ಪಾಕಿಸ್ತಾನ ಬುದ್ಧಿ ಜನ್ಮದಲ್ಲಿ ಸರಿ ಹೋಗಲ್ಲ, ತಾಲಿಬಾನ್ ವಿರುದ್ಧ ಮತ್ತೊಮ್ಮೆ ಷಡ್ಯಂತ್ರ?
ತಾಲಿಬಾನ್ ಜೊತೆಗೆ ಜಗಳ ಆಡಿ, ಸರಿಯಾಗಿ ಏಟು ತಿಂದು ಕೊನೆಗೂ ಕೈಕಾಲಿಗೆ ಬಿದ್ದು ದಿಢೀರ್ ಅಂತಾ ಒಪ್ಪಂದ ಮಾಡಿಕೊಂಡು ಹೇಡಿ ರೀತಿ ಓಡಿ ಹೋಗಿರುವ ಪಾಪಿ ಪಾಕಿಸ್ತಾನ ಈಗಲೂ ತನ್ನ ಕುತಂತ್ರ ನಿಲ್ಲಿಸಿಲ್ಲ. ಭಾರತದ ಜೊತೆಗೆ ಕಿರಿಕ್ ಮಾಡುವಂತೆ ತಾಲಿಬಾನ್ ಜೊತೆಗೂ ತಿಕ್ಕಾಟಕ್ಕೆ ಮುಂದಾಗಿದ್ದ ಪಾಪಿ ಪಾಕಿಸ್ತಾನ ಇದೀಗ ನಾಶವಾಗುವ ಹಂತಕ್ಕೆ ಬಂದಿದೆ. ಆರ್ಥಿಕವಾಗಿ ಬೀದಿಗೆ ಬಿದ್ದು ಒದ್ದಾಡುತ್ತಿರುವ ಪಾಕಿಸ್ತಾನ ಈಗಲೂ ತನ್ನ ಹೀನ ಬುದ್ಧಿ ಬಿಡದೆ ಷಡ್ಯಂತ್ರ ಮಾಡುತ್ತಿರುವ ಆರೋಪ ಇದೆ. ಅಲ್ಲದೆ ಮತ್ತೊಮ್ಮೆ ಜಗಳಕ್ಕೆ ಸಜ್ಜಾಗಿರುವ ಆರೋಪ ಕೂಡ ಕೇಳಿಬಂದಿದೆ.
ಭಾರತದ ಜೊತೆಗೂ ಕಿರಿಕ್, ಪಕ್ಕದಲ್ಲಿ ಇರುವ ಅಫ್ಘಾನಿಸ್ತಾನ ವಿರುದ್ಧವೂ ಪಾಕಿಸ್ತಾನದ ಕಿರಿಕ್. ಹೀಗೆ ಪಾಕಿಸ್ತಾನ ಇನ್ನೂ ತನ್ನ ಬುದ್ಧಿ ಸರಿ ಮಾಡಿಕೊಂಡಿಲ್ಲ, ಅಲ್ಲದೆ ಪಾಕಿಸ್ತಾನದ ಈ ರೀತಿ ವರ್ತನೆ ಅಕ್ಕಪಕ್ಕದ ದೇಶಗಳಿಗೆ ಕೂಡ ಸಾಕಷ್ಟು ದೊಡ್ಡ ಸಮಸ್ಯೆ ಮಾಡುತ್ತಾ ಇದೆ. ಹೀಗಾಗಿ ಪಾಕಿಸ್ತಾನದ ವಿರುದ್ಧ ಇಂತಹ ಸಮಯದಲ್ಲಿ ಕಠಿಣ ಕ್ರಮ ಜರುಗಿಸಬೇಕು, ಸರಿಯಾಗಿ ಬುದ್ಧಿ ಕಲಿಸಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಆದರೆ ಇದು ನೆರವೇರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಹಾಗೇ ಭವಿಷ್ಯದಲ್ಲಿ ಕೂಡ ಪಾಕಿಸ್ತಾನದ ವರ್ತನೆ ಇದೇ ರೀತಿ ಇದ್ದರೆ ತಾಲಿಬಾನ್ ಏನು ಬೇಕಾದರೂ ಮಾಡಲು ಸಜ್ಜಾಗಿದೆ.

ಪಾಕಿಸ್ತಾನ ಪುಡಿ ಪುಡಿ ಆಗುತ್ತಾ?
ಹೌದು, ಈಗ ಪಾಕಿಸ್ತಾನ ಸೇನೆಯಿಂದ ಅಪ್ಘಾನಿಸ್ತಾನ ಗಡಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆದಿರುವ ಆರೋಪ ದಿಢೀರ್ ಕೇಳಿಬಂದಿದೆ. ಈ ವಿಚಾರವಾಗಿ ಈಗ ಮತ್ತೊಮ್ಮೆ ತಾಲಿಬಾನ್ ರೊಚ್ಚಿಗೆದ್ದು, ಆಕ್ರೋಶ ಕೂಡ ಹೊರ ಹಾಕುತ್ತಿದೆ. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮದ ಬಗ್ಗೆ ಕೂಡ ತಾಲಿಬಾನ್ ವಾರ್ನಿಂಗ್ ಕೊಟ್ಟಿದೆ. ಆದರೂ ಪಾಕಿಸ್ತಾನ ಮಾತ್ರ ತನ್ನ ಬುದ್ಧಿ ಬದಲಾಯಿಸಿಕೊಳ್ಳುತ್ತಿಲ್ಲ.
ಮತ್ತೆ ಮತ್ತೆ ಇಬ್ಬರ ತಿಕ್ಕಾಟ
ಒಟ್ನಲ್ಲಿ ಪಾಕಿಸ್ತಾನ ಮತ್ತು ತಾಲಿಬಾನ್ ನಡುವೆ ಭೀಕರ ಬಡಿದಾಟ ನಿಂತಿದ್ದರೂ, ಪದೇ ಪದೇ ಹಿಂಸಾಚರ ಭುಗಿಲೇಳುತ್ತಿದೆ. ಇದು ಸ್ಥಳೀಯರಲ್ಲಿ ಆತಂಕ ಈಗಲೂ ಹೆಚ್ಚು ಮಾಡುತ್ತಿದೆ. ಯಾಕಂದ್ರೆ ಈ ಇಬ್ಬರು ತಿಕ್ಕಲುಗಳ ನಡುವೆ ಯಾವಾಗ ಮತ್ತೆ ಜಗಳ ಶುರುವಾಗುತ್ತೋ? ಆ ಮೂಲಕ ಮತ್ತೆ ಇನ್ನೆಷ್ಟು ಜನರ ಜೀವ ಹೋಗುತ್ತೋ? ಅನ್ನೋ ಚಿಂತೆ ಶುರುವಾಗಿದೆ. ಹೀಗಾಗಿಯೇ ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿ ಭಾಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಎರಡೂ ಕಡೆ ದ್ವೇಷದ ಬೆಂಕಿ ಕೊತ ಕೊತ ಕುದಿಯುತ್ತಿದೆ.












Click it and Unblock the Notifications