ಭಾರತದ ಶತ್ರು ಪಾಕಿಸ್ತಾನದ ಹಣೆಬರ ಹಿಂಗಿದೆ ನೋಡಿ!
ಭಾರತ ಒಂದು ಕಡೆ ವಿಶ್ವಗುರು ಆಗುತ್ತಿದ್ರೆ, ಇನ್ನೊಂದು ಕಡೆ ಭಾರತದ ಪಕ್ಕದಲ್ಲೇ ಇರುವ ಪಾಕಿಸ್ತಾನ ಮಾತ್ರ ಬೀದಿಗೆ ಬೀಳುತ್ತಿದೆ. ಹೀಗಿದ್ದಾಗ ಪಾಕಿಸ್ತಾನದಲ್ಲಿ ಚುನಾವಣೆ ನಡೆದಿದ್ದು ರಿಸಲ್ಟ್ ಹೊರಬೀಳಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಈಗ ಹೆಂಗಾಗಿದೆ ಗೊತ್ತಾ? ಕಾಮಿಡಿ ಪೀಸ್ ಪಾಕಿಸ್ತಾನದ ಕಂಪ್ಲೀಟ್ ಕಹಾನಿ ಇಲ್ಲಿದೆ ಓದಿ.
ನಿನ್ನೆ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮತದಾನ ನಡೆದಿದ್ದು ನಿನ್ನೆ ಸಂಜೆಯೇ ಮತ ಎಣಿಕೆ ಕೂಡ ಶುರುವಾಗಿದೆ. ಆದರೆ ಇನ್ನೂ ಪಾಕಿಸ್ತಾನದಲ್ಲಿ ಮತ ಪತ್ರಗಳ ಮೂಲಕ ವೋಟಿಂಗ್ ನಡೆದಿರುವ ಕಾರಣ ಮತ ಎಣಿಕೆ ಭಾರಿ ನಿಧಾನ ಆಗುತ್ತಿದೆ. ಇದರ ಜೊತೆಗೆ ಪಾಪಿ ಪಾಕಿಸ್ತಾನದ ಹಲವು ಭಾಗದಲ್ಲಿ ಹಿಂಸಾಚಾರ ಭುಗಿಲೆದ್ದು, ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಪರಿಸ್ಥಿತಿನ ಸುಧಾರಿಸಲು ಇಂಟರ್‌ನೆಟ್ ಸೇವೆ ಕೂಡ ಸ್ಥಗಿತವಾಗಿದೆ. ಮತ ಎಣಿಕೆಯ ಇತ್ತೀಚಿನ ಮಾಹಿತಿ ಪ್ರಕಾರ ಸಮಬಲದ ಹೋರಾಟ ನಡೆಯುತ್ತಿದೆ.

ಪಾಕಿಸ್ತಾನದಲ್ಲಿ ಭಾರಿ ಸಂಚಲನ
ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷವು, ಇಮ್ರಾನ್ ಖಾನ್ ಅವರ ಪಿಟಿಐ & ಆಸೀಫ್ ಅಲಿ ಜರ್ಧಾರಿ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ತಲಾ ಐದು ಸ್ಥಾನಗಳಲ್ಲಿ ಗೆದ್ದು ಸಮಬಲ ಸಾಧಿಸಿವೆ ಎನ್ನಲಾಗಿದೆ. ಇಷ್ಟೆಲ್ಲದರ ನಡುವೆಯೆ ಪಿಎಂಎಲ್-ಎನ್ & ಪಿಟಿಐ ಮಧ್ಯೆ ಭರ್ಜರಿ ಫೈಟ್ ನಡೆಯುತ್ತಿದೆ ಎನ್ನಲಾಗಿದೆ. ಈ ಪಕ್ಷದ ಅಭ್ಯರ್ಥಿಗಳು ಹೆಚ್ಚು ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಅಕಸ್ಮಾತ್ ಇಮ್ರಾನ್ ಖಾನ್ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದಲ್ಲಿ ಅಲ್ಲೋಲ, ಕಲ್ಲೋಲ ಗ್ಯಾರಂಟಿ ಎನ್ನಲಾಗಿದೆ. ಇದೆ ಪರಿಸ್ಥಿತಿಯಲ್ಲಿ ತಾಂತ್ರಿಕ ಕಾರಣದಿಂದ ಪಾಕಿಸ್ತಾನದ ಮತ ಎಣಿಕೆ ಕೂಡ ನಿಧಾನವಾಗಿದೆ.
ನವಾಜ್ ಷರೀಫ್ ಪರ ಲಾಬಿ?
ಪಾಕಿಸ್ತಾನದಲ್ಲಿ ಮೊಬೈಲ್, ಇಂಟರ್‌ನೆಟ್ ಸಂಪರ್ಕ ಸ್ಥಗಿತ ಮಾಡಿದ್ದರೂ ಹಿಂಸೆ ನಿಂತಿಲ್ಲ. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಅಂದ್ರೆ ಪಿಎಂಎಲ್-ಎನ್ ಪಕ್ಷಕ್ಕೇ ಈ ಬಾರಿ ಅಧಿಕಾರ ದೊರಕಿಸಲು ಲಾಬಿ ನಡೆಯುತ್ತಿದೆ ಎಂಬ ಆರೋಪವೂ ಇದೆ. ಹಾಗೇ ಬಿಗಿ ಭದ್ರತೆ ನಡುವೆ ನಡೆದ ಮತದಾನಕ್ಕೆ ಉಗ್ರರು ತುಂಬಾ ಟಾರ್ಚರ್ ಕೊಟ್ಟಿದ್ದಾರೆ. 12.85 ಕೋಟಿ ಮತದಾರರು ಹಕ್ಕು ಚಲಾಯಿಸಲು ಪಾಕ್‌ನಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿತ್ತು.

ಇಮ್ರಾನ್ ಖಾನ್‌ಗೆ ಸಾಕಷ್ಟು ಅಡ್ಡಿ
ಅಂದಹಾಗೆ ಪಾಕಿಸ್ತಾನದ ಲೆಜೆಂಡ್ ಕ್ರಿಕೆಟರ್ ಕಂ ರಾಜಕಾರಣಿ ಇಮ್ರಾನ್ ಖಾನ್ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಇಮ್ರಾನ್ ಚುನಾವಣೆ ಎದುರಿಸಬಾರದು ಅನ್ನೋ ಕಾರಣ, ಹಲವು ರೀತಿಯ ನಿರ್ಬಂಧ ಹೇರಲಾಗಿತ್ತು ಎಂಬ ಆರೋಪವೂ ಇದೆ. ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಪಕ್ಷದ ವಿರುದ್ಧ ಈ ರೀತಿಯಾಗಿ ನವಾಜ್ ಷರೀಫ್ ಪಕ್ಷ ನಡೆಸಿರುವ ದಬ್ಬಾಳಿಕೆ ಕೂಡ ಪಾಕಿಸ್ತಾನದಲ್ಲಿ ಹಿಂಸೆ ಎಬ್ಬಿಸುವ ಭಯ ಹುಟ್ಟಿಸಿದೆ. ಇಷ್ಟೆಲ್ಲಾ ಅಡೆತಡೆ ನಡುವೆ ಕೂಡ, ನವಾಜ್ ಷರೀಫ್ ಅವರು ಸೇನೆಯ ಬೆಂಬಲದೊಂದಿಗೆ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿದ್ದಾರೆ.
ಅಷ್ಟಕ್ಕೂ ಪಾಕಿಸ್ತಾನದ ಚುನಾವಣೆ ಆಯೋಗದ ಪ್ರಕಾರ ಪಾಕ್ ಸಂಸತ್‌ನ 266 ಸ್ಥಾನಗಳ ಪೈಕಿ 265 ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. 5,121 ಅಭ್ಯರ್ಥಿಗಳು ಮತ್ತು ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ 12,695 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಹೀಗೆ ಪಾಕಿಸ್ತಾನದ ಫಲಿತಾಂಶಕ್ಕೂ ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ರಿಸಲ್ಟ್ ಹೊರಬೀಳುವ ನಿರೀಕ್ಷೆ ಇದೆ. ಹೀಗಿದ್ದಾಗಲೇ ತಾಂತ್ರಿಕ ಕಾರಣದಿಂದ ಪಾಕಿಸ್ತಾನವು ಮತ್ತೊಮ್ಮೆ ಜಗತ್ತಿನ ಎದುರು ಕಾಮಿಡಿ ಪೀಸ್ ಆಗಿದೆ. ಹಾಗೇ ಪಾಕ್ ಚುನಾವಣೆಯಲ್ಲಿ ಈ ಬಾರಿ ಚುನಾವಣಾ ಅಕ್ರಮ ನಡೆಯುವ ಅನುಮಾನ ಕೂಡ ಮೂಡುತ್ತಿದೆ. ಈಗಾಗಲೇ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನ ಒಳಗಿದ್ದಾರೆ.












Click it and Unblock the Notifications