ಮತ್ತೆ 55 ಉಗ್ರರನ್ನು ಗಲ್ಲಿಗೇರಿಸಲು ಪಾಕ್ ಸಜ್ಜು
ಇಸ್ಲಾಮಾಬಾದ್, ಡಿ. 22: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತು ಪಾಕಿಸ್ತಾನಕ್ಕೆ ಸರಿಯಾಗಿ ಅನ್ವಯಿಸುತ್ತದೆ. ಉಗ್ರರನ್ನು ರಕ್ಷಿಸಿ, ಪೋಷಿಸಿ, ಪ್ರೋತ್ಸಾಹಿಸುತ್ತಿದ್ದ ಪಾಕಿಸ್ತಾನ ಈಗ ತನ್ನ ಮಕ್ಕಳೇ ಬಲಿಯಾದ ಮೇಲೆ ಎಚ್ಚೆತ್ತುಕೊಂಡಿದೆ.
ಪೇಶಾವರದಲ್ಲಿ ಮಕ್ಕಳ ಹತ್ಯಾಕಾಂಡ ನಡೆದ ಮೇಲೆ ಕೆಲವು ಉಗ್ರರನ್ನು ಈಗಾಗಲೇ ಪಾಕ್ ಸರ್ಕಾರ ನೇಣಿಗೇರಿಸಿದೆ. ಈಗ ಮತ್ತೆ 55 ಉಗ್ರರಿಗೆ ಗಲ್ಲು ಜಾರಿ ಮಾಡಲು ಸಜ್ಜಾಗಿದೆ.
ಗಲ್ಲು ಶಿಕ್ಷೆ ಘೋಷಣೆಯಾಗಿರುವ ಸುಮಾರು 500 ಉಗ್ರರು ಪಾಕಿಸ್ತಾನ ಜೈಲಿನಲ್ಲಿದ್ದಾರೆ. ಆದರೂ ರಾಷ್ಟ್ರಪತಿ ಹತ್ತಿರ ಕ್ಷಮೆಗಾಗಿ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಇನ್ನೂ ಜೈಲಿನಲ್ಲಿ ಜೀವಂತವಾಗಿದ್ದಾರೆ. ಆದರೆ, ಈಗ ರಾಷ್ಟ್ರಪತಿ ಮನ್‌ಮೂನ್ ಹುಸೇನ್ 55 ಉಗ್ರರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿರುವ ಕಾರಣ ಶಿಕ್ಷೆ ಜಾರಿಗೊಳಿಸಲು ಸೇನೆ ಸಜ್ಜಾಗಿದೆ. [ಮಕ್ಕಳ ಹತ್ಯಾಕಾಂಡ : ಅಲ್ ಖೈದಾ ದುಃಖದಲ್ಲಿದೆಯಂತೆ]

ಜರ್ದಾರಿ ಕ್ರಮ ಕೈಗೊಂಡಿರಲಿಲ್ಲ : ಹಿಂದಿನ ರಾಷ್ಟ್ರಪತಿ ಆಸಿಫ್ ಅಲಿ ಜರ್ಧಾರಿ ಎದುರು ಅನೇಕ ಕ್ಷಮಾದಾನ ಅರ್ಜಿಗಳು ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಈಗಿನ ರಾಷ್ಟ್ರಪತಿ ಈ ಎಲ್ಲ ಅರ್ಜಿಗಳ ವಿಲೇವಾರಿ ಆರಂಭಿಸಿದ್ದಾರೆ. ಆದರೆ, ಮಕ್ಕಳ ಮಾರಣಹೋಮದ ಹಿನ್ನೆಲೆಯಲ್ಲಿ ಯಾವುದೇ ಉಗ್ರರ ಮೇಲೆ ಕನಿಕರ ತೋರಿಸಲು ನಿರಾಕರಿಸಿದ್ದಾರೆ.
ಪ್ರತಿಕ್ರಿಯೆ ಎದುರಿಸಲು ಸಿದ್ಧ : ಪ್ರಸ್ತುತ ಜೈಲಿನಲ್ಲಿರುವ ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನದ ಆಂತರಿಕ ಸಚಿವ ನಿಸಾರ್ ಅಲಿ ಖಾನ್ ತಿಳಿಸಿದ್ದಾರೆ. "ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ 500ಕ್ಕಿಂತ ಹೆಚ್ಚು ಉಗ್ರರು ಇದ್ದಾರೆ. ಅವರೆಲ್ಲರನ್ನೂ ಗಲ್ಲಿಗೇರಿಸುವ ಕುರಿತು ಯೋಚಿಸಲಾಗುತ್ತಿದೆ. ಪೇಶಾವರದಲ್ಲಿ ನೂರಾರು ಮಕ್ಕಳು ಸೇರಿದಂತೆ 148 ಜನರನ್ನು ತಾಲಿಬಾನ್ ಉಗ್ರರು ಹತ್ಯೆಗೈದಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ" ಎಂದು ನಿಸಾರ್ ಅಲಿ ಖಾನ್ ತಿಳಿಸಿದ್ದಾರೆ. [ಪಾಕಿಸ್ತಾನದಲ್ಲಿ ನೂರಾರು ಮಕ್ಕಳ ಬಲಿ]
ಇಷ್ಟೇ ಅಲ್ಲ, ಇವರೆಲ್ಲರನ್ನೂ ನೇಣಿಗೇರಿಸಿದಾಗ ಉಗ್ರರು ನೀಡುವ ಯಾವುದೇ ಪ್ರತಿಕ್ರಿಯೆ ಎದುರಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
11 ವರ್ಷಗಳ ಹಿಂದೆ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹತ್ಯೆಗೆ ಯತ್ನಿಸಿದ್ದ ನಾಲ್ವರು ಉಗ್ರರನ್ನು ಭಾನುವಾರವಷ್ಟೇ ನೇಣಿಗೇರಿಸಲಾಗಿತ್ತು. ಈ ಮೂಲಕ ಇಲ್ಲಿಯವರೆಗೆ ನೇಣಿಗೇರಿಸಲ್ಪಟ್ಟ ಉಗ್ರರ ಸಂಖ್ಯೆ ಆರಕ್ಕೇರಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications