• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಪಾಕಿಸ್ತಾನದ ಬಳಿ 125ರಿಂದ 250 ಗ್ರಾಮ್ ತೂಕದ ಅಣುಬಾಂಬ್ ಗಳೂ ಇವೆ'

|

ಲಾಹೋರ್ (ಪಾಕಿಸ್ತಾನ), ಸೆಪ್ಟೆಂಬರ್ 2: ಪಾಕಿಸ್ತಾನದ ಬಳಿ ಟ್ಯಾಕ್ಟಿಕಲ್ (ಹತ್ತಿರದ ಗುರಿಗಳನ್ನು ಧ್ವಂಸ ಮಾಡುವ) ಅಣ್ವಸ್ತ್ರಗಳು ಇದ್ದು, 125ರಿಂದ 250 ಗ್ರಾಮ್ ತೂಕದವಾಗಿವೆ. ಅವುಗಳ ಮೂಲಕ ನಿರ್ದಿಷ್ಟ ಗುರಿಯನ್ನು ಧ್ವಂಸ ಮಾಡಬಹುದು ಎಂದು ಪಾಕ್ ನ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿಕೊಂಡಿದ್ದಾರೆ.

ಜಮ್ಮು- ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಉದ್ವಿಗ್ನ ಸ್ಥಿತಿ ಇರುವ ಸಂದರ್ಭದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ನಂಕಾನ ಸಾಹಿಬ್ ನಲ್ಲಿ ಭಾನುವಾರ ಮಾತನಾಡಿ, ಪಾಕಿಸ್ತಾನದ ಬಳಿ 125ರಿಂದ 250 ಗ್ರಾಮ್ ತೂಕದ ಅಣು ಬಾಂಬ್ ಗಳಿವೆ. ಅವುಗಳ ಮೂಲಕ ಗುರಿಗಳನ್ನು ಧ್ವಂಸ ಮಾಡಬಹುದು ಎಂದಿದ್ದಾರೆ.

ಭಾರತವು ಪಾಕಿಸ್ತಾನದ ಜತೆಗೆ ಯುದ್ಧ ನಡೆಯದಂತೆ ತಡೆಯಬೇಕು. ಹಾಗೊಂದು ವೇಳೆ ಯುದ್ಧವಾದರೆ ಅಣ್ವಸ್ತ್ರ ಹೊಂದಿದ ಎರಡೂ ದೇಶಗಳ ಮಧ್ಯದ ಕೊನೆಯ ಯುದ್ಧ ಇದೇ ಆಗಲಿದೆ ಎಂದು ಹೇಳಿದ್ದಾರೆ.

ಅಂದಹಾಗೆ, ಕಳೆದ ಶುಕ್ರವಾರದಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುತ್ತಾ ವಿದ್ಯುತ್ ಶಾಕ್ ಅನುಭವಿಸಿದ್ದ ಸಚಿವರು ಮಾತನಾಡಿ, ಒಂದು ವೇಳೆ ಪಾಕಿಸ್ತಾನದ ಮೇಲೆ ಬಲವಂತವಾಗಿ ಯುದ್ಧವನ್ನು ಹೇರಿದರೆ ಭಾರತವು ಇಪ್ಪತ್ತೆರಡು ತುಂಡುಗಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮೋದಿ ವಿರುದ್ದ ಮಾತನಾಡುತ್ತಿದ್ದಾಗ ಪಾಕ್ ರೈಲ್ವೆ ಸಚಿವರಿಗೆ ಆಗಿದ್ದೇನು ಗೊತ್ತಾ?

ಭಾರತವು ಎರಡು ದೊಡ್ಡ ತಪ್ಪು ಮಾಡಿದೆ. ಪಾಕಿಸ್ತಾನವು ಅಣ್ವಸ್ತ್ರ ಸ್ಫೋಟ ಮಾಡಲಾರದು ಅಂದುಕೊಂಡು ತಾನು ಮಾಡಿದ್ದು ಹಾಗೂ ಕಾಶ್ಮೀರಿಗಳು ಯಾವುದೇ ಪ್ರತಿಕ್ರಿಯೆ ನೀಡಲಾರರು ಎಂದುಕೊಂಡು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ಎಂದು ಅವರು ಹೇಳಿದ್ದಾರೆ.

ಭಾರತ- ಪಾಕ್ ಮಧ್ಯದ ಎರಡು ರೈಲುಗಳ ಸಂಚಾರವನ್ನು ರದ್ದು ಮಾಡಿದ ರೈಲ್ವೆ ಸಚಿವರು ಮಾತನಾಡಿ, ಫಲಿತಾಂಶ ಬರಬಹುದು ಎಂಬ ಸಾಧ್ಯತೆ ಇರುವಾಗ ಮಾತ್ರ ಭಾರತದ ಜತೆ ಮಾತುಕತೆ ಎಂದಿದ್ದಾರೆ. ವಿಶ್ವಸಂಸ್ಥೆಯ ಪರಿಹಾರದ ಅನ್ವಯ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮುಂದಾದರೆ ಮಾತ್ರ ಭಾರತದ ಜತೆಗೆ ಮಾತುಕತೆ ಎಂದು ಅವರು ಹೇಳಿದ್ದಾರೆ.

English summary
Pakistan has nuclear weapons as small as 125 to 250 grams which are capable of destroying a targeted area, said Pakistan minister Sheikh Rasheed Ahmad in Punjab province on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X