Get Updates
Get notified of breaking news, exclusive insights, and must-see stories!

ಯೆಮೆನ್ ನಲ್ಲಿ 300 ವಲಸಿಗರನ್ನು ಸಮುದ್ರಕ್ಕೆ ತಳ್ಳಿದ ಕಳ್ಳ ಸಾಗಣೆದಾರರು

ಯೆಮೆನ್, ಆಗಸ್ಟ್ 11: ಮಾನವ ಕಳ್ಳ ಸಾಗಣೆದಾರರು ಕಳೆದ 24 ಗಂಟೆಗಳಲ್ಲಿ 300ಕ್ಕೂ ಹೆಚ್ಚು ಯೆಮೆನ್ ನಿರಾಶ್ರಿತರನ್ನು ದೋಣಿಯಿಂದ ಸಮುದ್ರಕ್ಕೆ ತಳ್ಳಿರುವ ಅಮಾನವೀಯ ಘಟನೆ ವರದಿಯಾಗಿವೆ

ಪರಿಣಾಮ ಎರಡು ಪ್ರತ್ಯೇಕ ಘಟನೆಗಳಲ್ಲಿ 50 ಕ್ಕೂ ಜನ ಸಾವನ್ನಪ್ಪಿದ್ದು, ಇನ್ನೂ ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ವಿಭಾಗದ ವರದಿ ಹೇಳಿದೆ.

Over 300 refugees thrown into sea in Yemen, more than 50 killed

ಗಲ್ಫ್‌ ರಾಷ್ಟ್ರಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಎರಡು ದೋಣಿಗಳಲ್ಲಿ ಮಾನವ ಕಳ್ಳ ಸಾಗಣೆದಾರರು ಸೊಮಾಲಿಯಾ ಹಾಗೂ ಇಥಿಯೋಪಿಯಾದ ನೂರಾರು ವಲಸಿಗರನ್ನು ಬುಧವಾರ ಬೆಳಿಗ್ಗೆ ಮತ್ತು ಸಂಜೆ ಸಾಗಿಸುತ್ತಿದ್ದರು.

ಈ ವೇಳೆ ಯೆಮೆನ್‌ನಲ್ಲಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿ ಮಾನವ ಕಳ್ಳ ಸಾಗಣೆಗಾರರು ವಲಸಿಗರನ್ನು ಸಮುದ್ರಕ್ಕೆ ಉದ್ದೇಶಪೂರ್ವಕವಾಗಿ ದೂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಬುಧವಾರ ನಡೆದ ಮೊದಲ ಘಟನೆಯಲ್ಲಿ 120ಕ್ಕೂ ಹೆಚ್ಚು ಜನರನ್ನು ಸಮುದ್ರಕ್ಕೆ ತಳ್ಳಲಾಗಿತ್ತು. ಪರಿಣಾಮ 29 ಜನರು ಸಾವನ್ನಪ್ಪಿ 22 ಮಂದಿ ನಾಪತ್ತೆಯಾಗಿದ್ದರು. ಇವರೆಲ್ಲಾ 16 ವರ್ಷ ಆಸುಪಾಸಿನವರು ಎಂದು ವಿಶ್ವಸಂಸ್ಥೆ ಹೇಳಿದೆ.

Over 300 refugees thrown into sea in Yemen, more than 50 killed

ಬುಧವಾರ ಸಂಜೆ ನಡೆದ ಇನ್ನೊಂದು ಘಟನೆಯಲ್ಲಿ 160 ಜನರನ್ನು ಸಮುದ್ರಕ್ಕೆ ತಳ್ಳಲಾಗಿದ್ದು 4 ಜನ ಮಹಿಳೆಯರು ಸೇರಿ 6 ಜನರು ಸಾವನ್ನಪ್ಪಿದ್ದಾರೆ. 13 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಹಾರ್ನ್ ಆಫ್ ಆಫ್ರಿಕಾ ಮತ್ತು ಯೆಮನ್ ನಡುವೆ ಜಲಸಂಧಿ ಇದ್ದು, ವಲಸೆ ಹೋಗುವವರ ಜನಪ್ರಿಯ ಮಾರ್ಗವಾಗಿದೆ. ಯೆಮೆನ್ ನಲ್ಲಿ ಆಂತರಿಕ ಸಂಘರ್ಷ ಜಾರಿಯಲ್ಲಿದ್ದರೂ ಶ್ರೀಮಂತ ಗಲ್ಫ್ ದೇಶಗಳಿಗೆ ವಲಸೆ ಹೋಗುವ ಪರಿಪಾಠವನ್ನು ಬಡ ಆಫ್ರಿಕಾ ರಾಷ್ಟ್ರಗಳು ಈಗಲೂ ಮುಂದುವರಿಸಿವೆ. ಈ ಸಂದರ್ಭ ಈ ಘೋರ ದುರಂತ ಸಂಭವಿಸಿದೆ.

ಚಿತ್ರ ಕೃಪೆ: ಅಲ್ ಜಝೀರಾ-ಟ್ವಿಟ್ಟರ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+