Cancer vaccine: ಕ್ಯಾನ್ಸರ್‌ಗೆ ಬಂದೇ ಬಿಡ್ತು ಲಸಿಕೆ: ಬಳಕೆ ಯಾವಾಗಿನಿಂದ? ಇಲ್ಲಿದೆ ಮಾಹಿತಿ
Cancer vaccine: ಈಗಾಗಲೇ ಕೋವಿಡ್-19 ವೇಳೆ ತುಂಬಾ ಜನ ಸಾವನ್ನಪ್ಪಿದ ಉದಾಹರಣೆಗಳಿದ್ದು, ಇದಕ್ಕೆ ಲಸಿಕೆಯನ್ನು ಸಹ ಕಂಡುಹಿಡಿಯಲಾಗಿತ್ತು. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆಗಳನ್ನು ಕೋವಿಡ್ ನಿಯಂತ್ರಣಕ್ಕೆ ಬಳಸಲಾಗಿತ್ತು. ಇದೀಗ ಮಾರಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ನಿಯಂತ್ರಣಕ್ಕೂ ಕೂಡ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹಾಗಾದ್ರೆ ಇದನ್ನು ತಯಾರಿಸಿದ್ದು ಎಲ್ಲಿ ಹಾಗೂ ಇದು ಯಾವಾಗ ಪರಿಚಯವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಾರಕ ಕ್ಯಾನ್ಸರ್‌ಗೆ ಯಾವಾಗ ಲಸಿಕೆ ಬರಲಿದೆ ಎಂದು ಈ ಕಾಯಿಲೆಗೆ ತುತ್ತಾಗಿರುವವರು ಕಾಯುತ್ತಿದ್ದರು. ಇದೀಗ ಇಂತಹವರಿಗೆ ರಷ್ಯಾ ವಿಜ್ಞಾನಿಗಳು ಸಿಹಿಸುದ್ದಿಯನ್ನು ನೀಡಿದ್ದಾರೆ. ಕ್ಯಾನ್ಸರ್ ವಿರುದ್ಧ ರೋಗನಿರೋಧಕ ವ್ಯವಸ್ಥೆ ಅಭಿವೃದ್ಧಿಪಡಿಸುವ ಲಸಿಕೆಯನ್ನು ರಷ್ಯಾದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಎಆರ್‌ಎನ್‌ಎ ಆಧರಿತ ಈ ವ್ಯಾಕ್ಸಿನ್ ಪೂರ್ವ ಕ್ಲಿನಿಕಲ್ ಟ್ರಯಲ್‌ನಲ್ಲಿ ಶೇಕಡ 100ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಸಾಬೀತಾಗಿದೆ. ಆದರೆ, ಇದರ ಬಳಕೆಗೆ ಅಂತಿಮ ಒಪ್ಪಿಗೆ ಸಿಗುವುದೊಂದು ಬಾಕಿಯಿದೆ.

ಬಳಕೆ ಯಾವಾಗಿನಿಂದ?: ಪ್ರತಿವರ್ಷ ಏನಿಲ್ಲ ಅಂದರೂ ವಿಶ್ವಾದ್ಯಂತ ಕ್ಯಾನ್ಸರ್‌ಗೆ ಲಕ್ಷಾಂತರ ಮಂದಿ ತುತ್ತಾಗುತ್ತಿದ್ದು, ಇವರಿಗೆ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ಮೂಲಕ ರಷ್ಯಾದ ವಿಜ್ಞಾನಿಗಳು ಶುಭಸುದ್ದಿ ನೀಡಿದ್ದಾರೆ. ರಷ್ಯಾ ಸರ್ಕಾರವು ಈ ವ್ಯಾಕ್ಸಿನ್ ಬಳಕೆಗೆ ಅಂತಿಮ ಒಪ್ಪಿಗೆ ನೀಡಬೇಕಿದೆ. ಒಪ್ಪಿಗೆ ಸಿಕ್ಕ ಬಳಿಕವೇ ಇದು ವಿಶ್ವದ ಮೊದಲ ಕ್ಯಾನ್ಸರ್ ಲಸಿಕೆ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿದೆ.
ಇದು ಯಶಸ್ವಿಯಾಗಿದ್ದು ಹೇಗೆ?: ಎಂಟರೋಮಿಕ್ಸ್ (Enteromix) ಎಂಬ ಹೆಸರಿನ ಈ ವ್ಯಾಕ್ಸಿನ್ ಅನ್ನು ಪೂರ್ವ ಕ್ಲಿನಿಕಲ್ ಟ್ರಯಲ್‌ನಲ್ಲಿ ದೊಡ್ಡ ಕ್ಯಾನ್ಸರ್ ಟ್ಯೂಮರ್ ಹೊಂದಿರುವ ರೋಗಿಗಳ ಮೇಲೆ ಪ್ರಯೋಗಿ ಮಾಡಲಾಗಿದೆ. ಈ ವೇಳೆ ಕ್ಯಾನ್ಸರ್ ನಾಶ ಮಾಡುವ ಮೂಲಕ ಟ್ಯೂಮರ್‌ನ ಗಾತ್ರವನ್ನೂ ಕೆಡಿಮೆ ಮಾಡುವಲ್ಲಿ ವ್ಯಾಕ್ಸಿನ್ ಯಶಸ್ವಿ ಆಗಿದೆ ಎಂದು ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ಫೆಡರಲ್ ಮೆಡಿಕಲ್ ಆ್ಯಂಡ್ ಬಯೋಲಾಜಿಕಲ್ ಏಜೆನ್ಸಿ (FMBA) ತಿಳಿಸಿದೆ ಎಂದು ವರದಿಯಾಗಿದೆ.
ಇದನ್ನು ತಯಾರು ಮಾಡಿದ್ದೇಗೆ?: ಎಂಆರ್‌ಎನ್‌ಎ ತಂತ್ರಜ್ಞಾನ ಬಳಕೆ ಮಾಡಿಕೊಂಡು ಈ ವ್ಯಾಕ್ಸಿನ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಕ್ಯಾನ್ಸರ್ ಕೋಶಗಳ ವಿರುದ್ಧ ಪ್ರತಿರೋಧಕ ಶಕ್ತಿಯ ಮೂಲಕ ಪ್ರತಿಕ್ರಿಯೆ ನೀಡುವ ಪ್ರೊಟೀನ್ ಉತ್ಪಾದಿಸಲು ನಮ್ಮ ದೇಹದ ಜೀವಕೋಶಗಳಿಗೆ ಈ ವ್ಯಾಕ್ಸಿನ್ ಉತ್ತೇಜನ ನೀಡಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.












Click it and Unblock the Notifications