Touchdown Osiris-Rex: ಮಾದರಿ ಸಂಗ್ರಹಿಸಿ ಭೂಮಿಗೆ ಮರಳಿದ 'ನಾಸಾ'ದ ಉಪಗ್ರಹ, ಸಂಪೂರ್ಣ ವಿವರ
ಡಗ್ವೇ, ಸೆಪ್ಟಂಬರ್ 24: ಅಮೆರಿಕಾ ನಾಸಾ (NASA)ದಿಂದ ಉಡಾವಣೆಯಾದ ಉಪಗ್ರಹವು ಏಳು ವರ್ಷಗಳ ನಂತರ ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹದಿಂದ ಸಂಗ್ರಹಿಸಿದ ಅತಿದೊಡ್ಡ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿದೆ. ಭಾನುವಾರ ಉತಾಹ್ ಮರುಭೂಮಿಗೆ ಮಿಷನ್ ಮರಳಿ ಲ್ಯಾಂಡ್ ಆಗಿದ್ದು, ಈ ಮೂಲಕ ನಾಸಾ ಮಾದರಿ ಸಂಗ್ರಹಿಸಿದ ಮೊದಲ ಲ್ಯಾಂಡಿಂಗ್ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಿದೆ.
"ಒಸಿರಿಸ್-ರೆಕ್ಸ್ ಮಿಷನ್ ಕ್ಯಾಪ್ಸುಲ್‌ನ ಟಚ್‌ಡೌನ್ ಮಾದರಿ ಸಂಗ್ರಹಿಸಿ ಭೂಮಿಗೆ ಮರಳುವ ಮೂಲಕ ಏಳು ವರ್ಷಗಳ ಕಾಲ ಕ್ಷುದ್ರಗ್ರಹ ಬೆನ್ನು ಬಿದ್ದಿದ್ದ ಶತಕೋಟಿ ಮೈಲುಗಳ ಕಾರ್ಯಾಚರಣೆ (ಪ್ರಯಾಣ) ಯಶಸ್ವಿ ಅಂತ್ಯಗೊಂಡಿದೆ ಎಂದು ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (NASA) ಲ್ಯಾಂಡಿಂಗ್ ಆದ ಮಿಷನ್ ನ ಫೋಟೊ, ವಿಡಿಯೋ ಸಹಿತ ಮಾಹಿತಿ ಹಂಚಿಕೊಂಡಿದ್ದಾರೆ.

ಕ್ಷುದ್ರಗ್ರಹದ ಬೆನ್ನುವಿನಿಂದ 2020ರಲ್ಲಿ ಸಂಗ್ರಹಿಸಲಾದ ಮಾದರಿಯು ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯು ಸುಮಾರು 250 ಗ್ರಾಂ (ಒಂಬತ್ತು ಔನ್ಸ್) ವಸ್ತುಗಳನ್ನು ಸಂಗ್ರಹಿಸಿದೆ ಎಂದು ನಾಸಾ ಅಂದಾಜು ಮಾಡಿದೆ. ಈ ಹಿಂದಿನ ಎರಡು ಕ್ಷುದ್ರಗ್ರಹ ಮಾದರಿಗಳಿಗಿಂತ ಹೆಚ್ಚು ಈಗ ತಂದಿರುವ ಮಾದರಿ ಅತ್ಯಧಿಕ ಪ್ರಮಾಣದಲ್ಲಿದೆ ಎನ್ನಲಾಗಿದೆ.
ಸಂಗ್ರಹವಾದ ಮಾದರಿಯ ಕುರಿತು ನಾಸಾ ತಪಾಸಣೆ, ಪರಿಶೀಲನೆ ಆರಂಭಿಸಲಿದೆ. ನಾಸಾದಿಂದ ಒಸಿರಿಸ್-ರೆಕ್ಸ್ ಮಿಷನ್ ಕುರಿತ ಇನ್ನಷ್ಟು ಮಾಹಿತಿ ಬಹಿರಂಗಗೊಳ್ಳುವ ಸಾಧ್ಯತೆಗಳು ಇವೆ.
ಭೂಮಿಗೆ ಲ್ಯಾಂಡ್ ಆಗುವುದಕ್ಕೂ ಮೊದಲು ಒಸಿರಿಸ್-ರೆಕ್ಸ್ ಮಾದರಿಯ ಕ್ಯಾಪ್ಸುಲ್ ಅನ್ನು ಬಾಹ್ಯಾಕಾಶ ನೌಕೆಯು ಅನ್ನು 63,000 ಮೈಲಿಗಳಿಂದ ಅಂದರೆ 100,000 ಕಿಲೋ ಮೀಟರ್ ದೂರದಿಂದಲೇ ಬಿಡುಗಡೆ ಮಾಡಿತು. ಮತ್ತೊಂದು ಕ್ಷುದ್ರಗ್ರಹದ ನಂತರ ಮದರ್‌ಶಿಪ್ ಹೊರಟಂತೆ ಸಣ್ಣ ಕ್ಯಾಪ್ಸುಲ್ ನಾಲ್ಕು ಗಂಟೆಗಳ ನಂತರ ಲ್ಯಾಂಡ್ ಆಯಿತು.
ನಾಸಾವು ಈ ಮಿಷನ್ ರಿಕವರಿ ಕಾರ್ಯಾಚರಣೆ ಬಗ್ಗೆ ಅಧಿಕೃತವಾಗಿ ಘೋಷಿಸುತ್ತಿದ್ದಂತೆ ನಾಸಾ ಸಾಧನೆ ಜಗತ್ತಿಗೆ ತಲುಪಿದೆ. ಭೂಮಿಗೆ ಬಂದ ಈ ಮಾದರಿಯು ಆರೇಂಜ್ ಪಟ್ಟೆಯುಳ್ಳದ್ದಾಗಿದ್ದು, ನಿರೀಕ್ಷಿತ ಪ್ರಮಾಣಕ್ಕಿಂತಲೂ ದೊಡ್ಡದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೀಘ್ರದಲ್ಲೇ ಸಮಗ್ರ ವಿಶ್ಲೇಷಣೆ
ನಾಸಾ ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಉಪಗ್ರಹವು ಬೆನ್ನು ಕ್ಷುದ್ರಗ್ರಹದಿಂದ ಸಂಗ್ರಹಿಸಲಾದ ಕಲ್ಲು ಮತ್ತು ಧೂಳನ್ನು ಹೊಂದಿರುವ ಒಸಿರಿಸ್-ರೆಕ್ಸ್ ಮಾದರಿಯ ರಿಟರ್ನ್ ಕ್ಯಾಪ್ಸುಲ್ ಉತಾಹ್‌ನಲ್ಲಿರುವ ತಾತ್ಕಾಲಿಕ ಕ್ಲೀನ್ ರೂಮ್‌ಗೆ ಸಿಬ್ಬಂದಿ ಹೊತ್ತು ತಂದಿದ್ದಾರೆ. 4.5-ಶತಕೋಟಿ-ವರ್ಷ-ಹಳೆಯ ಈ ಮಾದರಿ ಕುರಿತು ಶೀಘ್ರದಲ್ಲೇ ಸಮಗ್ರ ಕ್ಯುರೇಶನ್ ಮತ್ತು ವಿಶ್ಲೇಷಣೆ ನಡೆಸಲಾಗುವುದು ಎಂದು ಭಾನುವಾರ ರಾತ್ರಿ ನಾಸಾ ಪೋಸ್ಟ್ ಮಾಡಿದೆ.












Click it and Unblock the Notifications