Get Updates
Get notified of breaking news, exclusive insights, and must-see stories!

ಬೈರುತ್‌ ಸ್ಫೋಟದಲ್ಲಿ ಪ್ರಧಾನಿ ಹಸನ್ ದಿಯಾಬ್ ಕೂಡ ಆರೋಪಿ..!

ಆಗಸ್ಟ್ 6ರಂದು ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಸಂಭವಿಸಿದ್ದ ಭೀಕರ ಸ್ಫೋಟ ಸಂಬಂಧ ಲೆಬನಾನ್ ನ್ಯಾಯಾಧೀಶರು ಮಹತ್ವದ ಆದೇಶ ನೀಡಿದ್ದಾರೆ. ಪ್ರಕರಣ ಸಂಬಂಧ ಲೆಬನಾನ್‌ನ ನಿರ್ಗಮಿತ ಪ್ರಧಾನಿ ಕೂಡ ಆರೋಪಿಯಾಗಿದ್ದು, ಮಾಜಿ ಸಚಿವರನ್ನೂ ಘಟನೆ ಸಂಬಂಧ ಆರೋಪಿಗಳನ್ನಾಗಿ ಗುರುತಿಸಲಾಗಿದೆ. ಪ್ರಧಾನಿ ಹಸನ್ ದಿಯಾಬ್, ಬೈರುತ್ ಬ್ಲಾಸ್ಟ್‌ ಬಳಿಕ ಲೆಬನಾನ್‌ನಲ್ಲಿ ಎದ್ದ ದಂಗೆಗೆ ತಲೆಬಾಗಿ ಸರ್ಕಾರ ವಿಸರ್ಜಿಸಿದ್ದರು.

ಇದೀಗ ಹಸನ್ ದಿಯಾಬ್ ಕೂಡ ಘಟನೆಯಲ್ಲಿ ಆರೋಪಿಯಾಗಿದ್ದಾರೆ. ಆಗಸ್ಟ್‌ 4ರಂದು ಲೆಬನಾನ್‌ ರಾಜಧಾನಿ ಬೈರುತ್ ಬಂದರಿನಲ್ಲಿ ಸ್ಫೋಟ ಸಂಭವಿಸಿತ್ತು. 3000 ಟನ್‌ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಹಲವು ವರ್ಷಗಳಿಂದ ಬೈರುತ್ ಬಂದರಲ್ಲಿ ಸುಮಾರು 3000 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಇಡಲಾಗಿತ್ತು.

ಆದರೆ ಆಗಸ್ಟ್‌ 4ರಂದು ದಿಢೀರ್ ಭಾರಿ ಪ್ರಮಾಣದ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಈ ಸ್ಫೋಟದ ತೀವ್ರತೆಗೆ 200 ಜನರು ಪ್ರಾಣ ಕಳೆದುಕೊಂಡರೆ, 6500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟದ ಸಂಬಂಧ ಬೇಜವಾಬ್ದಾರಿ ಆರೋಪ ಹೊರಿಸಿ, ನಿರ್ಗಮಿತ ಪ್ರಧಾನಿ ಹಸನ್ ದಿಯಾಬ್ ಸೇರಿದಂತೆ ಮಾಜಿ ಸಚಿವರನ್ನೂ ಆರೋಪಿಗಳನ್ನಾಗಿ ಗುರುತಿಸಲಾಗಿದೆ.

3 ಲಕ್ಷ ನಿರಾಶ್ರಿತರ ಪರದಾಟ

3 ಲಕ್ಷ ನಿರಾಶ್ರಿತರ ಪರದಾಟ

ಆಗಸ್ಟ್‌ 4ರಂದು ಲೆಬನಾನ್‌ ರಾಜಧಾನಿ ಬೈರುತ್ ಬಂದರಿನಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಸುಮಾರು 3000 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಹಲವು ವರ್ಷಗಳಿಂದ ಬೈರುತ್ ಬಂದರಿನ ಹಡಗಲ್ಲಿ ಸುಮಾರು 3000 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಇಡಲಾಗಿತ್ತು. ಆದರೆ ಆಗಸ್ಟ್‌ 4ರಂದು ದಿಢೀರ್ ಭಾರಿ ಪ್ರಮಾಣದ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿತ್ತು. ಈ ಸ್ಫೋಟದ ತೀವ್ರತೆಗೆ 200 ಜನರು ಪ್ರಾಣ ಕಳೆದುಕೊಂಡರೆ, 6500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರ ಜೊತೆಯಲ್ಲೇ ಸುಮಾರು 3 ಲಕ್ಷ ನಿರಾಶ್ರಿತರು ಸೂರು ಕಳೆದುಕೊಂಡು, ಅನ್ನ ನೀರು ಇಲ್ಲದೆ ಪರದಾಡುತ್ತಿದ್ದಾರೆ.

ಲೆಬನಾನ್ ಪ್ರಧಾನಿ ರಾಜೀನಾಮೆ ನೀಡಿದ್ದರು

ಲೆಬನಾನ್ ಪ್ರಧಾನಿ ರಾಜೀನಾಮೆ ನೀಡಿದ್ದರು

ಬೈರುತ್ ಬ್ಲಾಸ್ಟ್‌ ನಂತರ ಲೆಬನಾನ್‌ನಲ್ಲಿ ಎದ್ದಿರುವ ದಂಗೆಗೆ ತಲೆಬಾಗಿ ಪ್ರಧಾನಿ ಹಸನ್ ದಿಯಾಬ್ ಸರ್ಕಾರ ವಿಸರ್ಜಿಸಿದ್ದರು. ಆಗಸ್ಟ್ 10ರಂದೇ ಹಸನ್ ದಿಯಾಬ್ ಅಧಿಕಾರದಿಂದ ಕೆಳಗಿಳಿದಿದ್ದರು. ಬೈರುತ್ ಬಂದರಲ್ಲೇ ಲೆಬನಾನ್‌ಗೆ ಅಗತ್ಯವಿದ್ದಷ್ಟು ಆಹಾರ ಪದಾರ್ಥ ಸಂಗ್ರಹಿಸಿತ್ತು. ಆದರೆ ಸ್ಫೋಟದಲ್ಲಿ ಆಹಾರ ಪದಾರ್ಥವೆಲ್ಲಾ ಮಣ್ಣುಪಾಲಾಗಿ, ಜನರು ಹಸಿವಿನಿಂದ ನರಳಾಡುವ ಸ್ಥಿತಿ ಎದುರಾಗಿತ್ತು. ಇದನ್ನೆಲ್ಲಾ ನಿಭಾಯಿಸಲು ದಿಯಾಬ್ ಫ್ಲಾಪ್ ಆಗಿದ್ದರು. ಇಂತಹ ಸಂದರ್ಭದಲ್ಲಿ ಜನರ ಕಷ್ಟ ಕೇಳದೆ, ಪ್ರಜೆಗಳ ಮೇಲೆಯೇ ದೌರ್ಜನ್ಯ ನಡೆಸಲು ಹೋಗಿ ದಿಯಾಬ್ ತಮ್ಮ ಸರ್ಕಾರವನ್ನೇ ವಿಸರ್ಜಿಸಿದ್ದರು.

ಚೂರು ಎಡವಟ್ಟಾದರೂ ಹೊಗೆ..!

ಚೂರು ಎಡವಟ್ಟಾದರೂ ಹೊಗೆ..!

ಅಮೋನಿಯಂ ನೈಟ್ರೇಟ್ ಸಾಮಾನ್ಯವಾದ ರಾಸಾಯನಿಕವಲ್ಲ. ಸಾಮಾನ್ಯ ತಾಪಮಾನದಲ್ಲಿ ಅಮೋನಿಯಂ ನೈಟ್ರೇಟ್ ಶಾಂತ ಮೂರ್ತಿಯಂತೆ ಇರುತ್ತದೆ. ಆದರೆ ಒಂದಿಷ್ಟು ಎಡವಟ್ಟಾದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗೋದೆ ಇಲ್ಲ. ಇದು ಬೈರುತ್ ಘಟನೆಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಹಿಂದೆ ಕೂಡ ಅಮೋನಿಯಂ ನೈಟ್ರೇಟ್ ಹಲವು ಭೀಕರ ದುರಂತಗಳಿಗೆ ಹೊಣೆಯಾಗಿತ್ತು. ತಣ್ಣಗೆ ಇರುವ ಅಮೋನಿಯಂ ನೈಟ್ರೇಟ್‌ನ ಕೆಣಕಿದರೆ ಮಾತ್ರ ನಡೆಯಬಾರದ್ದು ನಡೆದುಹೋಗುತ್ತದೆ.

170 ಡಿಗ್ರಿ ಫ್ಯಾರನ್ ಹೀಟ್‌ ಸಾಕು..!

170 ಡಿಗ್ರಿ ಫ್ಯಾರನ್ ಹೀಟ್‌ ಸಾಕು..!

170 ಡಿಗ್ರಿ ಫ್ಯಾರನ್ ಹೀಟ್‌ನಷ್ಟು ಬಿಸಿ ತಾಗಿದರೆ ಸಾಕು ಅಮೋನಿಯಂ ನೈಟ್ರೇಟ್‌ ಒಳಗೆ ಧಹನ ಕ್ರಿಯೆಗೆ ಚಾಲನೆ ಸಿಗುತ್ತದೆ. ಹೀಗೆ ಆರಂಭವಾಗುವ ರಾಸಾಯನಿಕ ಕ್ರಿಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಾ ನೈಟ್ರೋಜೆನ್, ಆಕ್ಸಿಜೆನ್ ಗ್ಯಾಸ್ ಹಾಗೂ ನೀರಿನ ಆವಿ ಬಿಡುಗಡೆ ಆಗುತ್ತೆ. ನಿಮಗೆ ನೆನಪಿರಲಿ ಇಷ್ಟು ರಾಸಾಯನಿಕಗಳು ರಿಲೀಸ್ ಆಗಿದ್ದರೆ ಅಮೋನಿಯಂ ನೈಟ್ರೇಟ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆ ಇರಲಿಲ್ಲ. ಆದರೆ ಇದರ ಜೊತೆ ಊಹೆಗೂ ನಿಲುಕದಷ್ಟು ಪ್ರಮಾಣದ ಶಕ್ತಿ ಅಥವಾ ಎನರ್ಜಿ ಸ್ಫೋಟ ರೂಪದಲ್ಲಿ ರಿಲೀಸ್ ಆಗುತ್ತೆ. ಲೆಬನಾನ್ ರಾಜಧಾನಿ ಬೈರತ್‌ನಲ್ಲೂ ಇದೇ ರೀತಿ ಆಗಿತ್ತು. ಆದರೆ ಅದೃಷ್ಟವಶಾತ್ ಸಂಗ್ರಹಿಸಿದ್ದ ಅಷ್ಟೂ ಅಮೋನಿಯಂ ನೈಟ್ರೇಟ್ ಹೊತ್ತಿ ಉರಿಯಲಿಲ್ಲ. ಹೀಗೆ ಆಗಿದ್ದರೆ ಬೈರುತ್ ಪರಿಸ್ಥಿತಿ ಊಹೆಗೂ ನಿಲುಕದಷ್ಟು ಗಂಭೀರವಾಗಿರುತ್ತಿತ್ತು. ಲಕ್ಷಾಂತರ ಜನರು ಬಲಿಯಾಗುವ ಅಪಾಯವಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+