ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಭಾರಿ ಪ್ರವಾಹ: 66 ಮಂದಿ ಸಾವು

|
Google Oneindia Kannada News

ಜಕಾರ್ತಾ, ಜನವರಿ 6: ಇಂಡೋನೇಷ್ಯಾದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯಿಂದ ಜನರ ಪರದಾಟ ಮುಂದುವರಿದಿದ್ದು, ಮಳೆ ಮತ್ತು ನೆರೆಯ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ 66ಕ್ಕೆ ಏರಿದೆ. ಇನ್ನೂ ಇಬ್ಬರು ಕಣ್ಮರೆಯಾಗಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿಯೇ ಇದು ಅತ್ಯಂತ ಭಯಾನಕ ಮಳೆಗಾಲ ಎಂಬುದಾಗಿ ಇಂಡೋನೇಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಚುಮುಚುಮು ಚಳಿಗೆ ಮಳೆಯ ಸಿಂಚನಬೆಂಗಳೂರಿನ ಚುಮುಚುಮು ಚಳಿಗೆ ಮಳೆಯ ಸಿಂಚನ

ಹೊಸ ವರ್ಷದ ಹಿಂದಿನ ದಿನದಿಂದಲೂ ರಾಜಧಾನಿ ಜಕಾರ್ತಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ತೀವ್ರವಾಗಿದ್ದು, ಸಾವಿರಾರು ಮಂದಿ ತಮ್ಮ ಮನೆ ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹೊಂದುವಂತೆ ಮಾಡಿದೆ. ಶುಕ್ರವಾರ 1,73,000ಕ್ಕೂ ಅಧಿಕ ಮಂದಿ ನಿವಾಸಿಗಳು ಬೇರೆ ಸ್ಥಳಗಳಲ್ಲಿ ಆಶ್ರಯ ಕೋರಿದ್ದಾರೆ.

Rain And Floods Killed 66 In Indonesias Capital Jakarta

ಮಳೆ ಇನ್ನಷ್ಟು ಜೋರಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಈಗಾಗಲೇ ಭಾರಿ ಪ್ರವಾಹ ಜಕಾರ್ತಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನುಗ್ಗಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬರುವ ದಿನಗಳಲ್ಲಿ ಗುಡುಗು ಸಹಿತ ಮಳೆ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೆರೆ ಪರಿಹಾರ ಬಂದಿಲ್ಲ: ಮೋದಿ ಎದುರೇ ಯಡಿಯೂರಪ್ಪ ಅಸಮಾಧಾನನೆರೆ ಪರಿಹಾರ ಬಂದಿಲ್ಲ: ಮೋದಿ ಎದುರೇ ಯಡಿಯೂರಪ್ಪ ಅಸಮಾಧಾನ

ನೀರಿನಿಂದಾಗಿ ಆರೋಗ್ಯದ ಸಮಸ್ಯೆಗಳು ಉಂಟಾಗುವ ಅಪಾಯವಿರುವುದರಿಂದ ಅಧಿಕಾರಿಗಳು ಮತ್ತು ರೆಡ್ ಕ್ರಾಸ್, ರಾಜಧಾನಿಯ ಎಲ್ಲೆಡೆ ಸೋಂಕು ನಿವಾರಕ ಔ‍ಷಧಗಳನ್ನು ಸಂಪಡಿಸುತ್ತಿದ್ದಾರೆ.

English summary
At least 66 died and two others missing in Indonesia after rain and floods hit capital Jakarta and other places from eve of the new year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X