ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇತಿಹಾಸದಲ್ಲೇ ಮೊದಲು ಇಂಥ ಸಾಂಕ್ರಾಮಿಕ, ಓಮಿಕ್ರಾನ್‌ ಕೆಟ್ಟ ಪರಿಸ್ಥಿತಿ ಸೃಷ್ಟಿಸಲಿದೆ': ಬಿಲ್‌ ಗೇಟ್ಸ್‌

|
Google Oneindia Kannada News

ವಾಷಿಂಗ್ಟನ್‌, ಡಿಸೆಂಬರ್‌ 22: "ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಸಾಂಕ್ರಾಮಿಕ ರೋಗದ ಅತೀ ಕೆಟ್ಟದಾದ ಹಂತವನ್ನು ಅಥವಾ ಪರಿಸ್ಥಿತಿಯನ್ನು ಸೃಷ್ಟಿ ಮಾಡಬಹುದು," ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ, ಬಿಲಿಯನೇರ್ ಬಿಲ್ ಗೇಟ್ಸ್ ಮಂಗಳವಾರ ಟ್ವೀಟ್‌ ಮೂಲಕ ಎಚ್ಚರಿಕೆ ನೀಡಿದ್ದಾರೆ.

"ಈ ಹಿಂದೆ ಎಂದೂ ಕೂಡಾ ಈ ರೀತಿಯಾಗಿ ಯಾವುದೇ ವೈರಸ್‌ ಹರಡಿಲ್ಲ. ಇತಿಹಾಸದಲ್ಲಿ ಯಾವುದೇ ವೈರಸ್‌ಗಿಂತಲೂ ವೇಗವಾಗಿ ಈ ಓಮಿಕ್ರಾನ್‌ ರೂಪಾಂತರವು ಹರಡುತ್ತಿದೆ," ಎಂದು ಹೇಳಿರುವ ಬಿಲ್ ಗೇಟ್ಸ್, ಜನರು ಕೋವಿಡ್‌ ಬೂಸ್ಟರ್‌, ಕೊರೊನಾ ವೈರಸ್‌ ವಿರುದ್ಧ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಸಾಕಷ್ಟು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಜನರಿಗೆ ತಿಳಿಸಿದ್ದಾರೆ.

ಕೊರೊನಾ ಬಿಟ್ಟಾಕಿ, ಇನ್ನೂ ದೊಡ್ಡ ಗಂಡಾಂತರ ಕಾದಿದೆ: ಬಿಲ್ ಗೇಟ್ಸ್ ಕೊರೊನಾ ಬಿಟ್ಟಾಕಿ, ಇನ್ನೂ ದೊಡ್ಡ ಗಂಡಾಂತರ ಕಾದಿದೆ: ಬಿಲ್ ಗೇಟ್ಸ್

"ಜೀವನವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ತಿಳಿಯುತ್ತಿರುವಾಗಲೇ, ನಾವು ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಕೆಟ್ಟ ಭಾಗವನ್ನು ಪ್ರವೇಶ ಮಾಡುತ್ತಿದ್ದೇವೆ. ಓಮಿಕ್ರಾನ್‌ ರೂಪಾಂತರವು ನಮಗೆಲ್ಲರಿಗೂ ಭಾರೀ ಹೊಡೆತವನ್ನು ನೀಡಿದೆ. ನನ್ನ ಆಪ್ತ ಸ್ನೇಹಿತರಿಗೆ ಈಗ ಓಮಿಕ್ರಾನ್‌ ತಗುಲಿದೆ. ಹಾಗಾಗಿ ನಾನು ನನ್ನ ಬಹುತೇಕ ರಜಾದಿನದ ಯೋಜನೆಗಳನ್ನು ರದ್ದು ಮಾಡಿದ್ದೇನೆ," ಎಂದು ಬಿಲ್ ಗೇಟ್ಸ್ ಟ್ವೀಟ್‌ ಮಾಡಿದ್ದಾರೆ.

"ವಿಶ್ವದ ಎಲ್ಲಾ ದೇಶಗಳಲ್ಲೂ ಓಮಿಕ್ರಾನ್‌ ಹರಡುವ ಸಾಧ್ಯತೆ"

"ವಿಶ್ವದ ಎಲ್ಲಾ ದೇಶಗಳಲ್ಲಿ ಈ ಹೊಸ ರೂಪಾಂತರ ಓಮಿಕ್ರಾನ್‌ ಶೀಘ್ರದಲ್ಲೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಾಧ್ಯತೆ ಇದೆ. ಅಂದರೆ ಈ ಓಮಿಕ್ರಾನ್‌ ಎಲ್ಲಾ ದೇಶಗಳಿಗೂ ಹರಡುವ ಸಾಧ್ಯತೆ ಇದೆ. ಓಮಿಕ್ರಾನ್‌ ನಿಮ್ಮನ್ನು ಹೇಗೆ ಅನಾರೋಗ್ಯಕ್ಕೆ ಒಳಪಡಿಸುತ್ತದೆ ಎಂಬ ಬಗ್ಗೆ ಹಾಗೂ ಈ ಓಮಿಕ್ರಾನ್‌ ಬಗ್ಗೆ ಅಧಿಕ ಮಾಹಿತಿ ತಿಳಿಯುವವರೆಗೂ ನಾವು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದು, ಎಚ್ಚರ ವಹಿಸುವುದು ಅತೀ ಮುಖ್ಯ," ಎಂದು ಬಿಲ್ ಗೇಟ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಕೆಟ್ಟ ಸ್ಥಿತಿ ಸೃಷ್ಟಿಯಾಗಲಿದೆ"

"ಈ ಓಮಿಕ್ರಾನ್‌ ಪ್ರಕರಣವು ಡೆಲ್ಟಾ ರೂಪಾಂತರದ ಅರ್ಧ ಭಾಗದಷ್ಟು ತೀವ್ರತೆಯನ್ನು ಹೊಂದಿದೆ ಎಂದು ಈವರೆಗಿನ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ ಈ ಓಮಿಕ್ರಾನ್‌ ಈವರೆಗಿನ ಎಲ್ಲಾ ವೈರಸ್‌ಗಳಿಗಿಂತ ಅತೀ ಕೆಟ್ಟದಾದ ಪರಿಸ್ಥಿತಿಯನ್ನು ಉಂಟು ಮಾಡಲಿದೆ. ಯಾಕೆಂದರೆ ಈ ಓಮಿಕ್ರಾನ್‌ ಸೋಂಕು ಅತೀ ಅಧಿಕ ಸಾಂಕ್ರಾಮಿಕವಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

ಲಸಿಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ

ಲಸಿಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ

ಇನ್ನು "ಈ ಹೊಸ ರೂಪಾಂತರ ಎಷ್ಟು ವೇಗವಾಗಿ ಹರಡುತ್ತಿದೆ ಎಂಬುವುದು ಈಗಾಗಲೇ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಜನರು ಹೆಚ್ಚು ಎಚ್ಚರವಾಗಿರುವುದು ಅತ್ಯಗತ್ಯ. ಎಷ್ಟು ಜನರಿಗೆ ಲಸಿಕೆಯನ್ನು ಹಾಕಲಾಗಿದೆ ಎಂಬ ಬಗ್ಗೆಯೂ ಈಗ ಹೆಚ್ಚು ಗಮನ ಹರಿಸಬೇಕಾಗಿದೆ. ಜನರು ಗಂಭೀರವಾಗಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಜನರು ಕೋವಿಡ್‌ನಿಂದ ಸಾವನ್ನಪ್ಪುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಲಸಿಕೆಗಳು ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ," ಎಂದು ಹೇಳುವ ಮೂಲಕ ಬಿಲ್‌ ಗೇಟ್ಸ್‌ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ.

ಒಳ್ಳೆ ಸುದ್ದಿಯೂ ಇದೆ: ಕೋವಿಡ್‌ 2022 ರಲ್ಲಿ ಅಂತ್ಯ

ಒಳ್ಳೆ ಸುದ್ದಿಯೂ ಇದೆ: ಕೋವಿಡ್‌ 2022 ರಲ್ಲಿ ಅಂತ್ಯ

ಉತ್ತಮ ಸುದ್ದಿಯೂ ಇದೆ ಎಂದು ಕೂಡಾ ಬಿಲ್‌ ಗೇಟ್ಸ್‌ ಈ ಸಂದರ್ಭದಲ್ಲೇ ಹೇಳಿದ್ದಾರೆ. "ಓಮಿಕ್ರಾನ್‌ ರೂಪಾಂತವು ಅತೀ ಶೀಘ್ರವಾಗಿ ಹರಡುತ್ತದೆ ಹೌದು. ಆದರೆ ಓಮಿಕ್ರಾನ್‌ ಹೆಚ್ಚು ಸಮಯದವರೆಗೆ ಉಳಿಯಲಾರದು. ಮೂರು ತಿಂಗಳಿನಲ್ಲೇ ಓಮಿಕ್ರಾನ್‌ ಹರಡುವುದು ಕಡಿಮೆ ಆಗುತ್ತದೆ. ಓಮಿಕ್ರಾನ್‌ ರೂಪಾಂತರ ಹರಡುವ ಸಮಯವು ಬಹಳಷ್ಟು ಕೆಟ್ಟದಾಗಬಹುದು. ಆದರೆ ನಾವು ಸರಿಯಾದ ರೀತಿಯಲ್ಲಿ ಕ್ರಮವನ್ನು ಕೈಗೊಂಡರೆ, ಕೊರೊನಾ ವೈರಸ್‌ ಸೋಂಕು 2022 ರಲ್ಲಿ ಕೊನೆಯಾಗಬಹುದು ಎಂಬುವುದು ನನ್ನ ನಂಬಿಕೆ," ಎಂದು ಬಿಲ್ ಗೇಟ್ಸ್ ಅಭಿಪ್ರಾಯಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Omicron spreading faster than any virus in history, could lead to worst part of pandemic Says Bill Gates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X