ಚೀನಾ ಬಳಿ ಮತ್ತೆ ಅಂಗಲಾಚಿದ ಪಾಕಿಸ್ತಾನ, ಯಾಕೆ ಗೊತ್ತಾ ?
pakistan is begging for funds: ಆರ್ಥಿಕವಾಗಿ ಪಾಪರ್ ಆಗಿರುವ ಪಾಕಿಸ್ತಾನ ಇದೀಗ ಮತ್ತೆ ಚೀನಾದ ಬಳಿ ಅಂಗಲಾಚಿದೆ. ಪಾಕಿಸ್ತಾನ ಕಳೆದ ಹಲವು ವರ್ಷಗಳಿಂದ ಆರ್ಥಿಕವಾಗಿ ಸೊರಗಿ ಹೋಗಿದೆ. ಈಗಾಗಲೇ ಚೀನಾ ಹಾಗೂ ಮುಸ್ಲಿಂ ರಾಷ್ಟ್ರಗಳಿಂದ ಸಾಲ ಪಡೆದಿದೆ. ಆ ಸಾಲಗಳನ್ನು ತೀರಿಸುವ ಮೊದಲೇ ಇದೀಗ ಮತ್ತೆ ಸಾಲ ಕೊಡಿ ಪ್ಲೀಸ್ ಅಂತಿದೆ.
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನವು ಇದೇ ಮೊದಲೇನು ಅಲ್ಲ ಚೀನಾದ ಬಳಿ ಸಾಲ ಕೇಳ್ತಿರೋದು. ಈ ಹಿಂದೆನೂ ಹಲವು ಬಾರಿ ಸಾಲ ಕೇಳಿದೆ. ಈಚೆಗಿನ ವರ್ಷದಲ್ಲಿ ಪಾಕಿಸ್ತಾನ ಇನ್ನಿಲ್ಲದ ಆರ್ಥಿಕ ದಿವಾಳಿಯಾಗಿದೆ. ಪಾಕಿಸ್ತಾನದಲ್ಲಿ ಊಟ, ವಿದ್ಯುತ್ ಇಲ್ಲದೆ ಜನ ಪರದಾಡಿದ್ದಾರೆ. ರೇಷನ್‌ಗಳು ಖಾಲಿಯಾಗಿ ಬೀದಿಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ಸಂಕಷ್ಟ ಅನುಭವಿಸಿದ್ದಾರೆ. ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿಯತ್ತ ಪಾಕಿಸ್ತಾನ ಮತ್ತೆ ಹೋಗುತ್ತಿರುವಂತಿದೆ.

ಪಾಕಿಸ್ತಾನವು ಇದೀಗ ಚೀನಾದ ಬಳಿ ಬರೋಬ್ಬರಿ 11,000 ಸಾವಿರ ಕೋಟಿ (10,000 ಕೋಟಿ ಯುವಾನ್) ಕೊಡಿ ಪ್ಲೀಸ್ ಅಂತ ಕೇಳಿದೆ. ಇಲ್ಲಿಯವರೆಗೆ ಪಾಕಿಸ್ತಾನವು ಚೀನಾದ ಬಳಿ 36,000 ಸಾವಿರ ಕೋಟಿ ಸಾಲವನ್ನು ತೆಗೆದುಕೊಂಡಿದೆ. ಇದೀಗ ಮತ್ತೆ ಚೀನಾ ಹತ್ತಿರ ಸಾಲ ಕೇಳಿದೆ ಹೊಸದಾಗಿ ಚೀನಾ ಸಾಲ ಕೊಟ್ಟರೆ ಒಟ್ಟು ಸಾಲ ಮೊತ್ತವು ಬರೋಬ್ಬರಿ 47,900 ಕೋಟಿಗೆ ತಲುಪಲಿದೆ. ಇತ್ತೀಚಿನ ವರ್ಷಗಳಲ್ಲಿ ಸಾಲ ಕೊಡುವಂತೆ ಚೀನಾದ ಬಳಿ ಪಾಕಿಸ್ತಾನ ಮನವಿ ಮಾಡುತ್ತಲ್ಲೇ ಇದೆ.
china and pakistan ಸಾಲ ನಿರಾಕರಿಸಿದ್ದ ಚೀನಾ: ಪಾಕಿಸ್ತಾನವು ಸಾಲ ನೀಡುವಂತೆ ಚೀನಾದ ಬಳಿ ಕೇಳುತ್ತಲ್ಲೇ ಇದೆ. ಇನ್ನೂ ಸ್ವಲ್ಪ ಸಾಲ ಕೊಡುವಂತೆ ರಿಕ್ವೆಸ್ಟ್ ಮಾಡುತ್ತಲ್ಲೇ ಇದೆ. ಆದರೆ, ಕಳೆದ ಬಾರಿ ಮಾಡಿದ್ದ ಮನವಿಯನ್ನು ಚೀನಾ ತಿರಸ್ಕರಿಸಿಯಾಗಿದೆ. ಇದರ ನಡುವೆ ಪಾಕಿಸ್ತಾನವು ತಾನು ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಕೊಟ್ಟಿದ್ದ ಟೈಮ್ ಮುಂದೂಡಿದೆ. ಅಂದರೆ ಸಾಲ ಹಿಂದಿರುಗಿಸುವ ಅವಧಿಯನ್ನು ವಿಸ್ತಿರಿಸಿದೆ.
ಚೀನಾಗೆ ಕೊಡಬೇಕಾಗಿರುವ ಸಾಲವನ್ನು ಪಾಕಿಸ್ತಾನವು 2027ರ ವೇಳೆಗೆ ವಾಪಸ್ ಕೊಟ್ಟರೆ ಸಾಕು ಅಂತ ಚೀನಾ ಹೇಳಿದೆ.
ಪಾಕಿಸ್ತಾನದಲ್ಲಿ ಯಾಕಿಷ್ಟು ಆರ್ಥಿಕ ಸಂಕಷ್ಟ: ಪಾಕಿಸ್ತಾನದಲ್ಲಿ ಕಳೆದ ಎರಡು ವರ್ಷಗಳಿಂದಲೂ ಆರ್ಥಿಕ ಸಂಕಷ್ಟ ಇದೆ. ವಿವಿಧ ದೇಶಗಳ ಬಳಿ ಪಾಕಿಸ್ತಾನ ಸಾಲ ಕೇಳುತ್ತಲ್ಲೇ ಇದೆ. 2022ರಲ್ಲಿ ರಾಜಕೀಯ ಅಶಾಂತಿಯ ಭಾಗವಾಗಿ ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದೆ. ಇದರಿಂದ ತಿಂಗಳುಗಟ್ಟಲೇ ತೀವ್ರ ಆರ್ಥಿಕ ಸಮಸ್ಯೆ ಪಾಕಿಸ್ತಾನದಲ್ಲಿ ಇತ್ತು. ಈಗಲೂ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬಂದಿಲ್ಲ. ಆಹಾರ, ಅನಿಲ ಮತ್ತು ತೈಲ ಬೆಲೆಗಳು ಏರಿಕೆಯಾಗಿವೆ. ವಿವಿಧ ಇಲಾಖೆಗಳನ್ನು ಪಾಕಿಸ್ತಾನ ಈಗಾಗಲೇ ವಿಲೀನ ಮಾಡಿವೆ.
ಅಲ್ಲದೇ 1.50 ಲಕ್ಷಕ್ಕಿಂತ ಹೆಚ್ಚು ಜನರು ಸರ್ಕಾರಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಪಾಕಿಸ್ತಾನವು ಆರು ಸಚಿವಾಲಯಗಳನ್ನು ಈಗಾಗಲೇ ವಿಲೀನ ಮಾಡಿದೆ. ಪಾಕಿಸ್ತಾನದ ರೂಪಾಯಿ ಮೌಲ್ಯವು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ನಿರುದ್ಯೋಗ, ಹಸಿವು ತಾಂಡವಾಡುತ್ತಿದೆ.












Click it and Unblock the Notifications