Get Updates
Get notified of breaking news, exclusive insights, and must-see stories!

ಔಷಧಿ, ಗ್ಯಾಸ್‌, ತೈಲಕ್ಕಾಗಿ ಪಾಕಿಸ್ತಾನದಲ್ಲಿ ಹಾಹಾಕಾರ: ಲಂಕೆಯ ನಂತರ ದಿವಾಳಿಯತ್ತ ಭಾರತ ಉಪಖಂಡದ ಮತ್ತೊಂದು ದೇಶ- ಮಾಹಿತಿ, ವಿವರ

ಇಸ್ಲಾಮಾಬಾದ್, ಜನವರಿ 20: ಭಾರೀ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಇದೀಗ ಜೀವರಕ್ಷಕ ಔಷಧಿಗಳ ತೀವ್ರ ಕೊರತೆಯತ್ತ ಸಾಗುತ್ತಿದೆ. ಪಾಕಿಸ್ತಾನದ ಫಾರ್ಮಾಸ್ಯುಟಿಕಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಪಿಪಿಎಂಎ) ಈ ಎಚ್ಚರಿಕೆಯನ್ನು ನೀಡಿದೆ. ಹದಿನೈದು ದಿನಗಳೊಳಗೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (ಎಸ್‌ಬಿಪಿ) ಲೆಟರ್ ಆಫ್ ಕ್ರೆಡಿಟ್ (ಎಲ್‌ಸಿ) ತೆರೆಯದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಎಚ್ಚರಿಸಿದೆ. ಶೆಹಬಾಜ್ ಷರೀಫ್ ನೇತೃತ್ವದ ದೇಶವು ಸರ್ಕಾರದ ದೂರದೃಷ್ಟಿಯಿಲ್ಲದ ನೀತಿ ನಿರ್ಧಾರಗಳಿಂದಾಗಿ ಆರ್ಥಿಕತೆ, ಇಂಧನ ಮತ್ತು ಆಹಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ.

 ರಾಷ್ಟ್ರವ್ಯಾಪಿ ಔಷಧದ ಕೊರತೆಯ ಬಿಕ್ಕಟ್ಟು

ರಾಷ್ಟ್ರವ್ಯಾಪಿ ಔಷಧದ ಕೊರತೆಯ ಬಿಕ್ಕಟ್ಟು

ಪಿಪಿಎಂಎ ಮುಖ್ಯಸ್ಥ ಸೈಯದ್ ಫಾರೂಕ್ ಬುಖಾರಿ ಬುಧವಾರ ಪಾಕಿಸ್ತಾನದಲ್ಲಿ ರಾಷ್ಟ್ರವ್ಯಾಪಿ ಔಷಧದ ಕೊರತೆಯ ಬಿಕ್ಕಟ್ಟು ಮುಂಬರುವ ಸಮಯದಲ್ಲಿ ಉಲ್ಬಣಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಔಷಧೀಯ ಕಂಪನಿಗಳು ಔಷಧಿಗಳ ಉತ್ಪಾದನೆಗೆ ಕಚ್ಚಾವಸ್ತುಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಮುಂದಿನ 15 ದಿನಗಳಲ್ಲಿ ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಲೆಟರ್ ಆಫ್ ಕ್ರೆಡಿಟ್ ಅನ್ನು ತೆರೆಯದಿದ್ದರೆ, ರಾಷ್ಟ್ರವು ಔಷಧಿಗಳ ತೀವ್ರ ಕೊರತೆಗೆ ಸಾಕ್ಷಿಯಾಗಲಿದೆ ಎಂದು ಬುಖಾರಿ ತಿಳಿಸಿದ್ದಾರೆ.

 ತುರ್ತು ಹಣಕಾಸಿನ ಕ್ರಮಕ್ಕೆ ಆಗ್ರಹ

ತುರ್ತು ಹಣಕಾಸಿನ ಕ್ರಮಕ್ಕೆ ಆಗ್ರಹ

ಜೀವ ಉಳಿಸುವ ಔಷಧಿಗಳು ಸೇರಿದಂತೆ ರೋಗಿಗಳ ಚಿಕಿತ್ಸೆಗಾಗಿ ಔಷಧಗಳು ಮತ್ತು ಅಗತ್ಯ ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ಆಮದನ್ನು ತಕ್ಷಣವೇ ಪುನರಾರಂಭಿಸಬೇಕಿದೆ. ತುರ್ತು ಹಣಕಾಸಿನ ಕ್ರಮಗಳನ್ನು ಅಳವಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಸೋಸಿಯೇಷನ್ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಡಾನ್ ವರದಿ ಮಾಡಿದೆ.

 ವಿದೇಶಿ ವಿನಿಮಯ ಬಿಕ್ಕಟ್ಟು

ವಿದೇಶಿ ವಿನಿಮಯ ಬಿಕ್ಕಟ್ಟು

ಪಾಕಿಸ್ತಾನದಲ್ಲಿ ಚಾಲ್ತಿಯಲ್ಲಿರುವ ವಿದೇಶಿ ವಿನಿಮಯ ಬಿಕ್ಕಟ್ಟು ದೇಶದಲ್ಲಿ ಔಷಧಗಳ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಪಿಪಿಎಂಎ ಕೇಂದ್ರ ಅಧ್ಯಕ್ಷ ಸೈಯದ್ ಫಾರೂಕ್ ಬುಖಾರಿ ಹೇಳಿದ್ದಾರೆ. ಔಷಧ ಉತ್ಪಾದಕರು ಅಗತ್ಯ ಔಷಧಗಳ ಸ್ಥಳೀಯ ಉತ್ಪಾದನೆಗೆ ಅಗತ್ಯವಿರುವ ಕಡ್ಡಾಯ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಬುಖಾರಿ ತಿಳಿಸಿದ್ದಾರೆ. ಔಷಧಿ ತಯಾರಕರಿಕೆಯನ್ನು ಅತ್ಯಗತ್ಯ ಉದ್ಯಮವಾಗಿ ಪರಿಗಣಿಸಲು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರಿಂದಾಗಿ ಅವರ ಕಚ್ಚಾ ವಸ್ತುಗಳು ಆಮದು ಮಾಡಿಕೊಳ್ಳದೆ ವರ್ಷವಿಡೀ ಲಭ್ಯವಿರುತ್ತವೆ. ಪಾಕಿಸ್ತಾನಿ ಬ್ಯಾಂಕ್‌ಗಳಲ್ಲಿ ಡಾಲರ್‌ಗಳ ಅಲಭ್ಯತೆಯಿಂದಾಗಿ ಈ ಅಡಚಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

 ಔಷಧ ಕೊರತೆ ಬಿಕ್ಕಟ್ಟು: ಪಾಕಿಸ್ತಾನ ಎಲ್ಲಿದೆ?

ಔಷಧ ಕೊರತೆ ಬಿಕ್ಕಟ್ಟು: ಪಾಕಿಸ್ತಾನ ಎಲ್ಲಿದೆ?

ಪಾಕಿಸ್ತಾನದಲ್ಲಿ ಸುಮಾರು 770 ಔಷಧಿ ಉತ್ಪಾದಕರು ಔಷಧದ ಕೊರತೆಯ ಬಿಕ್ಕಟ್ಟಿನಿಂದ ಬಳಲುತ್ತಿದ್ದಾರೆ. ಏಕೆಂದರೆ ಅವರು ಕಚ್ಚಾ ಮತ್ತು ಪ್ಯಾಕೇಜಿಂಗ್ ವಸ್ತುಗಳ ಅಗತ್ಯ ಆಮದುಗಳನ್ನು ಪಡೆದಿಲ್ಲ. ಇದನ್ನು ದೇಶಾದ್ಯಂತ ರೋಗಿಗಳಿಗೆ ಅಗತ್ಯವಿರುವ 90 ಪ್ರತಿಶತದಷ್ಟು ಔಷಧಿಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ ಎಂದು ಡಾನ್ ವರದಿ ಮಾಡಿದೆ. ಔಷಧಿಗಳನ್ನು ಆಮದು ಮಾಡಿಕೊಳ್ಳಲು USD 150 ಮಿಲಿಯನ್ ಅಗತ್ಯವಿದೆ ಹೇಳಲಾಗುತ್ತಿದೆ.

 ಔಷಧ ತಯಾರಿಕೆಯು ಕುಂಠಿತಗೊಳ್ಳುವ ಆತಂಕ

ಔಷಧ ತಯಾರಿಕೆಯು ಕುಂಠಿತಗೊಳ್ಳುವ ಆತಂಕ

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಪಾಕಿಸ್ತಾನದ ಫಾರ್ಮಾ ಉದ್ಯಮಕ್ಕೆ ಬೇರೆ ದಾರಿಯಿಲ್ಲ ಎಂದು ಸೈಯದ್ ಫಾರೂಕ್ ಬುಖಾರಿ ಹೇಳಿದ್ದಾರೆ. ಆದರೆ ದೀರ್ಘಕಾಲದವರೆಗೆ ಅಗತ್ಯವಾದ ಕಚ್ಚಾವಸ್ತುವನ್ನು ಪಡೆಯದಿದ್ದಾಗ, ಅಂತಿಮವಾಗಿ ದೇಶೀಯ ಔಷಧ ತಯಾರಿಕೆಯನ್ನು ಕುಂಠಿತಗೊಳಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

 ಅನಗತ್ಯ ತಪಾಸಣೆಗಳಿಂದಾಗಿ ಉದ್ಯಮಕ್ಕೆ ಹೊಡೆತ

ಅನಗತ್ಯ ತಪಾಸಣೆಗಳಿಂದಾಗಿ ಉದ್ಯಮಕ್ಕೆ ಹೊಡೆತ

ಔಷಧಿಗಳ ಬೆಲೆಗಳ ಮೇಲೆ ಅನಗತ್ಯ ತಪಾಸಣೆಗಳಿಂದಾಗಿ ಪಾಕಿಸ್ತಾನಿ ಔಷಧೀಯ ಉದ್ಯಮವು ಈಗಾಗಲೇ ಸಾಕಷ್ಟು ತೊಂದರೆಗೆ ಒಳಗಾಗಿದೆ. ಇದು ಇನ್ನು ಮುಂದೆ ಸಮಸ್ಯೆಗಳನ್ನು ಎದುರಿಸಬಾರದು. ಡಾಲರ್‌ಗಳ ಅಲಭ್ಯತೆಯಿಂದ ಉಂಟಾದ ಪ್ರಸ್ತುತ ಬಿಕ್ಕಟ್ಟಿನ ಮಧ್ಯೆ ಸರ್ಕಾರವು ತುರ್ತು ಸರಿಪಡಿಸುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಫಾರೂಕ್ ಬುಖಾರಿ ಹೇಳಿದರು.

 ಕರಾಚಿ ಬಂದರಿನಲ್ಲಿ ವೈದ್ಯಕೀಯ ಉಪಕರಣಗಳಿಗೆ ನಿರ್ಬಂಧ

ಕರಾಚಿ ಬಂದರಿನಲ್ಲಿ ವೈದ್ಯಕೀಯ ಉಪಕರಣಗಳಿಗೆ ನಿರ್ಬಂಧ

ಕೆಲವು ದಿನಗಳ ಹಿಂದೆ, ಪಾಕಿಸ್ತಾನವು ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಒಳಗಾಗಿರುವ ಕಾರಣ ಕರಾಚಿ ಬಂದರಿನಲ್ಲಿ ಅಗತ್ಯ ಆಹಾರ ಪದಾರ್ಥಗಳು, ಕಚ್ಚಾ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳೊಂದಿಗೆ ಪ್ಯಾಕ್ ಮಾಡಲಾದ ಸಾವಿರಾರು ಕಂಟೈನರ್‌ಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ ಎಂದು ವರದಿಯಾಗಿದೆ.

 ಲೆಟರ್ ಆಫ್ ಕ್ರೆಡಿಟ್ ನಿರಾಕರಣೆ

ಲೆಟರ್ ಆಫ್ ಕ್ರೆಡಿಟ್ ನಿರಾಕರಣೆ

ಡಾಲರ್ ಕೊರತೆಯಿಂದಾಗಿ ಆಮದುದಾರರಿಗೆ ಹೊಸ ಲೆಟರ್ ಆಫ್ ಕ್ರೆಡಿಟ್ ನೀಡಲು ಪಾಕಿಸ್ತಾನದ ಬ್ಯಾಂಕುಗಳು ನಿರಾಕರಿಸಿವೆ. ಇದು ಈಗಾಗಲೇ ದೇಶದಲ್ಲಿ ಹಣದುಬ್ಬರ ಏರಿಕೆಯಿಂದ ಬಳಲುತ್ತಿರುವ ಆರ್ಥಿಕತೆಗೆ ಹೊಡೆತ ನೀಡಿದೆ. ಇತ್ತೀಚೆಗೆ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಫಾರೆಕ್ಸ್ ಮೀಸಲು USD 6 ಶತಕೋಟಿಗಿಂತ ಕಡಿಮೆಯಾಗಿದೆ, ಇದು ಒಂಬತ್ತು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+