ಪ್ರಧಾನಿ ಮೋದಿ ವಿಶ್ವಸಂಸ್ಥೆ ಭಾಷಣ: ಜಗತ್ತೇ ಕಾಯುತ್ತಿರುವ ಕಾರ್ಯಕ್ರಮ ಇದು!
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಂಡು, ಜಾಗತಿಕವಾಗಿ ಭಾರತದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಹೀಗಿದ್ದಾಗ ಈ ದಿನದಂದು ವಿಶ್ವಸಂಸ್ಥೆಗೆ ಕೂಡ ಪ್ರಧಾನಿ ಮೋದಿ ಅವರು ಭೇಟಿ ನೀಡಿಲಿದ್ದಾರೆ. ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆಯ ಅಂಗಳದಲ್ಲಿ ನಿಂತು ಪ್ರಧಾನಿ ಮೋದಿ ಅವರು ಇಂದು ಪ್ರಮುಖ ಭಾಷಣ ಮಾಡಲಿದ್ದಾರೆ. ಹಾಗಾದ್ರೆ ಭಾರತ & ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ಅವರ ಈ ಭಾಷಣ ಎಷ್ಟು ಮುಖ್ಯ? ವಿಶ್ವಸಂಸ್ಥೆಯಲ್ಲಿ ಈ ಭಾಷಣಕ್ಕೆ ಹೇಗೆಲ್ಲಾ ತಯಾರಿ ಸಾಗಿದೆ? ಬನ್ನಿ ತಿಳಿಯೋಣ.
ಭಾರತ ಜಾಗತಿಕ ಗುರು ಆಗಿ ಬೆಳೆಯುತ್ತಿರುವ ಸಮಯದಲ್ಲಿ, ಭಾರತದ ಮಾತಿಗೆ ಶ್ರೀಮಂತ ದೇಶಗಳು ಕೂಡ ಬೆಲೆ ಕೊಡುತ್ತಿವೆ. ಅದರಲ್ಲೂ ಜಾಗತಿಕ ಮಟ್ಟದಲ್ಲಿ ಎರಡು ಭಯಾನಕ ಯುದ್ಧಗಳು ನಡೆಯುತ್ತಿರುವ ಸಮಯದಲ್ಲಿ, ಭಾರತದ ಮಧ್ಯಪ್ರವೇಶ ಅನಿವಾರ್ಯ ಎಂಬ ಮಾತು ಕೂಡ ಕೇಳಿಬರುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಅಮೆರಿಕದ ನೆಲಕ್ಕೆ ಭೇಟಿ ನೀಡಿದ್ದು, ಇಂದು ವಿಶ್ವಸಂಸ್ಥೆಯಲ್ಲಿ ಮಹತ್ವದ ಭಾಷಣ ಕೂಡ ಮಾಡಲಿದ್ದಾರೆ. ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ತಯಾರಿಗಳು ಹೇಗೆ ಸಾಗಿವೆ?

ವಿಶ್ವಸಂಸ್ಥೆಯ ಮಹಾ ಅಧಿವೇಶನ
ಈಗಾಗಲೇ ಭಾರತೀಯ ಸಮುದಾಯದ ಕಾರ್ಯಕ್ರಮ ಮುಗಿಸಿರುವ ಪ್ರಧಾನಿ ಮೋದಿ ಅವರು ಇಂದು ನ್ಯೂಯಾರ್ಕ್ ನಗರದ, ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗಿ ಆಗಲಿದ್ದಾರೆ. ಕ್ವಾಡ್ ಶೃಂಗಸಭೆ ಮುಗಿಸಿದ ನಂತರ ನೇರವಾಗಿ ನ್ಯೂಯಾರ್ಕ್ ನಗರಕ್ಕೆ ಬಂದಿದ್ದ ಪ್ರಧಾನಿ ಮೋದಿ ಅವರು ಹಲವು ಪ್ರಮುಖ ಸಮಾರಂಭದಲ್ಲಿ ಭಾಗಿಯಾದರು. ಭಾರತೀಯ ಸಮುದಾಯದವರ ಅದ್ಧೂರಿ ಸ್ವಾಗತ ಸ್ವೀಕರಿಸಿದರು.
ಈಗ ವಿಶ್ವಸಂಸ್ಥೆ ಮಹಾ ಅಧಿವೇಶನ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಯುದ್ಧದ ವಿಚಾರದ ಕುರಿತು ಕೂಡ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಯಾಕಂದ್ರೆ ಈಗಾಗಲೇ ಜಗತ್ತಿನಲ್ಲಿ ರಷ್ಯಾ & ಉಕ್ರೇನ್ ಸೇರಿದಂತೆ ಹಲವು ಕಡೆ ತಿಕ್ಕಾಟ ಆರಂಭವಾಗಿದೆ. ಹೀಗಿದ್ದಾಗ ಭಾರತದ ಮಧ್ಯಪ್ರವೇಶ ಅನಿವಾರ್ಯ ಎಂಬ ಮಾತು ಕೇಳಿಬರುತ್ತಿದೆ. ಭಾರತವು ಕೂಡ ಈಗಾಗಲೇ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನಪಟ್ಟಿದೆ.
ಜಗತ್ತೇ ಕಾಯುತ್ತಿರುವ ಭಾಷಣ
ಒಟ್ನಲ್ಲಿ ಪ್ರಧಾನಿ ಮೋದಿ ಅವರ ವಿಶ್ವಸಂಸ್ಥೆ ಭಾಷಣಕ್ಕೆ ಇಡೀ ಜಗತ್ತೇ ಕಾಯುತ್ತಿದೆ. ಹೀಗೆ ಪ್ರಧಾನಿ ಮೋದಿ ಅವರು ಪ್ರಸ್ತಾಪ ಮಾಡಲಿರುವ ವಿಚಾರಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕೂಡ ಬರಲಿವೆ. ಹೀಗಾಗಿ ಅಮೆರಿಕದ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಲು ಕುತೂಹಲ ಮೂಡಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಇದಕ್ಕೆ ಉತ್ತರ ಸಿಗಲಿದೆ.












Click it and Unblock the Notifications