿದೆ. ಇಂತಹ ಭಾರಿ ಸಂಕಷ್ಟದ ಸಮಯದಲ್ಲೇ, ಪುಟಿನ್ ಕೊಟ್ಟ ಏಟಿಗೆ ನಲುಗಿದ ಉಕ್ರೇನ್ ಮುಂದೆ ಏನು ಮಾಡಲಿದೆ?

Russia May Face Some More Sanctions From US After New Attacks On Ukraine

ಭಾರಿ ದೊಡ್ಡ ಏಟು ಕೊಟ್ಟ ಪುಟಿನ್!

ಹೌದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ಬಾರಿ ದೊಡ್ಡ ಮಟ್ಟಿಗೆ ಏಟು ಕೊಟ್ಟಿದ್ದಾರೆ. ತಮ್ಮ ಶತ್ರು ದೇಶ ಉಕ್ರೇನ್‌ಗೆ ಸರಿಯಾದ ಪಾಠ ಕಲಿಸಿದ್ದಾರೆ. ಹೀಗಿದ್ದಾಗ ಕೂಡ ಉಕ್ರೇನ್ ಅಧ್ಯಕ್ಷರ ವರ್ತನೆ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ದಿಢೀರ್ ಅಂತಾ ರಷ್ಯಾ ಮಿಲಿಟರಿ ಉಕ್ರೇನ್ ವಿರುದ್ಧ ಭಾರಿ ದೊಡ್ಡ ದಾಳಿಯನ್ನ ನಡೆಸಿದ್ದು, ಸೈಲೆಂಟ್ ಆಗಿ ಇರಬೇಕು ಅಂತಾ ಇದೀಗ ವಾರ್ನಿಂಗ್ ಕೊಟ್ಟಿದೆ ರಷ್ಯಾ ಸೇನೆ. ಹೀಗಿದ್ದರೂ ಮುಂದಿನ ದಿನಗಳಲ್ಲಿ ಈ ಇಬ್ಬರ ನಡುವೆ ಭರ್ಜರಿ ವಾರ್ ನಡೆಯುವ ಮುನ್ಸೂಚನೆ ಸಿಗುತ್ತಿದೆ.

ಸಹಾಯಕ್ಕಾಗಿ ಬೇಡುತ್ತಿದೆ ಉಕ್ರೇನ್ ದೇಶ!

ಯುದ್ಧ.. ಯುದ್ಧ.. ಯುದ್ಧ... ಅಂದಹಾಗೆ ಉಕ್ರೇನ್ & ರಷ್ಯಾ ಯುದ್ಧವು ಭಯಾನಕವಾಗುತ್ತಿದೆ. 2022ರ ಫೆಬ್ರವರಿ ತಿಂಗಳಲ್ಲಿ ಶುರುವಾದ ರಷ್ಯಾ VS ಉಕ್ರೇನ್ ಯುದ್ಧವು ಈಗಲೂ ಹೊತ್ತಿ ಉರಿಯುತ್ತಿದೆ. ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡಿರುವ ಭೀಕರ ಯುದ್ಧ ತಣ್ಣಗಾಗಿಲ್ಲ. ಈ ಸಮಯದಲ್ಲಿ ರಷ್ಯಾ ಕೂಡ ದಾಳಿ ಮತ್ತಷ್ಟು ಭೀಕರಗೊಳಿಸಿ ಶತ್ರು ಮೇಲೆ ಎರಗುತ್ತಿದೆ. ಆದರೆ ಅತ್ತ ಉಕ್ರೇನ್ ಸೇನೆ ಕೈಯಲ್ಲಿ ಕಾಸಿಲ್ಲದೆ ನರಳುತ್ತಿದ್ದು, ಅಮೆರಿಕ & ಯುರೋಪ್ ದೇಶಗಳ ಎದುರು ಅಂಗಲಾಚಿ ಬೇಡುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+