ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಸ್ಫೋಟ, 10 ಜನರಿಗೆ ಗಾಯ

Posted By:
Subscribe to Oneindia Kannada

ಸೇಂಟ್ ಪೀಟರ್ಸ್ ಬರ್ಗ್ (ರಷ್ಯಾ), ಡಿಸೆಂಬರ್ 28 : ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನ ಸೂಪರ್ ಮಾರ್ಕೆಟ್ ವೊಂದರಲ್ಲಿ ಬುಧವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಜನರು ಗಾಯಗೊಂಡಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಈ ಕೃತ್ಯದ ಹಿಂದಿನ ಕಾರಣ ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ವರದಿಯ ಪ್ರಕಾರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗಾಯಗೊಂಡವರು ಕನಿಷ್ಠ 10 ಜನರಿರಬಹುದು ಎಂದು ಹೇಳಲಾಗಿದೆ.

ಗ್ರಾಹಕರು ತಮ್ಮ ಬ್ಯಾಗ್ ಗಳನ್ನು ಇಡುವ ಸ್ಥಳದಲ್ಲಿ ಲಾಕರ್ ನಲ್ಲಿ ಸ್ಫೋಟ ಸಂಭವಿಸಿದೆ ಎಂದು ರಷ್ಯಾದ ತನಿಖಾ ಸಂಸ್ಥೆ ದಿ ಇನ್ವೆಸ್ಟಿಗೇಟಿವ್ ಕಮಿಟಿ ಹೇಳಿಕೆ ನೀಡಿದೆ. ಸ್ಫೋಟಗೊಂಡ ಕೂಡಲೆ ಜನರನ್ನು ಸ್ಥಳಾಂತರಿಸಲಾಗಿದೆ.

Russia: Blast in St Petersburg supermarket, 10 injured

ಪ್ರಾಥಮಿಕ ವರದಿಯ ಪ್ರಕಾರ, ಸ್ಫೋಟಕವನ್ನು ಲೋಹದ ತುಣುಕುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿರಬಹುದು. ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 2017 ಕಳೆಯಲು ಇನ್ನು ಕೆಲವೇ ದಿನಗಳು ಇರುವುದರಿಂದ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 10 people were reported injured after a blast in a supermarket in St Petersburg, Russia.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ