• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಪೊಲೀಸ್ ಅಧಿಕಾರಿಯಾದ ಮೊದಲ ಹಿಂದೂ ಮಹಿಳೆ

|

ಇಸ್ಲಾಮಾಬಾದ್, ಸೆಪ್ಟೆಂಬರ್ 4: ಸಿಂಧ್ ಪ್ರಾಂತ್ಯದ ಪುಷ್ಪಾ ಕೊಹ್ಲಿ ಎಂಬಾಕೆ ಪಾಕಿಸ್ತಾನದ ಮೊದಲ ಪೊಲೀಸ್ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಪ್ರಾಂತೀಯ ಸ್ಪರ್ಧಾತ್ಮಕ ಪರೀಕ್ಷೆಯ ಬರೆದು ತೇರ್ಗಡೆ ಹೊಂದಿರುವ ಪುಷ್ಪಾ ಅವರು, ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

ಇನ್ನು ಬೀಳೋದು 1971ರ ಯುದ್ಧಕ್ಕಿಂತಲೂ ದೊಡ್ಡ ಏಟು: ಪಾಕ್‌ಗೆ ಭಾರತೀಯ ಸೇನೆ ಎಚ್ಚರಿಕೆ

ಪುಷ್ಪಾ ಕೊಹ್ಲಿ ಅವರನ್ನು ಸಿಂಧ್‌ನ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಆಗಿ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿದೆ. ಈ ಪ್ರಕಟಣೆಯನ್ನು ಪಾಕಿಸ್ತಾನದ ಮಾನವ ಹಕ್ಕು ಕಾರ್ಯಕರ್ತ ಕಪಿಲ್ ದೇವ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೊದಲು ಹಂಚಿಕೊಂಡಿದ್ದರು.

ಈ ಮೂಲಕ ಪುಷ್ಪಾ ಅವರು ಪ್ರಾಂತೀಯ ಪೊಲೀಸ್ ಇಲಾಖೆಗೆ ಸೇರಿಕೊಂಡ ಮೊದಲ ಹಿಂದೂ ಮಹಿಳೆ ಎನಿಸಿಕೊಂಡಿದ್ದಾರೆ.

'ಪುಷ್ಪಾ ಕೊಹ್ಲಿ ಅವರು ಪ್ರಾಂತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿ ಸಿಂಧ್ ಪ್ರಾಂತ್ಯದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಆದ ಹಿಂದೂ ಸಮುದಾಯದ ಮೊದಲ ಮಹಿಳೆಯಾಗಿದ್ದಾರೆ. ಅವರಿಗೆ ಮತ್ತಷ್ಟು ಬಲ ದೊರೆತಿದೆ' ಎಂದು ಕಪಿಲ್ ದೇವ್ ಟ್ವೀಟ್ ಮಾಡಿದ್ದರು.

ಕರ್ತರ್ ಪುರ್ ಕಾರಿಡಾರ್: ಎರಡು ಷರತ್ತಿಗೆ ಒಪ್ಪದ ಪಾಕಿಸ್ತಾನ

ಜನವರಿಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಸುಮನ್ ಪವನ್ ಬೊದಾನಿ ಅವರು ಸಿಬಿಲ್ ಮತ್ತು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ನ ನ್ಯಾಯಾಧೀಶರಾಗಿ ನೇಮಕವಾಗಿದ್ದರು.

ಅಧಿಕೃತ ಅಂದಾಜಿನ ಪ್ರಕಾರ ಪಾಕಿಸ್ತಾದಲ್ಲಿ 75 ಲಕ್ಷ ಹಿಂದೂಗಳಿದ್ದಾರೆ. ಪಾಕಿಸ್ತಾನದ ಹಿಂದೂ ಜನಸಂಖ್ಯೆಯಲ್ಲಿ ಬಹುಪಾಲು ಜನರು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ.

English summary
Pushpa Kohli has become the first Hindu girl in Pakistan to qualify as ASI in Sindh province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X