ಪ್ಯಾಲೆಸ್ತೇನ್ ನಲ್ಲಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತ
ರಾಮಲ್ಲಾಹ್, ಫೆಬ್ರವರಿ 10: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೂರು ರಾಷ್ಟ್ರಗಳ ಭೇಟಿಯ ಮೊದಲ ಭಾಗವಾಗಿ ಪ್ಯಾಲೆಸ್ತಾನ್ ನ ರಾಮಲ್ಲಾಹ್ ತಲುಪಿದ್ದಾರೆ.
ಭೇಟಿಯ ಮೊದಲ ಭಾಗವಾಗಿ ಅವರು ಪ್ಯಾಲೆಸ್ತೇನ್ ನ ಮಾಜಿ ಪ್ರಧಾನಿ ಯಾಸಿರ್ ಅರಾಫತ್ ಅವರ ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ಯಾಲೆಸ್ತೇನ್ ನ ಪ್ರಧಾನಿ ರಮಿ ಹಮ್ದಲ್ಲಾಹ್ ಆತ್ಮೀಯವಾಗಿ ಸ್ವಾಗತಿಸಿದರು. ಯಾಸಿರ್ ಅರಾಫತ್ ಅವರ ಸಮಾಧಿಗೆ ಶ್ರದ್ಧಾಂಜಲಿ ಅರ್ಪಿಸಿದ ನಂತರ ಇಲ್ಲಿನ ಮೌಸೊಲೆಯಂ ನಲ್ಲಿರುವ ಯಾಸಿರ್ ಅರಾಫತ್ ಮ್ಯೂಸಿಯಂ ಗೆ ಪ್ರಧಾನಿ ಮೋದಿ ಭೇಟಿ ನೀಡಿದರು.

ಭಾರತಕ್ಕೆ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರು ಬೇಟಿ ನೀಡಿದ ಒಂದು ತಿಂಗಳ ನಂತರ ಮೋದಿಯವರು ಇಸ್ರೇಲ್ ನ ಶತ್ರು ರಾಷ್ಟ್ರವಾದ ಪ್ಯಾಲೆಸ್ತೇನ್ ಗೆ ಭೇಟಿ ನೀಡಿರುವುದು ಕುತೂಹಲ ಹೆಚ್ಚಿಸಿದೆ.
ಈ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮಾನ್ ಗೆ ಭೇಟಿ ನೀಡಲಿದ್ದಾರೆ.












Click it and Unblock the Notifications