Taliban: ತಾಲಿಬಾನ್ ಅಲ್ಲ.. ಅಲ್ಲ.. ಪಾಕಿಸ್ತಾನ್ ಬಿಡ್ತಾ ಇಲ್ಲ!
ಜಗತ್ತಿನಲ್ಲಿ ಮತ್ತೊಂದು ಯುದ್ಧ ಶುರುವಾಗುವ ಲಕ್ಷಣ ಇದೀಗ ಗೋಚರಿಸುತ್ತಿದೆ. ತಾಲಿಬಾನ್ & ಪಾಕಿಸ್ತಾನ್ ನಡುವೆ ನಡೆಯುತ್ತಿರುವ ತಿಕ್ಕಾಟವು ಬಲು ಜೋರಾಗುತ್ತಿದ್ದು, ಸುಖಾಸುಮ್ಮನೆ ಎರಡೂ ದೇಶಗಳ ನಡುವೆ ದಿಢೀರ್ ಬಡಿದಾಟ ಶುರುವಾಗಿದೆ. ಒಂದು ಕಡೆ ತಾಲಿಬಾನ್ ಉಗ್ರ ಪಡೆಯನ್ನ ಟಾರ್ಗೆಟ್ ಮಾಡಿ ದಿಢೀರ್ ದಾಳಿ ಆರಂಭ ಮಾಡಿರುವ ಪಾಕಿಸ್ತಾನ, ನೂರಾರು ಜನರನ್ನ ಬಲಿಪಡೆದ ಅರೋಪ ಕೇಳಿ ಬರುತ್ತಿದೆ. ಹೀಗಿದ್ದಾಗಲೇ ಇಂದು 2ನೇ ಬಾರಿ ಕೂಡ ಡೆಡ್ಲಿ ಅಟ್ಯಾಕ್ ಮಾಡಿದೆ ಪಾಕಿಸ್ತಾನ!
ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಬರುವ ಅಫ್ಘಾನ್ ದೇಶದ ಭಾಗ ಪಕ್‌ಟಿಕಾ ಭಾಗದಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ & ಪಾಕಿಸ್ತಾನಕ್ಕೆ ಸಮಸ್ಯೆ ಆಗುತ್ತಿದೆ ಎಂಬ ಆರೋಪ ಮಾಡಿ ದಾಳಿ ಮಾಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ಸೇನೆಯ ಜೊತೆಗೆ ತಾಲಿಬಾನ್ ಬಂಡುಕೋರರ ತಿಕ್ಕಾಟ ಬಲು ಜೋರಾಗಿದೆ. ಹೀಗೆ ಇಬ್ಬರ ನಡುವೆಯು ಇಂತಹ ಗಲಾಟೆ ನಡೆಯುತ್ತಿರುವ ಕಾರಣಕ್ಕೆ ಸೂಕ್ಷ್ಮ ವಾತಾವರಣ ನಿರ್ಮಾಣ ಆಗಿದೆ. ಇದೇ ಸಮಯದಲ್ಲಿ ದಿಢೀರ್ ಮತ್ತೊಂದು ದುರ್ಘಟನೆ ನಡೆದು ಹೋಗಿದೆ!

ಉಗ್ರರ ಹೆಸರಲ್ಲಿ ಪಾಕಿಸ್ತಾನದ ಎಡವಟ್ಟು?
ಅಂದಹಾಗೆ ಅಫ್ಘಾನಿಸ್ತಾನ ಗಡಿ ಭಾಗದಲ್ಲಿ ಈ ರೀತಿಯ ದಾಳಿ ನಡೆಯುತ್ತಿರುವುದು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಟೆನ್ಷನ್ ಕೊಡುತ್ತಿದೆ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಈಗಾಗಲೇ ಸಿರಿಯಾ, ಗಾಜಾ, ಲೆಬನಾನ್ ಜೊತೆಗೆ ಇಸ್ರೇಲ್ ಕಿರಿಕ್ ಜೋರಾಗಿ ಯುದ್ಧವೇ ನಡೆಯುತ್ತಿದೆ. ಇದು ಸಾಲದು ಎನ್ನುವಂತೆ ಇರಾನ್ ಕೂಡ ಇಸ್ರೇಲ್ ವಿರುದ್ಧ ಗುಡುಗುತ್ತಿದೆ.
ಇಷ್ಟೆಲ್ಲದರ ನಡುವೆಯೂ ಇದೀಗ ಪಾಕಿಸ್ತಾನ & ಅಫ್ಘಾನಿಸ್ತಾನ ಕೂಡ ಬಡಿದಾಡುತ್ತಿವೆ. ಈ ಬಡಿದಾಟದಿಂದ ಇಲ್ಲಿವರೆಗೂ ಉಗ್ರರು ಸೇರಿ ಸುಮಾರು 50 ಜನ ಬಲಿಯಾಗಿರುವ ಆರೋಪ ಕೇಳಿ ಬಂದಿದೆ. ಹಾಗೇ ಇದೀಗ ಪಾಕಿಸ್ತಾನ ದಾಳಿ ನಡೆಸುತ್ತಿರುವ ಪ್ರದೇಶವು ಭಾರತದ ಗಡಿಯ ಭಾಗದಿಂದ ಕೇವಲ 600 ಕಿಲೋ ಮೀಟರ್ ದೂರದಲ್ಲಿ ಇದೆ. ಹೀಗಾಗಿ ಟೆನ್ಷನ್ ಇನ್ನಷ್ಟು, ಮತ್ತಷ್ಟು ಹೆಚ್ಚಾಗುತ್ತಿದೆ.
ತಾಲಿಬಾನ್ ಬಂಡುಕೋರರಿಂದ ಕೂಡ ದಾಳಿ?
ಒಟ್ನಲ್ಲಿ ಅಫ್ಘಾನಿಸ್ತಾನ & ಪಾಕಿಸ್ತಾನ ನಡುವೆ ದೊಡ್ಡ ಗಲಾಟೆ ಶುರುವಾಗಿದೆ. ಇನ್ನೊಂದು ಕಡೆ ಪಾಕಿಸ್ತಾನದ ಈ ವರ್ತನೆ ಬಗ್ಗೆ ಗಮನ ಹರಿಸಿರುವ ತಾಲಿಬಾನ್ ಆಡಳಿತ ಆಕ್ರೋಶದ ಬೆಂಕಿಯಲ್ಲಿ ಕುದಿಯುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಾಲಿಬಾನ್ ಪಡೆಗಳು ಕೂಡ, ನೇರವಾಗಿ ಪಾಕಿಸ್ತಾನದ ವಿರುದ್ಧ ದಾಳಿ ಮಾಡುತ್ತಾ? ಎಂಬ ಚರ್ಚೆ ಶುರುವಾಗಿದೆ. ಈಗಿರುವ ಸ್ಥಿತಿಯಲ್ಲಿ ತಾಲಿಬಾನ್ ನೇರವಾಗಿ ಪಾಕಿಸ್ತಾನ ವಿರುದ್ಧ ದಾಳಿ ಮಾಡದೇ ಇದ್ದರೂ, ಒಂದಷ್ಟು ಬಿಸಿ ಮುಟ್ಟಿಸುವ ಸಾಧ್ಯತೆ ಇದೆ.












Click it and Unblock the Notifications