ಕಾಶ್ಮೀರಕ್ಕಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ತಂತ್ರ

ಇಸ್ಲಾಮಾಬಾದ್, ಸೆಪ್ಟೆಂಬರ್ 11: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದರು.

ಇದೀಗ ಕಾಶ್ಮೀರಕ್ಕಾಗಿ ಇಮ್ರಾನ್ ಖಾನ್ ಮೆರವಣಿಗೆಗೆ ಮುಂದಾಗಿದ್ದಾರೆ.ಕಣಿವೆ ರಾಜ್ಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಆರ್ಟಿಕಲ್ 370ನ್ನು ತೆಗೆದು ಹಾಕಿರುವ ಭಾರತ ಸರ್ಕಾರದ ವಿರುದ್ಧ ಅಂತರಾಷ್ಟ್ರೀಯ ಗಮನ ಸೆಳೆಯುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಈಗ ಹೊಸ ಸಾಹಸ ಮಾಡುತ್ತಿದೆ.

ಈಗಾಗಲೇ ಜಮ್ಮು ಕಾಶ್ಮೀರದ ವಿಚಾರ ಕುರಿತಾಗಿ ಇಮ್ರಾನ್ ಖಾನ್ ಗರಂ ಆಗಿದ್ದು, ಪಾಕಿಸ್ತಾನದ ಏರೋಸ್ಪೇಸ್‌ನಲ್ಲಿ ಭಾರತದ ವಿಮಾನಗಳು ಹಾರಾಡದಂತೆ ನಿರ್ಬಂಧ ವಿಧಿಸಿದ್ದಾರೆ.

 ಪಾಕ್ ಆಕ್ರಮಿತ ಪ್ರದೇಶದಲ್ಲಿ ಇಮ್ರಾನ್ ಖಾನ್ ರ‍್ಯಾಲಿ

ಪಾಕ್ ಆಕ್ರಮಿತ ಪ್ರದೇಶದಲ್ಲಿ ಇಮ್ರಾನ್ ಖಾನ್ ರ‍್ಯಾಲಿ

ಪಾಕಿಸ್ತಾನವು ತನ್ನ ಕುಯುಕ್ತಿ ಬುದ್ಧಿಯಿಂದ ಹೊರಬರದ ಪಾಕಿಸ್ತಾನವು ಹೊಸ ತಂತ್ರಗಳನ್ನು ಅನುಸರಿಸುತ್ತಿದೆ.

ಇಮ್ರಾನ್ ಇದೀಗ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮುಜಫರಾಬಾದ್‌ನಲ್ಲಿ ಬೃಹತ್ ರ‍್ಯಾಲಿ ನಡೆಸಲು ಮುಂದಾಗಿದ್ದು ಈ ವಿಚಾರವನ್ನು ಇಮ್ರಾನ್ ಖಾನ್ ಸ್ವತಃ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

 ಇಮ್ರಾನ್ ಖಾನ್ ಟ್ವೀಟ್‌ನಲ್ಲಿ ಏನಿದೆ?

ಇಮ್ರಾನ್ ಖಾನ್ ಟ್ವೀಟ್‌ನಲ್ಲಿ ಏನಿದೆ?

ಸೆಪ್ಟೆಂಬರ್ 13ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೃಹತ್ ರ‍್ಯಾಲಿ ನಡೆಸಲಿದ್ದೇವೆ.

ಸೆಪ್ಟೆಂಬರ್ 13 ರಂದು ಪಿಒಕೆ ಮುಜಫರಾಬಾದ್‌ನಲ್ಲಿ ದೊಡ್ಡ ರ್ಯಾಲಿ ನಡೆಸಲಿದ್ದೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳ ನಿರಂತರ ಮುತ್ತಿಗೆಯ ಬಗ್ಗೆ ಸಂದೇಶವನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಪಾಕಿಸ್ತಾನವು ಅವರೊಂದಿಗೆ ಸಂಪೂರ್ಣವಾಗಿ ನಿಂತಿದೆ ಎಂದು ಕಾಶ್ಮೀರಿಗಳಿಗೆ ತೋರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.

 ಪಾಕಿಸ್ತಾನ ಎಂದಿಗೂ ಕಾಶ್ಮೀರ ಬಿಟ್ಟು ಹೋಗುವುದಿಲ್ಲ

ಪಾಕಿಸ್ತಾನ ಎಂದಿಗೂ ಕಾಶ್ಮೀರ ಬಿಟ್ಟು ಹೋಗುವುದಿಲ್ಲ

ಕಾಶ್ಮೀರದ ಜ್ವರ ಪಾಕಿಸ್ತಾನವನ್ನು ಸಂಪೂರ್ಣವಾಗಿ ಆವರಿಸಿದೆ. ಪರಿಚ್ಛೇದ 370 ರದ್ದುಗೊಳಿಸಿದ ಬೆನ್ನಲ್ಲೇ ಕಾಶ್ಮೀರಕ್ಕಾಗಿ ಪಾಕಿಸ್ತಾನ ಹೋರಾಟ ಆರಂಭಿಸಿದೆ.

ಇತ್ತೀಚೆಗೆ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಿಲಿಟರಿ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು ಪಾಕಿಸ್ತಾನ ಎಂದಿಗೂ ಕಾಶ್ಮೀರವನ್ನು ಬಿಟ್ಟು ಹೋಗುವುದಿಲ್ಲ, ಕಾಶ್ಮೀರವಿಲ್ಲದೆ ಪಾಕಿಸ್ತಾನ ಅಪೂರ್ಣವಾಗಿದೆ ಮತ್ತು ಕಾಶ್ಮೀರವು ಪಾಕಿಸ್ತಾನದ ಜುಗುಲಾರ್ ಕುತ್ತಿಗೆಯಂತಿದೆ ಎಂದು ಹೇಳಿದ್ದರು.

 1965ರ ಪರಿಸ್ಥಿತಿ ಮತ್ತೊಮ್ಮೆ ಎದುರಿಸುತ್ತಿದ್ದೇವೆ ಎಂದ ಖಾನ್

1965ರ ಪರಿಸ್ಥಿತಿ ಮತ್ತೊಮ್ಮೆ ಎದುರಿಸುತ್ತಿದ್ದೇವೆ ಎಂದ ಖಾನ್

ಶತ್ರು ಮತ್ತೊಮ್ಮೆ ನಿಯಂತ್ರಣ ರೇಖೆಯಲ್ಲಿ ಆಕ್ರಮಣಶೀಲತೆಯನ್ನು ತೋರಿಸುತ್ತಿದ್ದಾನೆ. ಇದು ಯುಎನ್ ನಿರ್ಣಯಗಳಿಗೆ ವಿರುದ್ಧವಾಗಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ ಮತ್ತು ಕಾಶ್ಮೀರದ ಮುಗ್ಧ ಜನರ ಮೇಲಿನ ದಬ್ಬಾಳಿಕೆ ಎಂದು ಇಮ್ರಾನ್ ಹೇಳಿದ್ದಾರೆ. ಇಂದು ನಾವು ಮತ್ತೊಮ್ಮೆ 1965 ರಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+