ನೂಪುರ್ ಶರ್ಮಾ ಹೇಳಿಕೆ ವಿವಾದದ ಬಗ್ಗೆ ಚೀನಾ ಪ್ರತಿಕ್ರಿಯೆ
ಬೀಜಿಂಗ್, ಜೂನ್ 14: ಪ್ರವಾದಿ ಮುಹಮ್ಮದ್ ಬಗ್ಗೆ ನೂಪುರ್ ಶರ್ಮಾ ಮಾಡಿದ್ದ ಕಾಮೆಂತ್ ಹಾಗೂ ಅದರ ಸುತ್ತಲಿನ ವಿವಾದ ಈಗಾಗಲೇ ಗಡಿಯನ್ನು ದಾಟಿವೆ. ಹಲವಾರು ಗಲ್ಫ್ ದೇಶಗಳು ಅವರ ಹೇಳಿಕೆಗಳನ್ನು ಖಂಡಿಸಿವೆ. ಇದೀಗ ನೆರೆಯ ರಾಷ್ಟ್ರವಾದ ಚೀನಾ ಕೂಡ ಈ ವಿವಾದದ ಕುರಿತು ಹೇಳಿಕೆ ನೀಡಿದೆ.
ನೂಪುರ್ ಶರ್ಮಾ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಸೋಮವಾರ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಎಲ್ಲಾ ಧರ್ಮಗಳು ಮತ್ತು ನಾಗರಿಕತೆಗಳನ್ನು ಗೌರವಿಸಬೇಕು ಎಂದು ಹೇಳಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆಡಳಿತವು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತದೆ ಎಂದು ಬೀಜಿಂಗ್ ಭರವಸೆ ವ್ಯಕ್ತಪಡಿಸಿದೆ.
ಅಸ್ಥಿರವಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಉಯ್ಗುರ್ ಮುಸ್ಲಿಮರ ಮೇಲೆ ಸಾಮೂಹಿಕ ದಮನದ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬೀಜಿಂಗ್, "ವಿಭಿನ್ನ ನಾಗರಿಕತೆಗಳು ಮತ್ತು ಧರ್ಮಗಳು ಪರಸ್ಪರ ಗೌರವಿಸಬೇಕು ಮತ್ತು ಸಮಾನವಾಗಿ ಒಟ್ಟಿಗೆ ಬದುಕಬೇಕು ಎಂದು ಚೀನಾ ಯಾವಾಗಲೂ ನಂಬುತ್ತದೆ" ಎಂದು ಹೇಳಿದೆ.

ಚೀನಾದ ಪ್ರತಿಕ್ರಿಯೆ
ಬಿಜೆಪಿ ನಾಯಕರ ಕಾಮೆಂಟ್‌ಗಳಿಂದ ಉಂಟಾದ ಪ್ರತಿಭಟನೆಗಳ ಕುರಿತು ವಾಂಗ್ ವೆನ್ಬಿನ್ ಮಾಧ್ಯಮಗೋಷ್ಠಿಯಲ್ಲಿ ಚೀನಾದ ಅಧಿಕೃತ ಮಾಧ್ಯಮದ ಪ್ರಶ್ನೆಗೆ "ನಾವು ಸಂಬಂಧಿತ ವರದಿಗಳನ್ನು ಗಮನಿಸಿದ್ದೇವೆ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಾಗುವುದು ಎಂದು ಭಾವಿಸುತ್ತೇವೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿದರು.
ಚೀನಾದ ವಕ್ತಾರರು, "ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದನ್ನು ತ್ಯಜಿಸುವುದು ಮುಖ್ಯವಾಗಿದೆ. ಒಬ್ಬರ ಸ್ವಂತ ನಾಗರಿಕತೆ ಮತ್ತು ಇತರ ನಾಗರಿಕತೆಗಳ ನಡುವಿನ ವ್ಯತ್ಯಾಸಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ನಾಗರಿಕತೆಗಳ ನಡುವೆ ವಿನಿಮಯ, ಸಂಭಾಷಣೆ ಮತ್ತು ಸಾಮರಸ್ಯದ ಸಹಬಾಳ್ವೆಯನ್ನು ಉತ್ತೇಜಿಸಬೇಕು" ಎಂದಿದ್ದಾರೆ.

ಇಸ್ಲಾಮಿಕ್ ರಾಷ್ಟ್ರಗಳ ಒತ್ತಡ
ವಾಂಗ್ ಅವರ ಕಾಮೆಂಟ್‌ಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇರಾನ್, ಸೌದಿ ಅರೇಬಿಯಾ, ಕತಾರ್ ಮತ್ತು ಕುವೈತ್‌ನಂತಹ ಹಲವಾರು ದೇಶಗಳು ಕಳೆದ ತಿಂಗಳು ಟಿವಿ ಸುದ್ದಿ ಚರ್ಚೆಯೊಂದರಲ್ಲಿ ನೂಪುರ್ ಶರ್ಮಾ ಮಾಡಿದ ಕಾಮೆಂಟ್‌ಗಳನ್ನು ಟೀಕಿಸಿದ್ದವು.
ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಇಸ್ಲಾಮಿಕ್ ಸಮುದಾಯ ಮತ್ತು ಹಲವಾರು ಗಲ್ಫ್ ರಾಷ್ಟ್ರಗಳಿಂದ ಒತ್ತಡ ಹೆಚ್ಚಾದ ಬೆನ್ನಲ್ಲೆ ಬಿಜೆಪಿ ತನ್ನ ವಕ್ತಾರರಾಗಿದ್ದ ನೂಪುರ್ ಶರ್ಮಾ ಮತ್ತು ದೆಹಲಿ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ಅವರನ್ನು ಉಚ್ಚಾಟಿಸಿತು.

ದೇಶ ವಿದೇಶದಿಂದಲ್ಲೂ ಕ್ರಮಕ್ಕೆ ಒತ್ತಾಯ
ನೂಪುರ್ ಶರ್ಮಾ ಮಾಡಿದ ಕಾಮೆಂಟ್‌ಗಳ ವಿರುದ್ಧ ಶುಕ್ರವಾರ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು, ಮಾತ್ರವಲ್ಲದೆ ಜೂನ್ 10 ರಂದು 14 ಒಟ್ಟು ಭಾರತೀಯ ರಾಜ್ಯಗಳಲ್ಲಿ ಪ್ರದರ್ಶನಗಳು ನಡೆಯುತ್ತಿವೆ. ಹಲವಾರು ಆಂದೋಲನಗಳು ಹಿಂಸಾಚಾರಕ್ಕೆ ತಿರುಗಿದ್ದವು. ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆಯ ವರದಿಗಳು ಭಾರತದ ವಿವಿಧ ಭಾಗಗಳಿಂದ ಹೊರಹೊಮ್ಮಿವೆ. ಈ ಪ್ರತಿಭಟನೆಯ ಹಿಂಸಾಚಾರದಲ್ಲಿ ರಾಂಚಿಯಲ್ಲಿ ಇಬ್ಬರು ಸಾವನ್ನಪ್ಪಿರುವ ವರದಿ ಬಂದಿದೆ.

ನೂಪುರ್ ಗಲ್ಲಿಗೇರಿಸಲು ಆಗ್ರಹ
ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಯಂತ್ರಿಸಲು ಭಾರತೀಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಆಂದೋಲನಕಾರರನ್ನು ಮನೆಗಳನ್ನು ಧ್ವಂಸ ಮಾಡಲಾಗಿದೆ ಎನ್ನುವ ಆರೋಪಗಳು ಇವೆ. ನೂಪುರ್ ಶರ್ಮಾ ಅವರ ಅಮಾನತು ಸಾಕಾಗುವುದಿಲ್ಲ ಮತ್ತು ಅವರನ್ನು ಬಂಧಿಸಬೇಕು ಎಂದು ಅನೇಕ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಆದರೆ ಕೋಪಗೊಂಡ ಕೆಲವು ಪ್ರತಿಭಟನಾಕಾರರು ಅವರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.
ಟಿವಿ ಸಂದರ್ಶನದ ವೇಳೆ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇಸ್ಲಾಮಿಕ್ ರಾಷ್ಟ್ರಗಳು ಮಾತ್ರವಲ್ಲದೇ ದೇಶದಲ್ಲೂ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಬೃಹತ್ ಪ್ರತಿಭಟನೆಯ ಮೂಲಕ ನೂಪುರ್ ಶರ್ಮಾ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ.












Click it and Unblock the Notifications