ಇಮ್ರಾನ್ ಮನೆಗೆ ಇರುವೆಯಂತೆ ನುಗ್ಗಿದ ಪೊಲೀಸರು!
ಲಾಹೋರ್: ಇಮ್ರಾನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದು, ಉಗ್ರರಿಗೆ ಮನೆಯೊಳಗೆ ಜಾಗ ಕೊಟ್ಟಿದ್ದಾರೆ ಅನ್ನೋ ಆರೋಪದಡಿ ಅರೆಸ್ಟ್ ಆಗುವ ಸೂಚನೆ ಸಿಕ್ಕಿದೆ. ಇಷ್ಟು ಹೈಡ್ರಾಮಾದ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಇಮ್ರಾನ್ ಖಾನ್ ಮನೆಯನ್ನ ಇರುವೆ ರೀತಿ ಮುತ್ತಿಕೊಳ್ಳುತ್ತಿದ್ದಾರೆ. ಸಾವಿರಾರು ಪೊಲೀಸ್ ಪಡೆ ಒಂದೇ ಬಾರಿ ನುಗ್ಗಿರುವ ವಿಡಿಯೋ ಹಲ್‌ಚಲ್ ಎಬ್ಬಿಸಿದೆ.
ಕಳೆದವಾರ ಅರೆಸ್ಟ್ ಆಗಿದ್ದ ಇಮ್ರಾನ್ ಶನಿವಾರ ತಾನೆ ರಿಲೀಸ್ ಆಗಿದ್ದಾರೆ. ಹೀಗಿದ್ದಾಗ ಮತ್ತೊಮ್ಮೆ ಏನಾದ್ರು ಮಾಡಿ ಇಮ್ರಾನ್‌ಗೆ ಜೈಲು ತೋರಿಸಬೇಕು ಅಂತಾ ಪಾಕಿ ಸರ್ಕಾರ ಪಣತೊಟ್ಟಿದೆ. ಹೀಗಾಗಿ ಒಂದಲ್ಲ ಒಂದು ಅಡ್ಡದಾರಿ ಹುಡುಕಿ ಇಮ್ರಾನ್ ಖಾನ್ ಲಾಕ್ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದರಲ್ಲಿ ಭಯೋತ್ಪಾಕ ಅಸ್ತ್ರ ಕೂಡ ಒಂದಾಗಿದ್ದು, ಇಮ್ರಾನ್ ಮನೆಯೊಳಗೆ 40 ಉಗ್ರರು ಅಡಗಿದ್ದಾರೆ ಎಂದು ನೆಪ ಹೇಳಿ ಖಾನ್ ಮನೆಯ ಸುತ್ತಲೂ ಸಾವಿರಾರು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಪಾಕಿಸ್ತಾನ ಮಾಜಿ ಪ್ರಧಾನಿಗೆ ಕಂಟಕ?
ಇಮ್ರಾನ್ ವಿರುದ್ಧ ಹಲವು ಆರೋಪವಿದೆ. ಅದ್ರಲ್ಲೂ ಇಮ್ರಾನ್ ಖಾನ್ 5 ಸಾವಿರ ಕೋಟಿ ಹಗರಣ ನಡೆಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಮಾಡಿತ್ತು. ಹೊಸ ಗಂಭೀರ ಆರೋಪ ಇಮ್ರಾನ್ ಖಾನ್ ವಿರುದ್ಧ ಕೇಳಿಬಂದಿದ್ದು, ಉಗ್ರರಿಗೆ ಇಮ್ರಾನ್ ಮನೆಯಲ್ಲಿ ಆಶ್ರಯ ಸಿಕ್ಕಿದೆ ಎನ್ನಲಾಗಿದೆ. ಅದ್ರಲ್ಲೂ 40 ಉಗ್ರರು ಇಮ್ರಾನ್ ಮನೆಯಲ್ಲಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಮಾಡಿದೆ. ಹೀಗಾಗಿ ಇಮ್ರಾನ್ ಬೆಂಬಲಿಗರಿಗೆ ಮತ್ತೆ ಭಯ ಶುರುವಾಗಿದ್ದು, ಖಾನ್ (Imran Khan) ಬಂಧನಕ್ಕೆ ಹೊಸ ಕುತಂತ್ರ ಶುರುವಾಗಿದೆ ಅಂತಿದ್ದಾರೆ ಬೆಂಬಲಿಗರು. ಅಷ್ಟರಲ್ಲೇ ಪೊಲೀಸರು ಇಮ್ರಾನ್ ಖಾನ್ ಮನೆ ಸುತ್ತುವರಿದಿರುವ ವಿಡಿಯೋ ವೈರಲ್ ಆಗಿದೆ.
قوم سے میرے خطاب کے دوران مبیّنہ طور پر میری رہائشگاہ کے قرب و جوار کے مناظر! pic.twitter.com/QtotHghPRx
— Imran Khan (@ImranKhanPTI) May 17, 2023
ಇಮ್ರಾನ್ ಜೈಲಿಗೆ ತಳ್ಳಲು ಹೊಸ ಕುತಂತ್ರ?
ಇಂತಹದ್ದೊಂದು ಆರೋಪ ತಳ್ಳಿ ಹಾಕುವಂತಿಲ್ಲ. ಯಾಕಂದ್ರೆ ಈಗಾಗಲೇ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನದ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಹಲವು ಪಿತೂರಿ ಮಾಡಿದೆ. ಅದರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೇ ಪಾಕ್ ಸೇನೆ & ಐಎಸ್‌ಐ ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Imran Khan Arrest) ಪಾಠ ಕಲಿಸಬಹುದು ಎಂಬ ಕುತಂತ್ರ ಅಡಗಿರಬಹುದು.
ಖಾನ್ ಮನೆ ಸುತ್ತಲೂ ಪೊಲೀಸರ ದಂಡು!
ಪಾಕಿಸ್ತಾನದ ಲಾಹೋರ್‌ನಲ್ಲಿ ಜಮಾನ್ ಪಾರ್ಕ್ ಎಂಬ ಪ್ರದೇಶ ಇದ್ದು, ಇದೇ ಜಾಗದಲ್ಲಿ ಇಮ್ರಾನ್ ಖಾನ್ ಮನೆ ಇದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಖಾನ್‌ಗೆ ಸೇರಿದ ಜಮಾನ್ ಪಾರ್ಕ್‌ನ ಮನೆಯನ್ನ ಇದೀಗ ಸುತ್ತುವರಿದಿದ್ದಾರೆ. ಈ ಮೂಲಕ ಇಮ್ರಾನ್ ಖಾನ್‌ಗೆ ಹೊಸ ಕಂಟಕ ಶುರುವಾಗಿದೆ. 40 ಉಗ್ರರನ್ನು ನಮ್ಮ ವಶಕ್ಕೆ ಒಪ್ಪಿಸಿ, ಇಲ್ಲವಾದಲ್ಲಿ ನಿಮ್ಮ ಮನೆ ಒಳಗೆ ನುಗ್ಗುತ್ತೇವೆ ಎಂದು ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಖಾನ್‌ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರ
ಇಮ್ರಾನ್ ವಿರುದ್ಧ ಪಾಕಿಸ್ತಾನ ಸೇನೆ & ಪಾಕಿಸ್ತಾನ ಗುಪ್ತಚರ ಸಂಸ್ಥೆ ISI ಮಸಲತ್ತು ನಡೆಸುತ್ತಿರುವ ಆರೋಪವಿದೆ. ಈ ಸಂದರ್ಭದಲ್ಲಿ ಪಾಕ್ ಸರ್ಕಾರ ಕೂಡ ಇವರ ಜೊತೆ ಕೈಜೋಡಿಸಿದ ಗಂಭೀರ ಆರೋಪ ಕೇಳಿಬರುತ್ತಿದೆ. ಮೇ 9ರ ನಂತರ ಖಾನ್ ಬೆಂಬಲಿಗರು ನಡೆಸಿರುವ ಹಿಂಸೆಗೆ ಅವರನ್ನೇ ಹೊಣೆ ಮಾಡೋಕೆ ಎಲ್ಲಾ ತಯಾರಿ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಾಮೀನು ಪಡೆಯಲು ಇಮ್ರಾನ್ ಖಾನ್ ಲಾಹೋರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರವಾಗಲಿದೆ. ಈ ಮಧ್ಯೆ ಖಾನ್ ವಿರುದ್ಧ ಉಗ್ರರ ಬೆಂಬಲಿಸಿದ ಆರೋಪ ಕೇಳಿಬಂದಿದೆ.
ಒಟ್ನಲ್ಲಿ ಪಾಕಿಸ್ತಾನ ಅರಾಜಕತೆಗೆ ಇನ್ನೊಂದು ಸಾಕ್ಷಿ ಸಿಕ್ಕಿದೆ. ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಅಲ್ಲಿನ ಸರ್ಕಾರ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಆದ್ರೆ ಇದೆಲ್ಲಾ ವರ್ಕೌಟ್ ಆಗದೆ ಇಮ್ರಾನ್ ಪದೇ ಪದೆ ಗೆದ್ದು ಬೀಗುತ್ತಿದ್ದಾರೆ. ಹೀಗಾಗಿ ಉಗ್ರ ಅಸ್ತ್ರ ಪ್ರಯೋಗ ಮಾಡಲಾಗಿದ್ದು, ಎಷ್ಟರಮಟ್ಟಿಗೆ ಯಶಸ್ಸು ಕೊಡುತ್ತೆ ಅನ್ನೋದನ್ನ ಕಾದು ನೋಡಬೇಕು. ಹಾಗೇ ಮತ್ತೊಮ್ಮೆ ಹಿಂಸಾಚಾರ ನಿಯಂತ್ರಿಸಲು ಪಾಕಿಸ್ತಾನದ ಪಡೆಗಳು ಸಿದ್ಧತೆ ಮಾಡಿಕೊಳ್ಳಬೇಕಿದೆ.












Click it and Unblock the Notifications