ವೈಮಾನಿಕ ದಾಳಿ ಭೀತಿ, ಪಾಕಿಸ್ತಾನದ ವಿ. ನಿಲ್ದಾಣಗಳು ಬಂದ್

ಇಸ್ಲಾಮಾಬಾದ್, ಫೆಬ್ರವರಿ 27: ಪುಲ್ವಾಮಾ ಮೇಲಿನ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತದ ಸಂಭಾವ್ಯ ವೈಮಾನಿಕ ದಾಳಿಯ ಭೀತಿಯಿಂದ ಪಾಕಿಸ್ತಾನ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರಮುಖ ನಗರಗಳಾದ ಲಾಹೋರ್, ಮುಲ್ತಾನ್, ಫೈಸಲಾಬಾದ್, ಸಿಯೋಲ್ ಕೋಟ್ ಹಾಗೂ ಇಸ್ಲಾಮಾಬಾದ್ ವಿಮಾನ ನಿಲ್ದಾಣಗಳಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಜಿಯೋ ನ್ಯೂಸ್ ಪ್ರಕಾರ, ಲಾಹೋರ್ ವಿಮಾನ ನಿಲ್ದಾಣ ಸಂಪೂರ್ಣ ಬಂದ್ ಆಗಿದೆ. ಮುಂದಿನ ಆದೇಶದ ತನಕ ಸಂಚಾರ ಸ್ಥಗಿತಗೊಳಿಸಲಾಗಿದೆ. ಚೀನಾದ ಗುವಾಂಗ್ ಜೋ ನಿಂದ ಬರುತ್ತಿದ್ದ ವಿಮಾನವನ್ನು ವಾಪಸ್ ಕಳಿಸಿರುವ ಸುದ್ದಿ ಬಂದಿದೆ. ಪೇಶಾವಾರ್ ನ ಬಚಾ ಖಾನ್ ವಿಮಾನನಿಲ್ದಾಣದಲ್ಲಿ ನಾಗರಿಕ ವಿಮಾನವೊಂದನ್ನು ಟೇಕಾಫ್ ಸಂದರ್ಭದಲ್ಲಿ ನಿಲ್ಲಿಸಲಾಗಿದೆ ಎಂದು ವರದಿ ಬಂದಿದೆ.

Pakistan immediately stops flight operations

ಇದೆ ವೇಳೆ ಭಾರತದಲ್ಲಿ ಜಮ್ಮು ಕಾಶ್ಮೀರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಶ್ರೀನಗರ, ಲೇಹ್, ಪಠಾಣ್‌ಕೋಟ್‌, ಡೆಹ್ರಾಡೂನ್ ವಿಮಾನ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+