PM Narendra Modi: ಚೀನಾ ನೆಲಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ವಿರುದ್ಧ ಹೊಸ ಅಸ್ತ್ರ?
ಭಾರತದ ಜೊತೆಗೆ ಚನ್ನಾಗಿಯೇ ಇದ್ದು, ಭಾರತದ ಸಹಾಯ ಪಡೆದು ಇದೀಗ ನಮ್ಮ ವಿರುದ್ಧ ಶಡ್ಯಂತ್ರ ಮಾಡುತ್ತಿರುವ ಅಮೆರಿಕಗೆ ಸರಿಯಾಗಿ ಪಾಠ ಕಲಿಸುವ ಸಮಯ ಬಂದಿದೆಯಾ? ಅನ್ನೋ ಚರ್ಚೆ ಈಗ ಶುರುವಾಗಿದೆ. ಯಾಕಂದ್ರೆ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿ & ಮೂಲಕ ಭಾರತದ ಆರ್ಥಿಕತೆಗೆ ಪೆಟ್ಟು ಕೊಡಲು ಸ್ಕೆಚ್ ಹಾಕಿದ್ದ ಅಮೆರಿಕ ಈಗ ಬಾಲ ಮುದುಡುವ ಪರಿಸ್ಥಿತಿ ಎದುರಾಗಿದೆ. ಯಾಕಂದ್ರೆ ಭಾರತ ಇದೀಗ ಅಮೆರಿಕ ಹಾಕುತ್ತಿರುವ ಬೆದರಿಕೆಗೆ ಸರಿಯಾಗಿಯೇ ಉತ್ತರ ಕೊಡಲು ಮುಂದೆ ನುಗ್ಗಿದೆ!
ಹೌದು, ಭಾರತದ ಪ್ರಧಾನಿ ಮೋದಿ ಅವರು ಇದೀಗ ಚೀನಾ ನೆಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಭಾರತ & ಚೀನಾ ನಡುವೆ ಕಳೆದ ಕೆಲವು ವರ್ಷಗಳಿಂದ ಸಂಬಂಧ ಹಳಸಿತ್ತು. ಈ ಕಾರಣಕ್ಕೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಒಂದಷ್ಟು ಹಿನ್ನಡೆಯೂ ಆಗಿತ್ತು. ಆದರೆ ಇದೀಗ ಬರೋಬ್ಬರಿ 7 ವರ್ಷಗಳ ನಂತರ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಚೀನಾಗೆ ಎಂಟ್ರಿ ಕೊಟ್ಟಿದ್ದು, ಆ ಮೂಲಕ ಅಮೆರಿಕದ ವಿಚಿತ್ರವಾದ ತೆರಿಗೆ ನೀತಿಗಳ ವಿರುದ್ಧ ಈ ಮೊದಲೇ ಆಕ್ರೋಶ ಹೊರ ಹಾಕುತ್ತಿದ್ದ ಚೀನಾ ಜೊತೆಗೆ ಸಂಬಂಧ ಬೆಸೆಯಲು ಮುಂದಾಗಿದ್ದಾರೆ. ಹಾಗೂ ಈ ಸಮಯದಲ್ಲೇ ಮತ್ತೊಂದು ಮಹತ್ವದ ಸಭೆಯಲ್ಲಿ ಕೂಡ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಕ್ಸಿ ಜಿನ್‌ಪಿಂಗ್ ಜೊತೆಗೆ ಮಾತುಕತೆ
ಅಂದಹಾಗೆ, ಪ್ರಧಾನಿ ಮೋದಿ ಅವರು ಶಾಂಗ್ಹೈ ಸಹಕಾರ ಸಂಘಟನೆ ಅಂದ್ರೆ SCO ವಾರ್ಷಿಕ ಶೃಂಘ ಸಭೆಯಲ್ಲಿ ಕೂಡ ಭಾಗವಹಿಸಲಿದ್ದಾರೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ಸೋಮವಾರ ಈ ಮಹತ್ವದ ಸಭೆ ನಡೆಯಲಿದೆ. ಈ ಸಭೆಯ ನಂತರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಜೊತೆಯಲ್ಲೂ ಪ್ರಧಾನಿ ಮೋದಿ ಅವರು ಮಹತ್ವದ ಸಭೆ ನಡೆಸಲಿದ್ದಾರೆ. ಇದೇ ಕಾರಣಕ್ಕೆ ಪಿಎಂ ನರೇಂದ್ರ ಮೋದಿ ಅವರ ಚೀನಾ ಭೇಟಿ ಇದೀಗ ಇಡೀ ಜಗತ್ತಿನ ಗಮನ ಸೆಳೆದಿದೆ.
ಪುಟಿನ್ & ಕಿಮ್ ಕೂಡ ಬರ್ತಿದ್ದಾರೆ.
ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತಿರುವ ರಷ್ಯಾ, ಚೀನಾ, ಉತ್ತರ ಕೊರಿಯಾ ದೇಶಗಳು ಕೂಡ ದಿಢೀರ್ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿವೆ. ಅದ್ರಲ್ಲೂ ಚೀನಾದಲ್ಲಿ ನಡೆಯುವ ಸೇನಾ ಪರೇಡ್ ಸಮಯಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಶಾಕ್ ಸಿಗುವುದು ಗ್ಯಾರಂಟಿ ಆಗಿದೆ. ಯಾಕಂದ್ರೆ ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಜೊತೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ಅಮೆರಿಕಗೆ ಆಘಾತ ನೀಡಲು ಕಾಯುತ್ತಿದ್ದಾರೆ. ಇದರ ಜೊತೆಗೆ ಭಾರತದ ಪ್ರಧಾನಿ ಮೋದಿ ಅವರು ಕೂಡ ಇದೇ ಅಮೆರಿಕಗೆ ಶಾಕ್ ಕೊಟ್ಟಿದ್ದಾರೆ.












Click it and Unblock the Notifications