ಪಾಕಿಸ್ತಾನ ಪರಿಸ್ಥಿತಿ ಅಯೋಮಯ, ಹೊಸ ಸರ್ಕಾರ ಆ ಗಯಾ?
ಹೆಸರಿಗೆ ತಕ್ಕಂತೆ ಪಾಕಿಸ್ತಾನದ ಪರಿಸ್ಥಿತಿ ಈಗ ಪಾಪಿಯ ರೀತಿಯೇ ಆಗೋಗಿದೆ. ಅಲ್ಲಿನ ಕೆಟ್ಟ ರಾಜಕೀಯ ವ್ಯವಸ್ಥೆ, ಪಾಕಿಸ್ತಾನದ ಮುಗ್ಧ ಪ್ರಜೆಗಳನ್ನ ಹಿಂಸಿಸುತ್ತಿದೆ. ಇನ್ನು ಅತಿ ಘೋರ ರಾಜಕಾರಣಿಗಳ ಕೈಯಲ್ಲಿ ಸಿಲುಕಿ ಪಾಕಿಸ್ತಾನ ಜನ ಸುಸ್ತಾಗಿ ಹೋಗಿದ್ದಾರೆ. ಇದೇ ಸ್ಥಿತಿಯಲ್ಲಿ ಈಗ ಹೊಸ ಆಘಾತ ಕೂಡ ಎದುರಾಗಿದ್ದು, ಅದರಲ್ಲೂ ಪಾಕಿಸ್ತಾನ ಮತ್ತೊಮ್ಮೆ ಹಿಂಸೆಯ ಕೂಪದಲ್ಲಿ ಬೆಂದು ಹೋಗುವ ಮುನ್ಸೂಚನೆ ಸಿಗುತ್ತಿದೆ.
ಹೌದು, ಪಾಕಿಸ್ತಾನದ ಲೋಕಸಭೆಗೆ ನಡೆದ ಚುನಾವಣೆ ಮುಕ್ತಾಯವಾಗಿದೆ. ಹಾಗೇ ಮತಗಳ ಎಣಿಕೆ ಕಾರ್ಯ ಕೂಡ ಮುಗಿದು ಫಲಿತಾಂಶ ಕೂಡ ಹೊರಬಿದ್ದಿದೆ. ಹೀಗಿದ್ದರೂ ಈಗ ಅಲ್ಲಿ ಹೊಸ ಸರ್ಕಾರ ರಚನೆಗೆ ಪರದಾಟ ಮುಂದುವರಿದಿದೆ. ಅಂದಹಾಗೆ ಪಾಕಿಸ್ತಾನದಲ್ಲಿ ಇದೀಗ ಅತಿ ಹೆಚ್ಚು ಕ್ಷೇತ್ರ ಗೆದ್ದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹರೀಕ್ ಎ ಇನ್ಸಾಫ್ (PTI) ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ. ಪಿಟಿಐ ಪಕ್ಷಕ್ಕೆ ನಿಷೇಧ ಇದ್ದ ಹಿನ್ನೆಲೆ ಪಿಟಿಐ ಬೆಂಬಲಿತ, ಸ್ವತಂತ್ರ ಅಭ್ಯರ್ಥಿಗಳು ಸರ್ಕಾರ ರಚನೆ ಕನಸು ಹೊತಿದ್ದರು. ಹೀಗಾಗಿ ಪಾಕಿಸ್ತಾನ ಜನರು ಕೂಡ ಇಮ್ರಾನ್ ಖಾನ್ ಅವರ ಅಭ್ಯರ್ಥಿಗಳನ್ನ ಬೆಂಬಲಿಸಿದ್ದರು. ಈ ಮಧ್ಯೆ ಹೊಸ ಆಘಾತ ಒಂದು ಎದುರಾಗಿದೆ.

ಇಮ್ರಾನ್ ಖಾನ್ ಪಕ್ಷಕ್ಕೆ ಶಾಕ್
ಪಾಕಿಸ್ತಾನದಲ್ಲಿ ಇದೀಗ ಸರ್ಕಾರ ರಚನೆಗೆ ಬಹುಮತಕ್ಕೆ ದೊಡ್ಡ ಪ್ರಮಾಣದಲ್ಲಿ ಸ್ಥಾನಗಳು, ಅತ್ಯಗತ್ಯವಾಗಿವೆ. ಒಟ್ಟಾರೆ 336 ಸೀಟುಗಳು ಇದ್ದರೆ, ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಗತ್ಯವಿರುವ 169 ಸೀಟುಗಳನ್ನು ಹೊಂದಿಸುವುದು ಕಷ್ಟ. ಹೀಗಾಗಿಯೇ ಪರದಾಟ ಕೂಡ ಶುರುವಾಗಿದೆ. ಅದರಲ್ಲೂ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದಾಗ, ಒಂದು ಪಕ್ಷವಾಗಿ ಮತ್ತು ಒಂದೇ ರೀತಿ ಚಿಹ್ನೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ನೀಡಿತ್ತು. ಹೀಗೆ ಇಮ್ರಾನ್ ಖಾನ್ ಪಕ್ಷದ ವಿರುದ್ಧ ಪಾಕಿಸ್ತಾನದ ಎಲೆಕ್ಷನ್ ಕಮಿಷನ್ ನೀಡಿದ್ದ ತೀರ್ಪು ಆ ಪಕ್ಷಕ್ಕೆ ಮುಳುವಾಗಿತ್ತು. ಅಂತಿಮವಾಗಿ ಎಲ್ಲರೂ ಸ್ವತಂತ್ರ ಅಭ್ಯರ್ಥಿಗಳಾಗಿ ಅಖಾಡ ಪ್ರವೇಶ ಮಾಡಿದ್ದರು.
101 ಸ್ವತಂತ್ರ ಅಭ್ಯರ್ಥಿಗಳ ಜಯ!
ಅಂದಹಾಗೆ ಇದೀಗ ಪಿಟಿಐ ಬೆಂಬಲಿತ 101 ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಪಾಕಿಸ್ತಾನ ಮುಸ್ಲೀಂ ಲೀಗ್-ನವಾಜ್ ಪಕ್ಷವು 75 ಸೀಟು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ 54 ಕ್ಷೇತ್ರ ಗೆದ್ದಿದೆ. ಎಂಕ್ಯೂಎಂ-ಪಿ 17 ಕ್ಷೇತ್ರ & ಇತರ ಪಕ್ಷಗಳು 17 ಸೀಟನ್ನ ಗೆದ್ದಿವೆ. ಒಂದು ಕ್ಷೇತ್ರದ ಫಲಿತಾಂಶ ತಡೆಹಿಡಿಯಲಾಗಿದೆ. ಹೀಗಿದ್ದಾಗ ನವಾಜ್ ಷರೀಫ್ ಅವರ ಪಕ್ಷ & ಪಿಪಿಪಿ ನಡುವೆ ಮೈತ್ರಿ ಮಾತುಕತೆ ಕೂಡ ಬಲು ಜೋರಾಗಿದೆ. ಈ ಮೂಲಕ ಇಮ್ರಾನ್ ಖಾನ್ ಪಕ್ಷ ಬೆಂಬಲಿಸಿದ್ದ ಅಭ್ಯರ್ಥಿಗಳು ದೊಡ್ಡ ಪ್ರಮಾಣದಲ್ಲಿ ನಿರಾಸೆ ಅನುಭವಿಸಿದ್ದಾರೆ.
ಬುಟ್ಟೋ ಮಗನಿಗೆ ಪಟ್ಟಾಭಿಷೇಕ?
ಇನ್ನೊಂದು ಕಡೆ ಪಿಎಂಎಲ್-ಎನ್ & ಪಿಪಿಪಿ ನಡುವೆ ಈಗಾಗಲೇ ಮೈತ್ರಿ ಬಗ್ಗೆ ಮಾತು ಕೂಡ ಭರ್ಜರಿಯಾಗಿ ಆರಂಭ ಆಗಿದೆ. ಹೀಗಾಗಿ ಎರಡೂ ಪಕ್ಷಗಳ ನಡುವೆ ಸಂಬಂಧ ಕುದುರುವ & ಈ ಮೂಲಕ ಇಮ್ರಾನ್ ಖಾನ್ ಪಕ್ಷವನ್ನು ಅಧಿಕಾರದಿಂದ ದೂರ ಇಡುವ, ಪ್ರಯತ್ನಗಳೂ ಸಾಗಿವೆ ಎನ್ನಲಾಗಿದೆ. ಆದರೆ ಮೈತ್ರಿ ಮಾತುಕತೆ ನಡೆದರೂ ಬಿಲಾವಲ್ ಭುಟ್ಟೋ ಝರ್ದಾರಿ ಪ್ರಧಾನಿ ಆಗಬೇಕು ಎಂಬ ಡಿಮ್ಯಾಂಡ್ ಇಟ್ಟಿದೆ ಪಿಪಿಪಿ ಪಕ್ಷ. ಈ ನಡುವೆ ಅಧಿಕಾರವನ್ನು ಎರಡೂ ಪಕ್ಷಗಳು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿವೆ ಎಂಬ ಮಾತು ಕೂಡ ಈಗ ಕೇಳಿಬರುತ್ತಿದೆ.

ಒಟ್ನಲ್ಲಿ ಪಾಕಿಸ್ತಾನ ಮತ್ತೆ ಮತ್ತೆ ತನ್ನ ಸ್ಥಿತಿಯನ್ನ ಜಗತ್ತಿನ ಎದುರು ಬಿಡಿಸಿಡುತ್ತಿದ್ದು, ಹೀಗಾಗಿ ಪಾಕಿಸ್ತಾನ ಏನೇ ಮಾಡಿದ್ರು ಬದಲಾಗಲ್ಲ ಎಂಬ ವಿಚಾರ ಪ್ರಪಂಚಕ್ಕೆ ಮತ್ತೊಮ್ಮೆ ಗೊತ್ತಾಗಿದೆ. ಇನ್ನುಳಿದಂತೆ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಹೆಡೆಮುರಿ ಕಟ್ಟೋದಕ್ಕೆ ಅಗತ್ಯ ಇರುವ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಪಾಕ್ ಸೇನೆ, ಹೀಗೆ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಘೋರ ಹಿಂಸಾಚಾರ ಭುಗಿಲೇಳುವ ಭಯ ಕೂಡ ಆವರಿಸಿದೆ.












Click it and Unblock the Notifications