'ಮಾಧ್ಯಮಗಳನ್ನು ಕರೆದೊಯ್ದು 'ದಾಳಿ' ಪ್ರದೇಶಗಳನ್ನು ತೋರಿಸುತ್ತೇವೆ'

Recommended Video

      Surgical Strike 2: ಶಾ ಮಹ್ಮೂದ್ ಖುರೇಷಿ: ಮಾಧ್ಯಮಗಳನ್ನು ಕರೆದೊಯ್ದು 'ದಾಳಿ' ಪ್ರದೇಶಗಳನ್ನು ತೋರಿಸುತ್ತೇವೆ

      ಭಾರತ ವಾಯುಸೇನೆ ದಾಳಿ ನಡೆಸಿದ ಜಾಗಗಳು ಇಂಥವು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಮಂಗಳವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು, ತಿಳಿಸಿದ್ದಾರೆ. ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತ ಜೈಶ್ ಇ ಮೊಹ್ಮದ್ ನ ಮುಖ್ಯ ನೆಲೆ ಬಲಾಕೋಟ್ ನಲ್ಲಿ ದಾಳಿ ನಡೆಸಿದ ಬಗ್ಗೆ ಭಾರತ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ.

      ಆದರೆ, ಯಾವುದೇ ದಾಳಿಯ ಆಗಿಲ್ಲ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದಿದ್ದ ಭಾರತೀಯ ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯು ಸೇನೆಯಿಂದ ಹಿಮ್ಮೆಟ್ಟಿಸಲಾಗಿದೆ ಎಂದು ಅಲ್ಲಿನ ಸೇನಾ ವಕ್ತಾರ ತಿಳಿಸಿದ್ದಾರೆ. ಒಂದು ಕಡೆ ಭಾರತವು ದಾಳಿ ಮಾಡಿರುವುದನ್ನು ಖಾತ್ರಿ ಪಡಿಸುತ್ತಿದ್ದರೆ, ಮತ್ತೊಂದು ಕಡೆ ಪಾಕ್ ಸೇನೆ ನಿರಾಕರಿಸಿದೆ.

      Mahammad Qureshi

      ಇನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮದ್ ಖುರೇಷಿ ಮಾತು ಮತ್ತೂ ಆಸಕ್ತಿಕರವಾಗಿದೆ. ಅ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಅದನ್ನು ಹಾಕಿದ್ದಾರೆ. ಎಲ್ಲೆಲ್ಲಿ ದಾಳಿ ನಡೆದಿದೆ ಅಂತ ಹೇಳಲಾಗುತ್ತಿದೆಯೋ ಅಲ್ಲೆಲ್ಲ ಅಂತರರಾಷ್ಟ್ರೀಯ ಮಾಧ್ಯಮಗಳನ್ನು ಕರೆದೊಯ್ಯುತ್ತೇವೆ. ಅದಕ್ಕಾಗಿ ಹೆಲಿಕಾಪ್ಟರ್ ಕೂಡ ಸಿದ್ಧವಿದೆ. ಆದರೆ ಈಗ ಹವಾಮಾನ ಚೆನ್ನಾಗಿಲ್ಲ. ಆದ್ದರಿಂದ ಯಾವಾಗ ಹವಾಮಾನ ಸರಿಹೋಗುವುದೋ ಆಮೇಲೆ ಕರೆದೊಯ್ಯುತ್ತೇವೆ ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+