ನ್ಯೂಕ್ಲಿಯರ್ ದಾಳಿಗೆ ಅಣಿಯಾದ ರಷ್ಯಾ ಸೇನೆ; ಪುಟಿನ್‌ಗೆ ಸಚಿವಾಲಯದ ಮಾಹಿತಿ

ಕೀವ್, ಫೆಬ್ರವರಿ 28: ಉಕ್ರೇನ್‌ನಲ್ಲಿ ಭಾರೀ ಹೋರಾಟ ಮತ್ತು ವೈಮಾನಿಕ ದಾಳಿಗಳು ಮುಂದುವರೆದಿದೆ. ಪರಮಾಣು ದಾಳಿಗೆ ಸಂಬಂಧಿಸಿದಂತೆ ಸೈನಿಕರು ಸರ್ವ ಸನ್ನದ್ಧ ರೀತಿಯಲ್ಲಿ ನಿಂತಿದ್ದಾರೆ ಎಂದು ಷ್ಯಾದ ರಕ್ಷಣಾ ಸಚಿವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರಿಗೆ ತಿಳಿಸಿದರು ಎಂದು ವರದಿಯಾಗಿದೆ. ನ್ಯೂಕ್ಲಿಯರ್ ದಾಳಿಗೆ ಸಂಬಂಧಿಸಿದಂತೆ ರಷ್ಯಾದ ಸಿಬ್ಬಂದಿಯನ್ನು ಬಲಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರವಷ್ಟೇ ತಮ್ಮ ರಕ್ಷಣಾ ಸಚಿವರು ಮತ್ತು ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ಖಡಕ್ ಸಂದೇಶವೊಂದನ್ನು ರವಾನಿಸಿದ್ದರು. ಪರಮಾಣು ನಿರೋಧಕ ಪಡೆಗಳನ್ನು "ಯುದ್ಧಕ್ಕಾಗಿ ಸನ್ನದ್ಧ ರೀತಿಯಲ್ಲಿ ಇರಿಸುವಂತೆ ನಿರ್ದೇಶಿಸಿದ್ದರು. ಈ ಹಿನ್ನೆಲೆ ಸೇನಾ ಸನ್ನದ್ಧತೆ ಬಗ್ಗೆ ಸಚಿವರು ಪುಟಿನ್‌ರಿಗೆ ಮಾಹಿತಿ ನೀಡಿದ್ದಾರೆ.

ರಷ್ಯಾ ಪರಮಾಣು ದಾಳಿಗೆ ಸಂಬಂಧಿಸಿದಂತೆ ನೀಡಿದ ಎಚ್ಚರಿಕೆಗೆ ಪಾಶ್ಚಿಮಾತ್ಯ ರಾಷ್ಟ್ರಗಳು ತೀವ್ರವಾಗಿ ಪ್ರತಿಕ್ರಿಯೆ ನೀಡಿವೆ. ಇದೇ ವೇಳೆ ವಿಶ್ವಸಂಸ್ಥೆಯ ನ್ಯೂಕ್ಲಿಯರ್ ವಾಚ್ ಡಾಗ್ ಪರಿಸ್ಥಿತಿ ಕುರಿತು ತುರ್ತುಸಭೆ ಕರೆದು ಚರ್ಚೆ ನಡೆಸಿದೆ.

Russia army is Ready Position to nuclear Attack, defence ministry Explained on situation

"ಅಪಾಯಕಾರಿ ಮತ್ತು ಬೇಜವಾಬ್ದಾರಿ" ಎಂದ ನ್ಯಾಟೋ:

ಪರಮಾಣು ಎಚ್ಚರಿಕೆಯನ್ನು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ "ಅಪಾಯಕಾರಿ ಮತ್ತು ಬೇಜವಾಬ್ದಾರಿ" ಎಂದು ಕರೆದಿದ್ದಾರೆ. ಪರಮಾಣು ಎಚ್ಚರಿಕೆಯ ಬಗ್ಗೆ ಮಾತನಾಡುವ ಮೂಲಕ ರಷ್ಯಾದ ಅಧ್ಯಕ್ಷರು ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಶ್ವೇತಭವನ ಆರೋಪಿಸಿದೆ.

36 ದೇಶಗಳ ವಿಮಾನ ಸಂಚಾರಕ್ಕೆ ನಿರ್ಬಂಧ:

ಉಕ್ರೇನ್ ಆಕ್ರಮಣದ ನಂತರ ಹಲವಾರು ರಾಷ್ಟ್ರಗಳು ರಷ್ಯಾವನ್ನು ತನ್ನ ವಾಯುಪ್ರದೇಶದಿಂದ ನಿಷೇಧಿಸಿದೆ. ಇದರ ಬೆನ್ನಲ್ಲೇ ರಷ್ಯಾ ಸರ್ಕಾರವು 36 ದೇಶಗಳಿಂದ ವಿಮಾನಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ.

ಯುರೋಪಿಯನ್ ಒಕ್ಕೂಟ ಸೇರುವ ವಿಶ್ವಾಸದಲ್ಲಿ ಝೆಲೆನ್ಸ್ಕಿ:

ಉಕ್ರೇನ್ ಮೇಲೆ ರಷ್ಯಾದ ನಡೆಸುತ್ತಿರುವ ಯುದ್ಧವು ಐದನೇ ದಿನಕ್ಕೆ ಕಾಲಿಟ್ಟಿದೆ. ಯುರೋಪಿಯನ್ ರಾಷ್ಟ್ರದ ಪರವಾಗಿರುವ ಉಕ್ರೇನ್ ದೇಶಕ್ಕೆ ತಕ್ಷಣವೇ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್ ರಾಷ್ಟ್ರಕ್ಕೆ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ತಕ್ಷಣವೇ ಸದಸ್ಯತ್ವವನ್ನು ನೀಡಬೇಕು. ಏಕೆಂದರೆ ಯುರೋಪಿಯನ್ ದೇಶಗಳ ಜೊತೆಗೆ ಒಂದಾಗಿರುವುದೇ ನಮ್ಮ ಮುಖ್ಯ ಗುರಿಯಾಗಿದೆ. ಮುಖ್ಯವಾಗಿ ಸಮಾನ ಪಾದದಲ್ಲಿರಬೇಕಾಗಿದೆ. ನ್ಯಾಯಯುತವಾದ ನಮ್ಮ ಉದ್ದೇಶವು ಸಾಕಾರಗೊಳ್ಳಲಿದೆ ಎಂದು ಝೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+