ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!

ಇಸ್ಲಾಮಾಬಾದ್, ಫೆಬ್ರವರಿ 19: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸಿರುವ ಭಾರತಕ್ಕೆ ಸಾಕ್ಷ್ಯ ನೀಡುವಂತೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಸವಾಲು ಹಾಕಿದ್ದಾರೆ.

ನನ್ನ ಈ ಹೇಳಿಕೆ ಭಾರತ ಸರ್ಕಾರಕ್ಕೆ. ನೀವು ಯಾವುದೇ ಸಾಕ್ಷ್ಯ ಇಲ್ಲದೆ ಪಾಕಿಸ್ತಾನ ಸರ್ಕಾರವನ್ನು ಆರೋಪಿಸಿದ್ದೀರಿ. ನಮ್ಮ ನೆಲದಿಂದ ಯಾರೂ ಹಿಂಸೆಯನ್ನು ಹರಡಬಾರದು ಎನ್ನುವುದು ನಮ್ಮ ಹಿತಾಸಕ್ತಿ. ಪಾಕಿಸ್ತಾನದಲ್ಲಿನ ಯಾರೊಬ್ಬರ ವಿರುದ್ಧ ಸಾಕ್ಷ್ಯ ಸಿಕ್ಕರೂ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭಾರತದ ಸರ್ಕಾರಕ್ಕೆ ಹೇಳಲು ಬಯಸುತ್ತೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಕಾಶ್ಮೀರದ ಕುರಿತಂತೆ ಭಾರತ ಹೊಸ ಆಲೋಚನೆ, ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೇನೆಯ ಬಳಕೆ ಮತ್ತು ಒತ್ತಡ ಯಾವುದಾದರೂ ಸಮಸ್ಯೆಯನ್ನು ಬಗೆಹರಿಸುತ್ತದೆಯೇ? ಅದು ಈವರೆಗೂ ಸಹಾಯ ಮಾಡಿಲ್ಲ. ಈ ಬಗ್ಗೆ ಭಾರತದಲ್ಲಿ ಚರ್ಚೆ ನಡೆಯಬೇಕಿದೆ ಎಂದಿದ್ದಾರೆ.

pulwama terror attack indian government blamed the pakistan without any eveidence prime minister imran khan

ಈ ಬಗ್ಗೆ ನಾನು ಮೊದಲೇ ಮಾತನಾಡಲು ಬಯಸಿದ್ದೆ. ಆದರೆ, ಸೌದಿ ದೊರೆ ಭೇಟಿಯ ಕಾರಣಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿರಲಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

ನಾವು ಭಯೋತ್ಪಾದನೆ ಕುರಿತಂತೆ ಮಾತನಾಡಲು ಸಿದ್ಧರಿದ್ದೇವೆ. ಯಾವುದೇ ರೀತಿಯ ತನಿಖೆಗೂ ಮುಕ್ತರಿದ್ದೇವೆ. ನಾವು ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಭಯೋತ್ಪಾದನೆಗೆ ವಿರುದ್ಧವಾಗಿದ್ದೇವೆ. ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳುವುದರ ಬಗ್ಗೆ ಯೋಚಿಸುವುದಷ್ಟೇ ಅಲ್ಲ, ಪ್ರತೀಕಾರವನ್ನು ತೀರಿಸಿಕೊಳ್ಳುತ್ತದೆ ಕೂಡ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+