ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ: 100ಕ್ಕೂ ಹೆಚ್ಚು ಸಾವು

Posted By:
Subscribe to Oneindia Kannada

ಕರಾಚಿ, ಫೆಬ್ರವರಿ 16: ದಕ್ಷಿಣ ಪಾಕಿಸ್ತಾನದ ಸೆಹ್ವಾನ್ ಪಟ್ಟಣದಲ್ಲಿರುವ ಸೂಫಿ ಪಂಗಡಕ್ಕೆ ಸೇರಿದ ಲಾಲ್ ಶಾಬಾಜ್ ಕಲಂದರ್ ಎಂಬ ಪ್ರಾರ್ಥನಾ ಮಂದಿರವೊಂದರಲ್ಲಿ ಗುರುವಾರ ರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸ್ಫೋಟದ ಹೊಣೆಯನ್ನು ಐಎಸ್ಐಎಸ್ ಉಗ್ರವಾದಿ ಸಂಘಟನೆ ಹೊತ್ತುಕೊಂಡಿದೆ.

ಸೋಮವಾರವಷ್ಟೇ, ಲಾಹೋರ್ ನ ಪಂಜಾಬ್ ಪ್ರಾಂತ್ಯದ ವಿಧಾನಸಭೆಯ ಹೊರಭಾಗದಲ್ಲಿ ನಡೆದ ಪ್ರಬಲ ಬಾಂಬ್ ಸ್ಫೋಟಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿ ಹತ್ತು ಮಂದಿ ಮೃತಪಟ್ಟು, 69 ಮಂದಿ ಗಾಯಗೊಂಡಿದ್ದರು.[ಲಾಹೋರ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, ಕನಿಷ್ಠ 10 ಮಂದಿ ಸಾವು]

Over 100 killed in suicide bomb attack at Sufi Shrine in Sehwan town

ಗುರುವಾರ ನಡೆದ ಸ್ಫೋಟದ ಬಗ್ಗೆ ಸಿಂಧ್ ಪ್ರಾಂತ್ಯದ ಪೊಲೀಸರು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ, ಗುರುವಾರ ಸಂಜೆ ಪ್ರಾರ್ಥನೆಗಾಗಿ ನೂರಾರು ಜನರು ಭಾಗಿಯಾಗಿದ್ದರು. ಅವರ ಜೊತೆಯಲ್ಲಿ ತಾನೂ ಪ್ರಾರ್ಥನೆ ಮಾಡುವ ಸೋಗಿನಲ್ಲಿ ಬಂದಿರುವ ಆತ್ಮಹತ್ಯಾ ದಾಳಿಕೋರ ಹೊತ್ತು ಮುಳುಗಿ ರಾತ್ರಿಯಾದಾಗ ತನ್ನನ್ನು ತಾನು ಸ್ಫೋಟಿಸಿಕೊಂಡು ಎಲ್ಲರ ಸಾವಿಗೆ ಕಾರಣನಾದ.

ಘಟನೆಯನ್ನು ಖಂಡಿಸಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ನಜಾಜ್ ಷರೀಫ್, ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 100 people were killed when a suicide bomber detonated explosives at a crowded Sufi shrine in Sehwan town on Thursday, police said.
Please Wait while comments are loading...