ಫುಟ್ಬಾಲ್ ದಂತಕತೆ ಪೀಲೆ ಮಗ 'ಅಂದರ್'
ಸಾವೋ ಪೊಲೋ, ಜೂ.2: ಫುಟ್ಬಾಲ್ ದಂತಕತೆ ಪೀಲೆ ಅವರ ಪುತ್ರ ಹಾಗೂ ಮಾಜಿ ಫುಟ್ಬಾಲ್ ಆಟಗಾರನಾಗಿರುವ ಎಡಿನೊ ಅವರು ಮಾದಕ ದ್ರವ್ಯ ಕಳ್ಳ ಸಾಗಾಟ ಪ್ರಕರಣದಲ್ಲಿ ಸಿಲುಕಿದ್ದಾರೆ. ಡ್ರಗ್ಸ್ ಜಾಲ ದಂಧೆಯಲ್ಲಿ ಕೈ ಜೋಡಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರಿಗೆ 33 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪೀಲೆ ಅವರ ಓಲ್ಡ್ ಕ್ಲಬ್ ಸ್ಯಾಂಟೊಸ್‌ನಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿದ್ದ ಎಡ್ಸನ್ ಛೋಲ್ಬಿ ಡು ನಾಸಿಮೆಂಟೋ ಅಲಿಯಾಸ್ ಎಡಿನೊ ಅವರು ತಮ್ಮ ತಂದೆಯವರ ಹೆಸರನ್ನು ಬಳಸಿಕೊಂಡು ಡ್ರಗ್ಸ್ ಜಾಲವನ್ನು ನಡೆಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

43 ವರ್ಷದ ಎಡಿನೊ ಅವರ ಜತೆಗೆ ಡ್ರಗ್ಸ್ ಜಾಲದ ಮತ್ತೊಬ್ಬ ದೊರೆ ರೊನಾಲ್ಡೊ ಡೌರ್ಟ್ ಸೇರಿದಂತೆ ಇನ್ನು ಮೂವರಿಗೆ ಶಿಕ್ಷೆ ವಿಧಿಸಲಾಗಿದೆ. ಈ ಜಾಲಾ ಸ್ಯಾಂಟೊಸ್ ಮೂಲದ್ದಾಗಿದ್ದು, ಎಡಿನೊ ಗೋಲ್‌ಕೀಪಿಂಗ್ ಕೋಚ್ ಆಗಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಎಡಿನೊ ಶಸ್ತ್ರಾಸ್ತ್ರ ಹಾಗೂ ಹಣಕಾಸಿನ ವಿಷಯದಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾಗಿ ತಿಳಿದು ವರದಿಯಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಡೌರ್ಟ್ ಹಾಗೂ ಎಡಿನೊ ನಡುವಣ ದೂರವಾಣಿ ಸಂಭಾಷಣೆಯನ್ನು ಆಲಿಸಿದೆ. ಅದರಲ್ಲಿ ಈ ಇಬ್ಬರು ಹೊಸದಾಗಿ ವ್ಯವಹಾರ ಆರಂಭಿಸುವ ಬಗ್ಗೆ ಚರ್ಚಿಸಲಾಗಿತ್ತು. ಅಲ್ಲದೆ ಹೆಚ್ಚಿನ ಹಣ ನೀಡಿದರೆ, ತಮ್ಮ ತಂದೆಯ ಹೆಸರನ್ನು ಬಳಸಿ ವ್ಯವಹಾರಕ್ಕೆ ಸುಗಮ ಹಾದಿ ಮಾಡಿಕೊಡುವುದಾಗಿ ಎಡಿನೊ ತಿಳಿಸಿದ್ದು ಖಚಿತವಾಗಿದೆ.
ಎಡಿಸನ್ ಚೋಲ್ಬಿ ನಾಸಿಮೆಂಟೊ ಅಲಿಯಾಸ್ ಎಡಿನ್‌ಹೊ 2005ರಿಂದಲೂ ಈ ಆರೋಪವನ್ನು ನಿರಾಕರಿಸಿದ್ದರು. ಆದರೆ ಪ್ರಕರಣದ ವಿಚಾರಣೆಗೆ ಮತ್ತೆ ಮನವಿ ಮಾಡಿದ್ದರು ಎಂದು ಸಿಬಿಎನ್ ರೇಡಿಯೊ ಮತ್ತು Xinhua ಸುದ್ದಿ ತಾಣಗಳು ಹೇಳಿವೆ.
ಎಡಿನೋ ಅವರು ಬ್ರೆಜಿಲಿಯನ್ ಸಿರಿಯಾ ಎ ಕ್ಲಬ್ ಸ್ಯಾಂಟೋಸ್ ನ ಗೋಲ್ ಕೀಪಿಂಗ್ ಕೋಚ್ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತಿದ್ದರು. ಕೋರ್ಟ್ ನಿರ್ಣಯದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಪೀಲೆ ಅವರು ಮಗನ ಕೃತ್ಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.(ಐಎಎನ್ ಎಸ್)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications