ಇಮ್ರಾನ್ ಖಾನ್ ಡ್ರಗ್ಸ್ ತಗೋತಾರ? ಕೊಕೇನ್ ಪತ್ತೆ ಆಯ್ತಾ?

ಇಸ್ಲಾಮಾಬಾದ್: ಇಮ್ರಾನ್ ಖಾನ್‌ಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಉಗ್ರರಿಗೆ ಮನೆಯಲ್ಲೇ ಜಾಗ ಕೊಟ್ಟ ಆರೋಪ, ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದವು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಮ್ರಾನ್ ಖಾನ್ ಡ್ರಗ್ಸ್ ತಗೋತಾರೆ ಎಂದು ಪಾಕಿಸ್ತಾನದ ಕೇಂದ್ರ ಸಚಿವ ಆರೋಪಿಸಿದ್ದಾರೆ. ಅಲ್ಲದೆ ಇಮ್ರಾನ್ ದೇಹದಲ್ಲಿ ಕೊಕೇನ್ ಕೂಡ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ಆರೋಪ ಮಾಡಿರುವಂತೆ, ಇಮ್ರಾನ್ ಖಾನ್ ಮೂತ್ರ ಪರೀಕ್ಷೆ ವರದಿಯಲ್ಲಿ ಆಲ್ಕೋಹಾಲ್ ಹಾಗೂ ಕೊಕೇನ್ನಂತಹ ವಿಷಕಾರಿ ರಾಸಾಯನಿಕಗಳ ಪುರಾವೆ ಲಭ್ಯವಾಗಿದೆ. ಹೀಗೆ ಪಾಕಿಸ್ತಾನ ಆರೋಗ್ಯ ಸಚಿವನ ಹೇಳಿಕೆ ಮತ್ತೊಮ್ಮೆ ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಸಚಿವನ ಈ ಹೇಳಿಕೆಯ ವಿರುದ್ಧ ಇಮ್ರಾನ್ ಬೆಂಬಲಿಗರು ಕೆರಳಿದ್ದು, ಆ ಮಾತು ವಾಪಸ್ ಪಡೆಯಿರಿ. ಇಲ್ಲ ಮತ್ತೊಮ್ಮೆ ಪ್ರತಿಭಟನೆ ಬಿಸಿ ಎದುರಿಸಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ (Imran Khan Arrest).

imran khan attack

ಇಮ್ರಾನ್ ಖಾನ್ ಡ್ರಗ್ಸ್ ತಗೋತಾರಾ?

ಪಾಕ್ ಸಚಿವ ಅಬ್ದುಲ್ ಖಾದಿರ್ ಪಟೇಲ್ ಮಾಡಿರುವ ಆರೋಪದ ಪ್ರಕಾರ, 'ಇಮ್ರಾನ್ ಖಾನ್ ಬಂಧನ ಬಳಿಕ ಮೂತ್ರದ ಸ್ಯಾಂಪಲ್‌ನ ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಪರೀಕ್ಷೆ ನಡೆಸಿತ್ತು. ಅದರ ರಿಪೋರ್ಟ್ ಈಗ ಕೈಸೇರಿದ್ದು, ಇಮ್ರಾನ್ ಖಾನ್ ಮಾನಸಿಕ ಸ್ಥಿರತೆ ಕೂಡ ಪ್ರಶ್ನಾರ್ಹವಾಗಿದೆ. ಅಲ್ಲದೆ ಇಮ್ರಾನ್ ದೇಹದಲ್ಲಿ ಆಲ್ಕೋಹಾಲ್ ಹಾಗೂ ಕೊಕೇನ್ ರೀತಿಯ ಅಂಶ ಪತ್ತೆಯಾಗಿವೆ. ಈ ವರದಿ ಸಾರ್ವಜನಿಕ ದಾಖಲೆಯಾಗಿರುವ ಕಾರಣ ಸಾರ್ವಜನಿಕರ ವೀಕ್ಷಣೆಗೂ ಕೊಡಲಾಗುವುದು' ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಎಲ್ಲವೂ ಅಯೋಮಯ!

ಭಾರತದ ಜೊತೆ ಗಡಿಯಲ್ಲಿ ಸದಾ ಕಿರಿಕ್ ಮಾಡುತ್ತಾ, ಕಿರುಕುಳ ನೀಡುವ ಪಾಕಿಸ್ತಾನದ ಸ್ಥಿತಿ ಅಯೋಮಯ ಆಗೋಗಿದೆ. ಇದೇ ಹೊತ್ತಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಆರೋಪ ಮಾಡಿರುವುದು ಪಾಕಿಸ್ತಾನದ ಅರಾಜಕತೆಗೆ ಹಿಡಿದ ಕೈಗನ್ನಡಿ. ಇನ್ನು ಕೇಂದ್ರ ಸಚಿವನ ಆರೋಪಕ್ಕೆ ಇಮ್ರಾನ್ ಖಾನ್ ಪಕ್ಷ ಪಿಟಿಐ ನಾಯಕರು ರೊಚ್ಚಿಗೆದ್ದು ಹೇಳಿಕೆ ನೀಡಿದ್ದಾರೆ. ಅಲ್ಲದೆ ಪಾಕ್ ಸಚಿವ ಅಬ್ದುಲ್ ಖಾದಿರ್ ಪಟೇಲ್ ವಿರುದ್ಧ ಕಾನೂನು ಹೋರಾಟ ಪಕ್ಕಾ ಅಂತಿದ್ದಾರೆ.

imran khan attack

ಮಾಜಿ ಪ್ರಧಾನಿ VS ಮಾಜಿ ಪ್ರಧಾನಿ ಮಗಳು!

ಮೊನ್ನೆ ಮೊನ್ನೆ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಮಗಳು ಮರ್ಯಮ್ ನವಾಜ್ ಕೂಡ ಇಮ್ರಾನ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಳು. ನಾಯಕನೇ ನರಿಯಾಗಿರುವಾಗ ಜನ ಹೇಗೆ ನಿಲ್ಲುತ್ತಾರೆ? ಕಳೆದ ವರ್ಷ ಏಪ್ರಿಲ್‍ನಲ್ಲಿ ಅವಿಶ್ವಾಸ ನಿರ್ಣಯದಿಂದಾಗಿ ಇಮ್ರಾನ್ ಅಧಿಕಾರ ಕಳೆದುಕೊಂಡ ಬಗ್ಗೆ ಆಡಿಕೊಂಡಿದ್ದಾರೆ ನವಾಜ್ ಷರೀಫ್ ಮುದ್ದಿನ ಮಗಳು ಮರ್ಯಮ್. ಅಲ್ಲದೆ ಇಮ್ರಾನ್ ಖಾನ್ ಆಟ ಮುಗಿದಿದೆ, ಅವರ ಪಕ್ಷದ ಕಥೆಯೂ ಇದೀಗ ಮುಗಿದ ಅಧ್ಯಾಯ ಎನ್ನುವ ರೀತಿ ಹೇಳಿಕೆ ನೀಡಿದ್ದರು. ಈಗ ನೋಡಿದರೆ ಕೇಂದ್ರ ಸಚಿವರೇ ಇಮ್ರಾನ್ ಖಾನ್ ವಿರುದ್ಧ ಡ್ರಗ್ಸ್ ಆರೋಪ ಮಾಡಿದ್ದಾರೆ.

ಏನ್ ಗುರೂ ಇದು ಪಾಕಿಸ್ತಾನದ ಕಥೆ?

ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಕೂಡ ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಖಾನ್ ಲಾಕ್ ಆಗಿಲ್ಲ, ಇದೀಗ ಇಮ್ರಾನ್ ಖಾನ್ ಹೊರ ಹೋಗದಂತೆ ಲಾಕ್ ಮಾಡಲಾಗಿದೆ.

imran khan attack

5 ಸಾವಿರ ಕೋಟಿ ರೂ. ನುಂಗಿದ ಇಮ್ರಾನ್?

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಆದ್ರೂ ಇದೇ ಪ್ರಕರಣ ಸಂಬಂಧ ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಹೀಗಾಗಿ ದೇಶ ಬಿಟ್ಟು ಈ ವ್ಯಕ್ತಿ ಓಡಿ ಹೋಗ್ತಾರೆ ಎಂದು ಆರೋಪಿಸಿ ಇಮ್ರಾನ್ ಖಾನ್ ಪಾಸ್ಪೋರ್ಟ್ ಲಾಕ್ ಮಾಡಲಾಗಿದೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+