ಬಟ್ಟೆ ಬಿಚ್ಚುತ್ತೇನೆ ಎಂದಿದ್ದ ರೂಪದರ್ಶಿಗೆ ಸಹೋದರನೇ ಗುಂಡಿಕ್ಕಿದ

Written By:
Subscribe to Oneindia Kannada

ಮುಲ್ತಾನ್, ಜುಲೈ, 16: ವಿಶ್ವ ಟಿ-20 ಕಪ್ ವೇಳೆ ಬಟ್ಟೆ ಬಿಚ್ಚುತ್ತೇನೆ ಎಂದು ಹೇಳಿ ಸುದ್ದಿ ಮಾಡಿದ್ದ ಪಾಕ್ ರೂಪದರ್ಶಿ ಹಾಗೂ ನಟಿ ಕ್ವಂಡೀಲ್ ಬಲೋಚ್ ದುರಂತ ಸಾವಿಗೀಡಾಗಿದ್ದಾರೆ.

ಮಾಧ್ಯಮಗಳ ವರದಿಯಂತೆ ಆಕೆಯ ಸಹೋದರನೇ ಆಕೆಯನ್ನು ಶೂಟ್ ಮಾಡಿ ಕೊಂದಿದ್ದಾನೆ. ಕ್ವಂಡೀಲ್ ಬಲೋಚ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಎಂದು ಹಿಂದೆ ವರದಿಯಾಗಿತ್ತು.["ವಿರಾಟ್ ಐ ಲವ್ ಯು ಬೆಬಿ" ಬಾತ್ ಟಬ್‌ನಲ್ಲಿ ನಟಿ ಹಾಡು]

model

ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅರೆಬೆತ್ತಲೆ ಚಿತ್ರಗಳನ್ನು ಪೋಸ್ಟ್ ಮಾಡುವುದು, ಅಸಂಬದ್ಧ ಹೇಳಿಕೆ ನೀಡುವುದನ್ನು ಬಲೂಚ್ ಮಾಡಿಕೊಂಡು ಬಂದಿದ್ದರು. ಪಾಕಿಸ್ತಾನದ ಮೂಲಭೂತವಾದಿಗಳಿಂದಲೂ ಅನೇಕ ಸಾರಿ ವಿರೋಧ ಕಂಡಿದ್ದಳು.

ಮುಲ್ತಾನ್ ನಲ್ಲಿ ಆಕೆಯ ಸಹೋದರನಿಂದಲೇ ಬಲೂಚ್ ಹತ್ಯೆಯಾಗಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಬಲೂಚ್ ಹೇಳಿಕೊಂಡಿದ್ದರು.[ಭಾರತ ಗೆದ್ದಿದ್ದಕ್ಕೆ ಪೂನಂಪಾಂಡೆ 'ಎದೆಗಾರಿಕೆ']

ಐಪಿಎಲ್ ವೇಳೆಯೂ ಸುದ್ದಿ ಮಾಡಿದ್ದ ನಟಿ ವಿರಾಟ್ ಕೊಹ್ಲಿ ಮೇಲಿನ ಪ್ರೀತಿಯನ್ನು ಬಾತ್ ಟಬ್ ನಲ್ಲಿ ಹೊರಹಾಕಿದ್ದರು. "ವಿರಾಟ್ ಐ ಲವ್ ಯು ಬೆಬಿ, ಐ ಮಿಸ್ ಯು ಬೆಬಿ ಎಂದು ಬಾತ್ ಟಬ್ ನಲ್ಲಿ ಹಾಡುತ್ತ ಬಲೂಚ್ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Internet sensation and Pakistani model Qandeel Baloch was shot dead in Multan on Saturday. Initial reports suggest the actor cum model was shot dead by her brother.
Please Wait while comments are loading...