Ukraine War: ಉಕ್ರೇನ್‌ಗೆ ಭರ್ಜರಿ ಶಾಕ್ ಕೊಟ್ಟ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್!

ರಷ್ಯಾ ಇದೀಗ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲು ಒಪ್ಪಿಕೊಂಡಿದೆ ಎಂಬ ಖುಷಿ ಸುದ್ದಿ ನಡುವೆ ದಿಢೀರ್ ಮತ್ತೊಂದು ಆಘಾತ ಈಗ ಎದುರಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಟ್ಟಿದ್ದ ಡಿಮ್ಯಾಂಡ್ ಪ್ರಕಾರ, ಖುದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಂದು ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಬೇಕು ಎಂದಿದ್ದರು. ಆದರೆ ರಷ್ಯಾ ಅಧ್ಯಕ್ಷ ಪುಟಿನ್ ಈ ವಿಚಾರದಲ್ಲಿ ಉಕ್ರೇನ್‌ಗೆ ಶಾಕ್ ಕೊಟ್ಟಿದ್ದಾರೆ. ಹಾಗಾದ್ರೆ ರಷ್ಯಾ & ಉಕ್ರೇನ್ ಯುದ್ಧ ಈಗ ನಿಲ್ಲುವುದಿಲ್ವಾ?

ರಷ್ಯಾ & ಉಕ್ರೇನ್ ಯುದ್ಧದ ಕ್ರೂರತೆ ಕಂಡು ಜಗತ್ತೇ ಬೆಚ್ಚಿಬಿದ್ದಿದೆ, ಅಲ್ಲದೆ ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಇಬ್ಬರೂ ಬಡಿದಾಡುತ್ತಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಿ ಏನೇನೋ ಆಗಿಬಿಡಲಿದೆ. ಅದರಲ್ಲೂ 3ನೇ ಮಹಾಯುದ್ಧ ಇಲ್ಲಿಂದಲೇ ಶುರುವಾಗುತ್ತಾ..? ಎನ್ನುವ ಭೀತಿ ಕೂಡ ಆವರಿಸಿತ್ತು. ಇದೇ ಕಾರಣಕ್ಕೆ ಖುದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಟ್ಟು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನಗಳ ಮಾಡಿದ್ದರು. ಇಷ್ಟೆಲ್ಲದರ ನಡುವೆ ಕೂಡ ಇದೀಗ ಬೆಂಕಿ ಹೊತ್ತಿಕೊಂಡಿದೆ, ರಷ್ಯಾ ಜೊತೆಗೆ ಕೂತು ಮಾತನಾಡಲು ಉಕ್ರೇನ್ ಮುಂದಾದಾಗ ಮತ್ತೊಂದು ಶಾಕ್ ಸಿಕ್ಕಿದೆ.

Putin Skips Ukraine Talks While Russian Team Engages Seasoned Negotiators

ರಷ್ಯಾ ಅಧ್ಯಕ್ಷ ಪುಟಿನ್ ಬರಲ್ಲ.. ಬರಲ್ಲ..

ಹೌದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈಗಿರುವ ಪರಿಸ್ಥಿತಿಯಲ್ಲಿ ರಷ್ಯಾ ದೇಶ ಬಿಟ್ಟು ಹೊರಗೆ ಬರುವುದಿಲ್ಲ ಎಂಬುದು ಗ್ಯಾರಂಟಿ. ಹೀಗಿದ್ದರೂ ಉಕ್ರೇನ್ ಅಧ್ಯಕ್ಷ ಮಾತ್ರ ಈ ವಿಚಾರದಲ್ಲಿ ಆಸೆ ಇಟ್ಟುಕೊಂಡು ಕಾಯುತ್ತಿದ್ದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬರ್ತಾರೆ, ಬಂದು ಉಕ್ರೇನ್ ಜೊತೆಗೆ ಮಾತುಕತೆಯನ್ನ ಮಾಡುತ್ತಾರೆ ಅಂತಾ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾಯುತ್ತಿದ್ದರು. ಆದರೆ ಇದೀಗ ಬೇರೆಯದ್ದೇ ಆಟ ಶುರುವಾಗಿದೆ, ರಷ್ಯಾ ಅಧ್ಯಕ್ಷರು ಇಲ್ಲದೆ ಉಕ್ರೇನ್ & ರಷ್ಯಾ ಕದನ ವಿರಾಮ ಮಾತುಕತೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+