ಕತಾರ್‌ನಲ್ಲಿ ಬಂಟ್‌ ಸಮುದಾಯದ ವಾರ್ಷಿಕೋತ್ಸವ ಹೇಗಿತ್ತು?

ಬೆಂಗಳೂರು, ಮೇ 10: ಬಂಟ್ಸ್‌ ಕತಾರ್‌ ಕತಾರ್ ತನ್ನ ಐದನೆಯ ವಾರ್ಷಿಕೋತ್ಸವವನ್ನು ಕತಾರಿನ ಡಿಪಿಎಸ್ ಆಡಿಟೋರಿಯಂನಲ್ಲಿ ಇತ್ತೀಚೆಗೆ ಆಯೋಜಿಸಿತ್ತು. ಕಾರ್ಯಕ್ರಮ ತುಂಬಾ ವಿಶಿಷ್ಟವಾಗಿ ನಡೆಯಿತು.ಈ ಸಂದರ್ಭ ಜರಗಿದ ಸಾರ್ವಜನಿಕ ಸಮಾರಂಭದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಸಮ್ಮಾನಿಸಲಾಯಿತು. ಬಂಟ್ಸ್ ಕತಾರ್‍ನ ಸದಸ್ಯರ ಸಾಧನೆ ಮತ್ತು ಚಟುವಟಿಕೆಗಳ ವಿವರವನ್ನೊಳಗೊಂಡ ಗರಿ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಪ್ರಕಾಶ್ಚಂದ್ರ ಅಜಿಲ ಸ್ಮಾರಕ ಸೇವಾ ಸಂಪದ ಪ್ರಶಸ್ತಿಯನ್ನು ಉತ್ತಮ ಸಮುದಾಯ ಸೇವೆಗಾಗಿ ಅಬ್ದುಲ್ಲ ಮೋನು ಅವರಿಗೆ ನೀಡಲಾಯಿತು.

Qatar Bunts celebrated fifth anniversary

ಬಳಿಕ ಸಂಘದ ಸದಸ್ಯರಿಂದ ನೃತ್ಯ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ವಿಶೇಷವಾಗಿ ಅಲಂಕರಿಸಿ ರಂಗಸ್ಥಳದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ಯಕ್ಷಗಾನ ಪ್ರದರ್ಶನಗೊಂಡಿತು.

ಕದ್ರಿ ನವನೀತ್ ಶೆಟ್ಟಿ ಸಹಿತ ಇತರ ಖ್ಯಾತ ಕಲಾವಿದರು ಮುಖ್ಯ ಅತಿಥಿಯಾಗಿ ಐಸಿಸಿ ಅಧ್ಯಕ್ಷ ಮಿಲನ್ ಅರುಣ್, ವಿಶೇಷ ಗೌರವ ಅತಿಥಿಗಳಾಗಿ ಪುಣೆಯ ಸಿಂಬೋಸಿಸ್ ಕಾಲೇಜ್ ಆಫ್ ಲಾ ಇದರ ನಿರ್ದೇಶಕಿ ಡಾ. ಶಶಿಕಲಾ ಗುರುಪುರ,ಗೌರವ ಅತಿಥಿಯಾಗಿ ಸತೀಶ್ ಶೆಟ್ಟಿ ಪಟ್ಲ, ನವನೀತ್ ಶೆಟ್ಟಿ ಕದ್ರಿ, ಸ್ಥಾಪಕಾಧ್ಯಕ್ಷ ಮತ್ತು ಪ್ಲಾಟಿನಂ ದಾನಿ ಮೂಡಂಬೈಲ್ ರವಿ ಶೆಟ್ಟಿ. ವಜ್ರದಾನಿ ಜಪ್ಪು ಚಿದಾನಂದ ನಾಯ್ಕ್‌, ಚಿನ್ನದಾನಿ ಬಿ. ಆರ್. ಸತೀಶ್, ಅಧ್ಯಕ್ಷ ನವಜೀತ್ ಶೆಟ್ಟಿ ಮತ್ತು ಇತರ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+